ಹುಬ್ಬಳ್ಳಿ-ಬೆಂಗಳೂರು ನಡುವೆ ಪ್ರತಿದಿನ ಏರ್‌ ಇಂಡಿಯಾ ಸೇವೆ

ಹುಬ್ಬಳ್ಳಿ, ಜೂನ್ 03 : ಪ್ರಯಾಣಿಕರ ಸಂಖ್ಯೆ ಹೆಚ್ಚಿದ್ದರಿಂದ ಏರ್ ಇಂಡಿಯಾ ಬೆಂಗಳೂರು-ಹುಬ್ಬಳ್ಳಿ ನಡುವೆ ಪ್ರತಿದಿನದ ವಿಮಾನ ಸಂಚಾರವನ್ನು ಆರಂಭಿಸಿದೆ. ಮೊದಲು ವಾರದಲ್ಲಿ ನಾಲ್ಕು ದಿನ ವಿಮಾನ ಸಂಚಾರವಿತ್ತು.

ಜೂನ್ 2ರಿಂದಲೇ ಬೆಂಗಳೂರು-ಹುಬ್ಬಳ್ಳಿ ನಡುವೆ ಪ್ರತಿದಿನದ ವಿಮಾನ ಸೇವೆಯನ್ನು ಏರ್ ಇಂಡಿಯಾ ಆರಂಭಿಸಿದೆ. ಏರ್‌ ಬಸ್ 319 ಉಭಯ ನಗರಗಳ ನಡುವೆ ಪ್ರತಿದಿನ ಸಂಚಾರ ನಡೆಸಲಿದೆ.

2017ರ ಡಿಸೆಂಬರ್‌ನಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣ ಅಭಿವೃದ್ಧಿಗೊಂಡಾಗ ಏರ್ ಇಂಡಿಯಾ ಬೆಂಗಳೂರು-ಹುಬ್ಬಳ್ಳಿ- ಮುಂಬೈ ನಡುವೆ ವಿಮಾನ ಸೇವೆ ಆರಂಭಿಸಿತ್ತು. ವಾರದಲ್ಲಿ ನಾಲ್ಕು ದಿನ ಈ ವಿಮಾನ ಹಾರಾಟ ನಡೆಸುತ್ತಿತ್ತು.

Now Airindia daily flight between Hubballi-Bengaluru

ಪ್ರಸ್ತುತ ಹುಬ್ಬಳ್ಳಿಗೆ ಪ್ರಯಾಣಿಸುವ ಜನರ ಸಂಖ್ಯೆ ಹೆಚ್ಚಾಗಿದೆ. ಆದ್ದರಿಂದ, ಏರ್ ಇಂಡಿಯಾ ಬೆಂಗಳೂರು-ಹುಬ್ಬಳ್ಳಿ ನಡುವೆ ಪ್ರತಿದಿನದ ವಿಮಾನ ಸೇವೆಯನ್ನು ವಿಸ್ತರಣೆ ಮಾಡಿದೆ.

ಏರ್ ಇಂಡಿಯಾ ಹೊರತುಪಡಿಸಿ ಸ್ಪೈಸ್ ಜೆಟ್, ಇಂಡಿಗೋ ಏರ್, ಸ್ಟಾರ್ ಏರ್ ಸೇರಿದಂತೆ ವಿವಿಧ ಕಂಪನಿಗಳು ಬೆಂಗಳೂರು-ಹುಬ್ಬಳ್ಳಿ ನಡುವೆ ಸಂಚಾರ ನಡೆಸುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+