ನರಗುಂದ ಬಂಡಾಯಕ್ಕೆ 36: ಹುಬ್ಬಳ್ಳಿಯಲ್ಲಿ ಕರಾಳ ದಿನ

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ,ಜುಲೈ,21: ರೈತ ಹುತಾತ್ಮ ದಿನದಂಗವಾಗಿ ಗುರುವಾರ ನಗರದ ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ ಕಳಸಾ-ಬಂಡೂರಿ ಹೋರಾಟಗಾರರು ಕಪ್ಪು ಧ್ವಜ ಪ್ರದರ್ಶಿಸಿದರು.

ನಂತರ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಹೋರಾಟಗಾರರು ಹಸಿರು ಶಾಲು ಹೊದ್ದುಕೊಂಡು ನಗರದಲ್ಲಿ ಮೆರವಣಿಗೆಯಲ್ಲಿ ಸಾಗಿದರು. ಹೋರಾಟಗಾರರಿಗೆ ವಕೀಲರ ಸಂಘ, ವಾಹನ ಮಾಲೀಕರ, ಚಾಲಕರ ಸಂಘ ಸೇರಿದಂತೆ ನಗರ ಹಲವಾರು ಸಂಘಟನೆಗಳು ಬೆಂಬಲ ಸೂಚಿಸಿದ್ದವು.[ಹೋರಾಟಗಾರನ ಕಣ್ಣಿನಲ್ಲಿ ಮಹದಾಯಿ ಹೋರಾಟದ ಕಥನ]

Nargund rebellion turns 36: Black Day in Hubballi

ಏನಿದು ರೈತ ಹುತಾತ್ಮ ದಿನ ?:
1980 ರ ಜುಲೈ 21 ರಂದು ಅಂದರೆ ಇಂದಿಗೆ ಸರಿಯಾಗಿ 36 ವರ್ಷಗಳ ಹಿಂದೆ ನರಗುಂದ ಪಟ್ಟಣದಲ್ಲಿ ಮಲಪ್ರಭಾ ನದಿಯ ಬೆಟರಮೆಂಟ್ ಲೇವಿಯ ಹೆಚ್ಚಳ ವಿರೋಧಿಸಿ ಪ್ರತಿಭಟನೆ ಹಮ್ಮಿಕೊಂಡಿದ್ದರು.[ಏನಿದು ಕಳಸಾ-ಬಂಡೂರಿ ಯೋಜನೆ?]

Nargund rebellion turns 36: Black Day in Hubballi

ಅಂದು ಪ್ರತಿಭಟನಾಕಾರರ ಮೇಲೆ ಪೊಲೀಸರು ಗೋಲಿಬಾರ್ ಮಾಡಿದ್ದರು. ಆ ಗೋಲಿಬಾರ್ ನಲ್ಲಿ ಇಬ್ಬರು ರೈತರು ಮೃತಪಟ್ಟಿದ್ದರು. ಅಂದಿನಿಂದ ನರಗುಂದ ಬಂಡಾಯ ಎಂದೇ ಹೆಸರಾಗಿರುವ ರೈತರ ಪ್ರತಿಭಟನೆ ಇಂದೂ ಕೂಡ ಕಳಸಾ-ಬಂಡೂರಿ ರೂಪದಲ್ಲಿ ಮುಂದುವರಿದಿದೆ. ನರಗುಂದ ಪಟ್ಟಣದಲ್ಲಿ ರೈತ ಹುತಾತ್ಮ ಸ್ಮಾರಕ ನಿರ್ಮಿಸಲಾಗಿದೆ. ಹೀಗಾಗಿ ಜುಲೈ21 ನ್ನು ರೈತ ಹುತಾತ್ಮ ದಿನ ಎಂದು ಉತ್ತರ ಕರ್ನಾಟಕ ಕೆಲವು ಜಿಲ್ಲೆಗಳಲ್ಲಿ ಆಚರಿಸಲಾಗುತ್ತಿದೆ.

Nargund rebellion turns 36: Black Day in Hubballi

ರೈತರ ಕೂಗಿಗೆ ಇಂದಿಗೂ ಉತ್ತರ ಸಿಕ್ಕಿಲ್ಲ. ಅಂದು ನರಗುಂದ ಬಂಡಾಯ ಇಂದು ಕಳಸಾ- ಬಂಡೂರಿ ಹೋರಾಟದ ರೂಪ ತಳೆದಿದೆ. ಕುಡಿಯುವ ನೀರಿಗಾಗಿ ಉತ್ತರ ಕರ್ನಾಟಕದ ಜನ ಕಳೆದ ಒಂದು ವರ್ಷದಿಂದ ನಿರಂತರ ಹೋರಾಟ ನಡೆಸುತ್ತಿದ್ದರೂ ಯಾವ ಸರ್ಕಾರಗಳು ಸ್ಪಂದಿಸಿಲ್ಲ.

Nargund rebellion turns 36: Black Day in Hubballi

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Hubballi: The historical Nargund rebellion turn 36 on 21, July 2016. July 21, 1980 is indeed an important day in the history of farmers' movement in India. It was on this day the ‘Nargund Bandaya' (Nargund rebellion) took place at Nargund, a taluk now in Gadag district. Kalasa Banduri activists observed Black day in Hubballi.
Please Wait while comments are loading...