ಹುಬ್ಬಳ್ಳಿ: ನಾಲ್ವರು ಕೊಲೆ ಆರೋಪಿಗಳ ಬಂಧನ

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ, ಆಗಸ್ಟ್, 27- ಬುಧವಾರ ಮಧ್ಯರಾತ್ರಿ ಅವಳಿ ನಗರಿಯನ್ನು ಬೆಚ್ಚಿ ಬೀಳಿಸಿದ ಕೊಲೆ ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ಅಶೋಕನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹುಬ್ಬಳ್ಳಿಯ ಗೋಪನಕೊಪ್ಪ ಅಮರ ಕಾಲೋನಿಯಲ್ಲಿ ಸದ್ದಾಂ ಕಿರ್ದಿ ಮತ್ತು ಇತರೆ 9 ಮಂದಿ ಸೇರಿ ಮಹ್ಮದ್ ತೌಸಿಫ್ ನ ಮನೆಗೆ ಬಂದು ತಲವಾರ್ ಮತ್ತು ಚಾಕುವಿನಿಂದ ಹಲ್ಲೆ ನಡೆಸಿದ್ದರು.

ಈ ಸಂದರ್ಭದಲ್ಲಿ ಜಗಳ ಬಿಡಿಸಲು ಬಂದ ತೌಸಿಫ್ ನ ಸಹೋದರರಾದ ಮಹ್ಮದ್ ಆಜಾದ್ ಹಾಗೂ ಮಹ್ಮದ್ ವಾಸಿಂ ಅಕ್ರಂ ಅವರನ್ನು ಬೈದಾಡಿ, ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಈ ಘಟನೆಯಲ್ಲಿ ಮಹ್ಮದ್ ತೌಸಿಫ್ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದ.[ಹುಬ್ಬಳ್ಳಿ-ಧಾರವಾಡದಲ್ಲೇ ಬೀಡು ಬಿಟ್ಟಿರುವ ಮನೆಗಳ್ಳರು]

Hubballi murderers

ಬಂಧಿತರು: ಅಬ್ದುಲ್ ರಜಾಕ್ ಸದ್ದಾಂ ಮಹ್ಮದ್ ಹನೀಫ್ ಕಿರ್ದಿ, ಸೈಯದ್ ಮಹ್ಮದ್ ಹನೀಫ್ ಕಿರ್ದಿ, ನಾಗರಾಜ ವೀರೇಶ ಬಡಿಗೇರ, ಬಶೀರ್ ಅಬ್ದುಲ್ ರಜಾಕ್ ನದಾಫ್ ಬಂಧಿತರು. ಕೊಲೆಗೆ ಬಳಸಿದ ಒಂದು ತಲವಾರ್, ಚಾಕು, ಎರಡು ಬಡಿಗೆ ಮತ್ತು ಎರಡು ಪಲ್ಸರ್ ಬೈಕ್ ಗಳನ್ನು ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದೆ.[ಹುಬ್ಬಳ್ಳಿಯಲ್ಲಿ ಸಹೋದರರ ಮೇಲೆ ಹಲ್ಲೆ, ಒಬ್ಬನ ಕೊಲೆ]

ಕೊಲೆ ಆರೋಪಿಗಳು ಸುಳ್ಳ ಗ್ರಾಮದ ರೋಡ್ ನಿಂದ ಹುಬ್ಬಳ್ಳಿ ಕಡೆಗೆ ಬರುತ್ತಿದ್ದಾರೆ ಎಂಬ ಮಾಹಿತಿ ದೊರೆತು, ಸುಳ್ಳದ ರೋಡ್ ಹಳ್ಳದ ಹತ್ತಿರ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಅಶೋಕನಗರ ಪಿಐ ಜಗದೀಶ ಹಂಚಿನಾಳ, ಉಪನಗರ ಪಿಐ ಎಮ್.ಪಿ.ಸರವಗೋಳ. ಅಶೋಕ ಬಿ.ಎಸ್.ಪಿ ಪಿಎಸ್ ಐ (ಕಾವಸು), ಸಿಬ್ಬಂದಿ ಎ.ಎಸ್.ಐ. ತಮ್ಮಣ್ಣ.ಎಮ್.ಪಿ. ಎಸ್.ಬಿ.ಬೂದಣ್ಣವರ, ವಿ.ಆರ್.ಸುರವೆ, ಮಂಜುನಾಥ ಏಣಗಿ, ಬಿ.ಎನ್.ಬಾಂವಿಹಾಳ, ಎಫ್.ವೈ.ಸುಣಗಾರ, ಮಂಜುನಾಥ ಯಲ್ಲಕ್ಕನವರ, ಬಿ.ಸಿ.ಹಾರುಗೊಪ್ಪ ಆರೋಪಿಗಳನ್ನು ಹಿಡಿಯುವಲ್ಲಿ ಶ್ರಮಿಸಿದ್ದು, ಪರಾರಿಯಾಗಿರುವ ಇತರ ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
4 arrested in Hubballi Mahmad Tousif murder case. Saddam kirdi and other 9 accused murdered Mahmad Tousif with talwar, knife and other weapons. Two pulsar bike also seized by police.
Please Wait while comments are loading...