ನೇಕಾರರು ರಾಜಕೀಯಕ್ಕೆ ಬರುವುದು ಅಪರಾಧವಲ್ಲ : ಉಮಾಶ್ರೀ

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ, ನವೆಂಬರ್, 5 : ನೇಕಾರ ಸಮಾಜದವರು ರಾಜಕೀಯಕ್ಕೆ ಬರುವುದು ಅಪರಾಧವೇನಲ್ಲ. ನಾನು ಒಬ್ಬಳೇ ಮಾತ್ರ ಶಾಸಕಿಯಾಗಿದ್ದೇನೆ. ಮುಂದಿನ ದಿನಗಳಲ್ಲಿ ಕನಿಷ್ಠ 10 ನೇಕಾರರು ಶಾಸಕರಾಗಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಹೇಳಿದ್ದಾರೆ.

ಅವರು ಸ್ಥಳೀಯ ಗೋಕುಲ ಗಾರ್ಡನ್‌ನಲ್ಲಿ ನಡೆದ ಅಖಿಲ ಭಾರತೀಯ ಸ್ವಕುಳಿಸಾಳಿ ಸಮಾಜ(ನೇಕಾರ)ದ 13ನೇ ಮಹಾಪರಿಷತ್ ನ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಶುಕ್ರವಾರ ರಾತ್ರಿ ಮಾತನಾಡುತ್ತಿದ್ದರು.

More weavers should come to politics : Umashree

ಮನುಕುಲಕ್ಕೆ ವಸ್ತ್ರವನ್ನು ಕೊಟ್ಟವರೆಂದರೆ ನೇಕಾರ ಸಮಾಜದವರು. ಈ ಸಮಾಜದವರು ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕ ಕ್ಷೇತ್ರಗಳಲ್ಲಿ ಮುಂದುವರೆಯಬೇಕು. ಇದಕ್ಕಾಗಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಉಮಾಶ್ರೀ ಪ್ರತಿಪಾದಿಸಿದರು.
More weavers should come to politics : Umashree

ಈಗಾಗಲೇ ನೇಕಾರ ಸಮಾಜದವರ ಸಂಖ್ಯೆಯು ಕಡಿಮೆಯಾಗುತ್ತಿದೆ. ಶೇ.20ರಷ್ಟು ಮಾತ್ರ ನೇಕಾರಿಕೆ ಮಾಡಿಕೊಂಡಿದ್ದಾರೆ. ಉಳಿದವರು ವ್ಯಾಪಾರ, ವ್ಯವಹಾರ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ತಮ್ಮ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಸರಕಾರದ ಮಟ್ಟದಲ್ಲಿ ನೇಕಾರರ ಸಂಖ್ಯೆ ಗುರುತಿಸಿಕೊಳ್ಳುವಂತಾಗಬೇಕು ಎಂದರು.
More weavers should come to politics : Umashree

ಶೋಭಾಯಾತ್ರೆ : ಉದ್ಘಾಟನಾ ಸಮಾರಂಭಕ್ಕೂ ಮುನ್ನ ನಗರದ ದಿವಟೆ ಓಣಿ ಈಶ್ವರ ದೇವಸ್ಥಾನದಿಂದ ವಾದ್ಯಮೇಳ, ಝಾಂಜ್ ಮೇಳ, ಗೊಂಬೆ ಮೇಳ, ಆನೆ, ಕುದುರೆ ಸವಾರಿಯೊಂದಿಗೆ ಶೋಭಾಯಾತ್ರೆ ಮಾಡಲಾಯಿತು.
Anwar Mudhol

ಹುಡಾಗೆ ಅನ್ವರ ಮುಧೋಳ ಅಧ್ಯಕ್ಷ : ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ(ಹುಡಾ)ಕ್ಕೆ ಹಿರಿಯ ಕಾಂಗ್ರೆಸ್ ಧುರೀಣ ಅನ್ವರ ಮುಧೋಳ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಅಧ್ಯಕ್ಷರಾಗಿ ನೇಮಕಗೊಂಡ ನಂತರ ಪ್ರಥಮ ಬಾರಿಗೆ ನಗರಕ್ಕೆ ಆಗಮಿಸಿದ ಮುಧೋಳ ಅವರನ್ನು ನಗರದ ಹೊರವಲಯದ ಗಬ್ಬೂರ ಬೈಪಾಸ್ ನಲ್ಲಿ ಅಪಾರ ಸಂಖ್ಯೆಯ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಸ್ವಾಗತಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Weavers in Karnataka should come to politics in more numbers, they should come up socially and economically, said Umashree, minister for Women and child development, Kannada language and culture. She was speaking to media in Hubballi.
Please Wait while comments are loading...