ಭ್ರಷ್ಟಾಚಾರ ನಡೆದಿರುವ ಬಗ್ಗೆ ಯಾವುದೇ ದಾಖಲೆ, ಸಾಕ್ಷಿ ಇಲ್ಲ- ಸಂತೋಷ ಲಾಡ್
ಹುಬ್ಬಳ್ಳಿ, ಆಗಸ್ಟ್ 13: ರಾಜ್ಯದಲ್ಲಿ ಹೊಸ ಸರಕಾರ ಬಂದಾಗ ವರ್ಗಾವಣೆ ಆಗುವುದು ಸಹಜ ಎಂದು ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.
ಹುಬ್ಬಳ್ಳಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಯಾವುದೇ ವರ್ಗಾವಣೆ ವಿಚಾರದಲ್ಲಿ ಯಾವುದೇ ರೀತಿಯ ಭ್ರಷ್ಟಾಚಾರ ಆಗಿಲ್ಲ. ಈ ವಿಷಯದಲ್ಲಿ ಭ್ರಷ್ಟಾಚಾರ ನಡೆದ ಕುರಿತು ದಾಖಲೆ ಹಾಗೂ ಯಾವುದೇ ಸಾಕ್ಷಿ ಸಹ ಇಲ್ಲ. ರಾಜ್ಯಪಾಲರರಿಗೂ ಕೇಲವರು ದೂರು ಕೊಟ್ಟರು ಯಾವುದೇ ರೀತಿಯ ಸಾಬೀತು ಆಗಲಿಲ್ಲ. ಇದೊಂದು ರಾಜಕೀಯ ಉದ್ದೇಶಗೋಸ್ಕರ ಮಾಡಲಾಗುತ್ತದೆ ಎಂದರು.

ಲೋಕಸಭಾ ಚುನಾವಣೆ ಬರುತ್ತಿದೆ ಅದಕ್ಕೆ ಭಾರತೀಯ ಜನತಾ ಪಕ್ಷ ಹಾಗೂ ಜಾತ್ಯಾತೀತ ಜನತಾದಳ ಕೂಡಿಕೊಂಡು ನಮ್ಮ ಹೆಸರು ಹಾಳು ಮಾಡಲು ಹೋಗುತ್ತಿದ್ದಾರೆ ಎಂದ ವರು ಇನ್ನು ಜಾತ್ಯಾತೀತ ಜನತಾದಳ ಅವಕಾಶವಾದ ಕುರಿತು ಮಾತನಾಡಿ, ಜಾತ್ಯಾತೀತ ಜನತಾದಳ ಹಾಗೂ ಭಾರತೀಯ ಜನತಾ ಪಕ್ಷ ಎರಡು ಒಂದಾಗುತ್ತವೆ ಎನ್ನುವ ವಿಚಾರ ಇದೆ. ಆದರೆ ಅವರ ಪಕ್ಷದ ಆಂತರಿಕ ವಿಚಾರ ಎಂದರು.
ಕೆಲ ಸಚಿವರು ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡುತ್ತಾರೆ ಎನ್ನುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಸಂತೋಷ್ ಲಾಡ್, ಇದು ಪಕ್ಕಕ್ಕೆ ಬಿಟ್ಟ ವಿಚಾರ ಪಕ್ಷದ ಹಿರಿಯರು ಏನು ತೀರ್ಮಾನ ತೆಗೆದುಕೊಳ್ಳುತ್ತಾರೆ ಅದಕ್ಕೆ ಎಲ್ಲರೂ ಬದ್ಧ ಆಗಬೇಕು ಆದ್ದರಿಂದ ಯಾರಿಗೆ ಯಾವ ಕಡೆ ನಿಲ್ಲಬೇಕು ಅಲ್ಲಿ ನಿಲ್ಲಬೇಕು ಎಂದರೆ ನಿಲ್ಲಬೇಕು ಎಂದರು.
ರಾಜ್ಯದಲ್ಲಿ ಭ್ರಷ್ಟಾಚಾರ ಕೂಪವಾಗಿದೆ ಎನ್ನುವ ಕೇಂದ್ರ ಸಚಿವರ ಹೇಳಿಕೆಗೆ ತಿರುಗೇಟು ನೀಡಿದ ಅವರು, ಪ್ರಹ್ಲಾದ್ ಜೋಶಿ ಅವರೇ ಈ ಬಗ್ಗೆ ಸ್ಪಷ್ಟತೆ ಕೊಡಬೇಕು ಏಕೆಂದರೆ ಧಾರವಾಡ ಜಿಲ್ಲೆಯ ಕಲಘಟಗಿಯಲ್ಲಿ ಅವರ ಸರ್ಕಾರ ಇದ್ದಾಗ ಭಾರೀ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಹೇಳಿಕೆ ಕೊಟ್ಟಿದ್ದರು ಎಂದು ಹೇಳಿದರು.












Click it and Unblock the Notifications