Hubballi: ಅವ್ಯವಸ್ಥೆಯ ತಹಶೀಲ್ದಾರ್ ಕಚೇರಿಗೆ ದಿಢೀರ್ ಎಂಟ್ರಿ ಕೊಟ್ಟ ಸಚಿವ: ಡಿಸಿ ಎದುರೇ ಅಧಿಕಾರಿಗಳಿಗೆ ತರಾಟೆ
ಹುಬ್ಬಳ್ಳಿ, ಜನವರಿ 31: ಬೆಳಗಾವಿ ಪ್ರವಾಸದಲ್ಲಿದ್ದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು, ಹುಬ್ಬಳ್ಳಿಯ ಮಿನಿ ವಿಧಾನ ಸೌಧದಲ್ಲಿರುವ ತಹಸೀಲ್ದಾರ್ ಕಚೇರಿಗೆ ಬುಧವಾರ ಧಿಡೀರ್ ಭೇಟಿ ನೀಡಿದರು. ಕಡತ ಪರಿಶೀಲಿಸಿದರು. ಮಧ್ಯವರ್ತಿಗಳ ಪಾರುಪತ್ಯೆ ಕಡಿವಾಣಕ್ಕೆ ಸಿಎಂ ಸೂಚನೆ ಇದೆ ಎಂದ ಅವರು, ಅಧಿಕಾರಿಗಳ ಚಳಿ ಬಿಡಿಸಿದರು.
ತಮ್ಮ ಇಲಖೆ ವ್ಯಾಪ್ತಿಯಲ್ಲಿ ಕಾರ್ಯವೈಖರಿಯ ಬಗ್ಗೆ ತಿಳಿಯಲು ಸಚಿವರು ಧಿಡೀರ್ ಭೇಟಿ ನೀಡಿ, ತಹಸೀಲ್ದಾರ್ ಹಾಗೂ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಪರಿಶೀಲನೆ ನಡೆಸಿದರು. ಇದೇ ವೇಳೆ ಅಧಿಕಾರಿಗಳ ಹಾಜರಿ, ಸ್ವಚ್ಛತೆ ಹಾಗೂ ಕಡತಗಳ ವಿಲೇವಾರಿಯ ಬಗ್ಗೆ ತಹಸೀಲ್ದಾರ್ ಮತ್ತಿತರ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಏಜೆಂಟರ್ ಹಾವಳಿ: ಸಚಿವರು ಏನಂದ್ರು?
ಆಡಳಿತ ವ್ಯವಸ್ಥೆಯಲ್ಲಿ ಆಗುತ್ತಿರುವ ಲೋಪಗಳ ಬಗ್ಗೆ ಮತ್ತು ಕಂದಾಯ ಇಲಾಖೆಯಲ್ಲಿ ಏಜೆಂಟರ್ ಹಾವಳಿ ತಪ್ಪಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾಧಿಕಾರಿ ದಿವ್ಯಾ ಪ್ರಭು ಅವರಿಗೆ ಸಚಿವರು ನಿರ್ದೇಶಿಸಿದರು.
ಕಂದಾಯ ಇಲಾಖೆಯ ಅಧಿಕಾರಿಗಳ ಹೆಸರು ಹೇಳಿಕೊಂಡೇ ಏಜಂಟರು ಪಾರಮ್ಯ ಮೆರೆಯುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಇದನ್ನೆಲ್ಲ ನೋಡಿಕೊಂಡು ಅಧಿಕಾರಿಗಳು ಸುಮ್ಮನಿದ್ದಾರೆ ಎಂದರೆ ಏನರ್ಥ? ಎಂದು ಜಿಲ್ಲಾಧಿಕಾರಿಗಳ ಎದುರೇ ಅಧಿಕಾರಿಗಳನ್ನು ಸಚಿವರು ತರಾಟೆಗೆ ತೆಗೆದುಕೊಂಡರು.
ಮನೆಯಲ್ಲೂ ಹೀಗೆ ಇಟ್ಟುಕೊಳ್ತೀರಾ?: ಸಚವರು ಗರಂ
ಮಿನಿ ವಿಧಾನಸೌಧದ ಶೌಚಾಲಯಗಳನ್ನು ವೀಕ್ಷಿಸಿದ ಸಚಿವರು ನಿರ್ವಹಣಗೆ ಸಂಬಂಧಿಸಂತೆ ಅಧಿಕಾರಿಗಳತ್ತ ಕೆಂಗಣ್ಣಿನಿಂದ ಗುರಗುಟ್ಟಿದರು. ನಿಮ್ಮ ಮನೆಯಲ್ಲೂ ಹೀಗೆ ಇಟ್ಟುಕೊಳ್ತೀರಾ? ಎಂದು ಅಧಿಕಾರಿಗಳಿಗೆ ಗದರಿಸಿದರು. ಸಾರ್ವಜನಿಕ ಶೌಚಾಲಯದ ಬಗ್ಗೆ ಸಾರ್ವಜನಿಕರೂ ಹಲವು ಬಾರಿ ಪತ್ರ ಬರೆದಿದ್ದಾರೆ. ಸ್ವಚ್ಛತೆಗೆ ಮೊಸಲ ಆದ್ಯತೆ ನೀಡಿ ಎಂದು ಎಚ್ಚರಿಸಿದರು.

ಕಚೇರಿ ಭೇಟಿ ನಂತರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಕೃಷ್ಣೇ ಬೈರೇಗೌಡರು, ಹುಬ್ಬಳ್ಳಿಗೆ ಇದು ಎರಡನೇ ಬಾರಿಗೆ ಭೇಟಿ ಕೊಟ್ಟಿದ್ದೇನೆ. ಕಳೆದ ಬಾರಿ ಬಂದಾಗ ಆನ್ಲೈನ್ ನಲ್ಲಿ ಕಡತ ವಿಲೇವಾರಿ ಆಗುತ್ತಿರಲಿಲ್ಲ. ಹೀಗಾಗಿ ಸಾರ್ವಜನಿಕರಿಗೆ ತೊಂದರೆ ಆಗುತ್ತಿರುವ ಬಗ್ಗೆ ದೂರುಗಳು ಕೇಳಿ ಬಂದಿದ್ದವು. ಈ ಕುರಿತು ಮುಖ್ಯಮಂತ್ರಿಗಳು ತಾಕೀರು ಮಾಡಿದ್ದರು.
ಆನ್‌ಲೈನ್ ಮೂಲಕ ಕಡತ ವಿಲೇವಾರಿ
ಈಗ ಸಂಪೂರ್ಣ ವಾಗಿ ಆನ್‌ಲೈನ್ ಮೂಲಕವೇ ಕಡತಗಳು ವಿಲೇವಾರಿ ಆಗುತ್ತಿದೆ. ಕಾವೇರಿ 2.0 ನೋಂದಣಿ ಬಗ್ಗೆ ಕೂಡ ದೂರು ಬಂದಿದ್ದವು. ಅದರಲ್ಲಿ ಸರ್ವರ್ ಸಮಸ್ಯೆ ಕೂಡ ಕಾವೇರಿ 2.0 ನೋಂದಣಿ ಆಗುತ್ತಿಲ್ಲ. ಆನ್‌ಲೈನ್ ಕಡತ ವಿಲೇವಾರಿಯಿಂದ ಮಧ್ಯವರ್ತಿ/ಏಜೆಂಟರ್ ಹಾವಳಿ ತಪ್ಪಲಿದೆ ಎಂದು ಅವರು ಭರವಸೆ ನೀಡಿದರು.
ಮರಾಠ ಭೂದಾಖಲೆಗಳು ಇವೆ, ದಾಖಲೆಗಳ ತಿದ್ದುಪಡಿ, ಮಿಸ್ಸಿಂಗ್ ಸೇರಿ ಹಲವು ಸಮಸ್ಯೆ ಆಗಿದ್ದವು. ಈಗಾಗಲೇ ಸ್ಕ್ಯಾನರ್, ಕಂಪ್ಯೂಟರ್ ಈಗಾಗಲೇ ಬಂದಿದೆ, ಕೆಲಸ ಆರಂಭ ಆಗುತ್ತಿದೆ. ಭೂ ಸುರಕ್ಷಾ ಕಾರ್ಯಕ್ರಮ ಹಿನ್ನೆಲೆ 31 ಜಿಲ್ಲೆಯ ಒಂದು ತಾಲೂಕಿಗೆ ಕೊಡಲಾಗುತ್ತದೆ. ಹುಬ್ಬಳ್ಳಿಯಲ್ಲಿ ಇನ್ನು ಎರಡು ದಿನಗಳಲ್ಲಿ ವಿವಿಧ ಕೆಲಸಗಳು ಆರಂಭವಾಗಲಿವೆ ಎಂದರು.
ಬಾಕಿ ಸರ್ವೇ ಕಾರ್ಯದ ಮಾಹಿತಿ ಕೊಟ್ಟ ಸಚಿವ
ಕರ್ನಾಟಕದಲ್ಲಿ ದೊಡ್ಡ ಮಟ್ಟದಲ್ಲಿ ಸರ್ವೇ ಕಾರ್ಯ ಬಾಕಿ ಇದೆ. ಇಂದಿನ ತಂತ್ರಜ್ಞಾನ ಬಳಸಿ ಸರ್ವೇ ಕಾರ್ಯ ವೇಗ ಹೆಚ್ಚಿಸಲಿದ್ದೇವೆ. 20 ಕೋಟಿ ವೆಚ್ಚ ಮಾಡಿ ಆಧುನಿಕ ಉಪಕರಣ ಸಹ ಇಲಾಖೆಗೆ ನೀಡುತ್ತಿದ್ದೇವೆ. 750 ಪರವಾನಿಗಿ ಸರ್ವೇ ಮಾಡುವವರಿಗೆ ತಂತ್ರಜ್ಞಾನ ಹಂಚಿಕೆ ಮಾಡಲಿದ್ದೇವೆ. 357 ಸರ್ವೇಸ್ ಎಡಿಎಲ್ಆರ್ ಪೋಸ್ಟ್ ಭರ್ತಿ ಮಾಡಲು ಶೀಘ್ರವೇ ಅರ್ಜಿ ಆಹ್ವಾನಿಸಲಾಗುವುದು ಎಂದು ಅವರು ವಿವರಿಸಿದರು.












Click it and Unblock the Notifications