ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುಬ್ಬಳ್ಳಿ ಜನರಿಗೆ ಹೆಚ್ಚಿದ ಅನಾರೋಗ್ಯದ ಭೀತಿ, ಕಿಮ್ಸ್‌ನಲ್ಲಿ ರೋಗಿಗಳ ಸಂಖ್ಯೆ ಹೆಚ್ಚಳ

|
Google Oneindia Kannada News

ಹುಬ್ಬಳ್ಳಿ, ಡಿಸೆಂಬರ್‌, 15: ಮಾಂಡೋಸ್‌ ಚಂಡಮಾರುತ ಹಾಗೂ ಹವಾಮಾನ ವೈಪರಿತ್ಯದಿಂದ ಜನರಲ್ಲಿ ಅನಾರೋಗ್ಯದ ಸಮಸ್ಯೆ ಹೆಚ್ಚಾಗುತ್ತಿದೆ. ತಣ್ಣನೆಯ ಗಾಳಿ ಹಾಗೂ ಮಳೆಯ ವಾತಾವರಣ ಹೆಚ್ಚಾದ ಕಾರಣ ಜಿಲ್ಲೆಯ ಜನರು ಅನಾರೋಗ್ಯಕ್ಕೆ ಒಳಗಾಗುತ್ತಲೇ ಇದ್ದಾರೆ. ಜ್ವರದ ಜೊತೆಗೆ ನೆಗಡಿ, ಮೈಕೈ ನೋವು, ಎದೆ ನೋವು, ಸುಸ್ತಿನಿಂದ ನರಳುವವರ ಸಂಖ್ಯೆಯೂ ಹೆಚ್ಚಾಗಿದೆ. ಇದರ ಮಧ್ಯೆಯೇ ಕೀಟ ಜನ್ಯದಿಂದ ಬರುವ ಡೆಂಗ್ಯೂ, ಚಿಕನ್‌ ಗುನ್ಯಾ ಸೇರಿದಂತೆ ಸಾಂಕ್ರಾಮಿಕ ರೋಗಗಳ ಹಾವಳಿ ಹೆಚ್ಚಾಗಿ ಜಿಲ್ಲೆಯ ಜನರು ಆತಂಕಕ್ಕೆ ಒಳಗಾಗಿದ್ದಾರೆ.

ಕೆಲವು ದಿನಗಳಿಂದ ಹವಾಮಾನ ವೈಪರಿತ್ಯಗಳಿಂದ ಸಾಕಷ್ಟು ತುಂಬಾ ಜನರು ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ಆರೋಗ್ಯ ಇಲಾಖೆಯೇ ನೀಡಿರುವ ಮಾಹಿತಿ ಅನ್ವಯ ಜಿಲ್ಲೆಯಲ್ಲಿ 2500ಕ್ಕೂ ಹೆಚ್ಚು ಜನರಲ್ಲಿ ಡೆಂಗ್ಯೂ ಲಕ್ಷಣಗಳು ಪತ್ತೆಯಾಗಿದೆ. ಈ ಪೈಕಿ ತಪಾಸಣೆಗೆ ಒಳಪಡಿಸಿದಾಗ 247 ಜನರಲ್ಲಿ ಡೆಂಗ್ಯೂ ದೃಢಪಟ್ಟಿದೆ. ಅದರಲ್ಲೂ ನವೆಂಬರ್‌ ತಿಂಗಳಲ್ಲಿಯೇ 12 ಜನರಲ್ಲಿ ಡೆಂಗ್ಯೂ ಪತ್ತೆಯಾಗಿದೆ. ಚಿಕನ್‌ ಗುನ್ಯಾ ಗುಣಲಕ್ಷಣ ಕಂಡುಬಂದ 1051 ಜನರನ್ನು ತಪಾಸಣೆಗೆ ಒಳಪಡಿಸಲಾಗಿದ್ದು, ಈ ಪೈಕಿ 33 ಜನರಲ್ಲಿ ರೋಗ ದೃಢಪಟ್ಟಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಹುಬ್ಬಳ್ಳಿಯಲ್ಲಿ ನಮ್ಮ ಕ್ಲಿನಿಕ್‌ಗೆ ಚಾಲನೆ: ಆರೋಗ್ಯ, ಶಿಕ್ಷಣ ನಮ್ಮ ಆದ್ಯತೆ ಎಂದ ಸಿಎಂಹುಬ್ಬಳ್ಳಿಯಲ್ಲಿ ನಮ್ಮ ಕ್ಲಿನಿಕ್‌ಗೆ ಚಾಲನೆ: ಆರೋಗ್ಯ, ಶಿಕ್ಷಣ ನಮ್ಮ ಆದ್ಯತೆ ಎಂದ ಸಿಎಂ

Mandous cyclone effect: Fear of Increased sickness for Hubballi people

ಕಿಮ್ಸ್‌ನಲ್ಲಿ ರೋಗಿಗಳ ಸಂಖ್ಯೆ ಹೆಚ್ಚಳ

ಇನ್ನು ಧಾರವಾಡ ಗ್ರಾಮೀಣದಲ್ಲಿ 2, ಕುಂದಗೋಳ, ಧಾರವಾಡ ಶಹರ ವ್ಯಾಪ್ತಿಯಲ್ಲಿ ತಲಾ 1, ಹುಬ್ಬಳ್ಳಿ ಶಹರ ವ್ಯಾಪ್ತಿಯಲ್ಲಿ ನಾಲ್ವರಲ್ಲಿ ಮಲೇರಿಯಾ ಪತ್ತೆಯಾಗಿದ್ದು, ಇವರೆಲ್ಲರೂ ಜಿಲ್ಲೆಯ ಹೊರಗಿನವರಾಗಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿ ಮಲೇರಿಯಾ ಶೂನ್ಯ ಸ್ಥಿತಿಯಲ್ಲಿದೆ. ಮತ್ತೊಂದೆಡೆ ಮೆದುಳು ಜ್ವರ ಲಕ್ಷಣ ಕಂಡುಬಂದ 15 ಜನರಲ್ಲಿ ತಪಾಸಣೆಗೆ ಒಳಪಡಿಸಲಾಗಿದೆ. ಚಿಕನ್‌ ಗುನ್ಯಾ ಶಹರ ಭಾಗಕ್ಕಿಂತ ಗ್ರಾಮೀಣ ಭಾಗದಲ್ಲಿ ಹೆಚ್ಚು ಹೊಡೆತ ನೀಡಿದೆ. ಹುಬ್ಬಳ್ಳಿ ಗ್ರಾಮೀಣದಲ್ಲಿ 5, ಕುಂದಗೋಳ, ನವಲಗುಂದದಲ್ಲಿ ತಲಾ 2, ಹುಬ್ಬಳ್ಳಿ ಶಹರ ವ್ಯಾಪ್ತಿಯಲ್ಲಿ ಒಬ್ಬರಿಗೆ ಚಿಕನ್‌ ಗುನ್ಯಾ ಪ್ರಕರಣ ಪತ್ತೆಯಾಗಿದೆ. ಈಗ ಚಂಡಮಾರುತ ಹಾಗೂ ಸಹಜವಾಗಿಯೇ ಹವಾಮಾನ ಸರಿ ಇರದ ಕಾರಣ ಕಿಮ್ಸ್ ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಆದ್ದರಿಂದ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಕಿಮ್ಸ್ ಆಸ್ಪತ್ರೆ ನಿರ್ದೇಶಕ ಡಾ.ರಾಮಲಿಂಗಪ್ಪ ಅಂಟರತಾಣಿ ಹೇಳುತ್ತಿದ್ದಾರೆ.

Mandous cyclone effect: Fear of Increased sickness for Hubballi people

ಆರೋಗ್ಯದ ಬಗ್ಗೆ ಗಮನಹರಿಸಬೇಕು

ಒಟ್ಟಿನಲ್ಲಿ ಅವಳಿ ನಗರದಲ್ಲಿ ಸೊಳ್ಳೆಯ ಸಂತಾನೋತ್ಪತ್ತಿಯನ್ನು ನಿಯಂತ್ರಿಸಲು ಫಾಗಿಂಗ್‌ ಕಾರ್ಯಕ್ಕೆ ಆದ್ಯತೆ ನೀಡಿಲ್ಲ. ಹೀಗಾಗಿ ನಗರದಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಸಾರ್ವಜನಿಕರು ತಮ್ಮ ಮನೆಯ ಸುತ್ತಮುತ್ತ ಪರಿಸರ ನೈರ್ಮಲ್ಯ ಕಾಪಾಡಿಕೊಳ್ಳುವುದರ ಜೊತೆಗೆ ಹವಾಮಾನ ವೈಪರಿತ್ಯದ ವಾತಾವರಣದಲ್ಲಿ ಆರೋಗ್ಯ ಕಾಳಜಿಗೆ ಆದ್ಯತೆ ನೀಡಬೇಕು ಎಂದು ಮಾಹಿತಿ ನೀಡಲಾಗಿದೆ.

English summary
Number of people getting increasing sickness in Hubballi, People are worried, know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X