ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆನ್‌ಲೈನ್‌ನಲ್ಲಿ ಹೆಲಿಕಾಪ್ಟರ್ ಟಿಕೆಟ್ ಬುಕ್ ಮಾಡಲು ಹೋದವರಿಗೆ 1.77 ಲಕ್ಷ ವಂಚನೆ

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, ಮೇ.11: ಡಿಜಿಟಲ್ ಯುಗದಲ್ಲಿ ಜನರು ಕೂತಲ್ಲಿಯೇ ಎಲ್ಲಾ ಸವಲತ್ತು, ಬೇಕಾದ ವಸ್ತುಗಳು, ಪ್ರವಾಸ ಅಂತೆಲ್ಲಾ ಪ್ಲ್ಯಾನ್ ಮಾಡುತ್ತಾರೆ. ಆದರೆ, ಹೀಗೆ ಡಿಜಿಟಲ್ ಬಳಸುವ ಮುನ್ನ ಈ ಸ್ಟೋರಿಯನ್ನ ಒಮ್ಮ ನೋಡಲೇಬೇಕು. ಇಷ್ಟು ದಿನ ಲೋನ್, ಪಾಸ್‌ವರ್ಡ್, ಓಟಿಪಿ ನಂಬರ್ ಎಂದು ಯಾಮಾರಿಸುತ್ತಿದ್ದ ಆನ್‌ಲೈನ್ ಖದೀಮರು ಇದೀಗ ನಿವು ಗೂಗಲ್‌ನಲ್ಲಿ ಏನು ಸರ್ಚ್ ಮಾಡುತ್ತೀರಿ ಎಂಬುದನ್ನು ನೋಡಿಯೂ ಹಣ ಪೀಕಲು ಮುಂದಾಗಿದ್ದಾರೆ.

ಹೌದು, ಇಂಥದೊಂದು ಘಟನೆಗೆ ಹುಬ್ಬಳ್ಳಿ ನಗರ ಸೈಬರ್ ಠಾಣೆಯಲ್ಲಿ ದಾಖಲಾದ ಪ್ರತ್ಯೇಕ ಎರಡು ಪ್ರಕರಣಗಳೇ ಸಾಕ್ಷಿ. ಆನ್‌ಲೈನ್‌ನಲ್ಲಿ ಹೆಲಿಕಾಪ್ಟರ್ ಟಿಕೆಟ್ ಬುಕ್ ಮಾಡಲು ಹೋಗಿ 1.77 ಲಕ್ಷ ಹಣವನ್ನು ವ್ಯಕ್ತಿಯೊಬ್ಬರು ಕಳೆದುಕೊಂಡಿರುವಹ ಘಟನೆ ಹುಬ್ಬಳ್ಳಿ ನಗರದ ಪ್ಯಾಟಿ ಸಾಲ ಓಣಿಯಲ್ಲಿ ನಡೆದಿದೆ. ಹುಬ್ಬಳ್ಳಿ ಹುಣಕಲ್ ಪ್ಯಾಟಿ ಸಾಲ ಓಣಿ ನಿವಾಸಿ ಬಾಲಚಂದ್ರ ಹಳೆಮನಿ ಹಣ ಕಳೆದುಕೊಂಡವರು. ಕುಟುಂಬದ 15 ಸದಸ್ಯರು ಉತ್ತರಾಖಂಡದ ಘಾಟಾ ಶಹರದಿಂದ ಕೇದಾರನಾಥಕ್ಕೆ ಹೆಲೆಕಾಪ್ಟರ್ ನಲ್ಲಿ ಪ್ರಯಾಣಿಸಲು ನಿರ್ಧರಿಸಿದ್ದರು. ಅದಕ್ಕಾಗಿ ಟಿಕೆಟ್ ಬುಕ್ ಮಾಡಲು ಆನ್‌ಲೈನ್‌ನಲ್ಲಿ ಹುಡುಕಾಡಿದ್ದಾರೆ. ಟಿಕೆಟ್ ಹುಡುಕಾಟದಲ್ಲಿದ್ದ ಬಾಲಚಂದ್ರ ಅವರಿಗೆ ಕೂಡಲೇ ಕಾಲ್ ಬಂದಿದೆ.

ಖಾಸಗಿ ಟ್ರಾವೆಲ್ ಕಂಪನಿ ಹೆಸರಿನಲ್ಲಿ ಕರೆ ಮಾಡಿದ ಅಪರಿಚಿತ ಟಿಕೆಟ್ ಬುಕ್ ಮಾಡುವುದಾಗಿ ನಂಬಿಸಿದ್ದಾರೆ. ನಂತರ ಬಾಲಚಂದ್ರ ಅವರ ಬ್ಯಾಂಕ್ ಖಾತೆಯ ಮಾಹಿತಿ ಪಡೆದು ಹಂತಹಂತವಾಗಿ 1.77 ಲಕ್ಷ ಹಣವನ್ನ ತಮ್ಮ ಖಾತೆಗೆ ವರ್ಗಾಯಿಸಿಕೊಂಡು ಮೋಸ ಮಾಡಿದ್ದಾರೆ. ಇತ್ತ ಉತ್ತರಕಾಂಡ ಟ್ರಿಪ್ ಮೂಡ್ ನಲ್ಲಿದ್ದ ಬಾಲಚಂದ್ರ ಹಳೆಮನಿ ಕುಟುಂಬಸ್ಥರಿಗೆ ಆನ್ಲೈನ್ ಕಳ್ಳರು ತಣ್ಣೀರು ಎರಚಿದ್ದಾರೆ.

Hubballi: Man Loses Rs 1.77 Lakh While helicopter online ticket booking

ಖರೀದಿಸಿದ ವಾಚ್ ಹಿಂತಿರುಗಿಸಲು ಹೋದ ವ್ಯಕ್ತಿಗೆ 50 ಸಾವಿರ ಮೋಸ..!

ಆನ್ಲೈನ್ ನಿಂದ ಮೋಸಹೋದ ಪ್ರಕರಣ ಸಂಬಂಧ ಹುಬ್ಬಳ್ಳಿ ನಗರ ಸೈಬರ್ ಠಾಣೆಯಲ್ಲಿ ಇನ್ನೊಂದು ಪ್ರಕರಣ ದಾಖಲಾಗಿದ್ದು, ಅಮೆಜಾನ್‌ನಲ್ಲಿ ಖರೀದಿ ಮಾಡಿದ್ದ ವಾಚ್ ಅನ್ನು ಹಿಂದಿರುಗಿಸಲು ಹೋಗಿ 50,558 ರೂ. ಹಣವನ್ನ ಕಳೆದುಕೊಂಡು ಮಂಜುನಾಥ ನಗರದ ಪಿ.ಎಸ್ ಜೋಶಿ ಎಂಬುವರು ಮೋಸಹೋಗಿದ್ದಾರೆ.

Hubballi: Man Loses Rs 1.77 Lakh While helicopter online ticket booking

ಅಮೆಜಾನ್‌ನಲ್ಲಿ ಖರೀದಿ ಮಾಡಿದ್ದ ವಾಚ್ ವಾಪಸ್ ಮಾಡಲು ಗೂಗಲ್‌ನಲ್ಲಿ ಗ್ರಾಹಕರ ಸೇವಾ ಕೇಂದ್ರದ ವಿಳಾಸವನ್ನು ಹುಡುಕುತ್ತಿದ್ದ ಜೋಶಿ ಅವರಿಗೆ, ಗ್ರಾಹಕ ಸೇವಾ ಕೇಂದ್ರದ ಪ್ರತಿನಿಧಿ ಹೆಸರಿನಲ್ಲಿ ಅಪರಿಚಿತನೊಬ್ಬ ಕರೆ ಮಾಡಿದ್ದಾನೆ. ತದನಂತರ ಆಪ್ ಒಂದನ್ನು ಡೌನ್‌ಲೋಡ್ ಮಾಡಿಸಿ, ಅದರಲ್ಲಿ ಡೆಬಿಟ್ ಕಾರ್ಡ್ ಸ್ಕ್ಯಾನ್ ಮಾಡಿಸಿದ್ದಾನೆ. ನಂತರ ಜೋಶಿ ಅವರ ಖಾತೆಯಿಂದ ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾನೆ.

Hubballi: Man Loses Rs 1.77 Lakh While helicopter online ticket booking

ಒಟ್ಟಾರೆ ಹುಬ್ಬಳ್ಳಿ ಸೈಬರ್ ಪೊಲೀಸ್ ಠಾಣೆಯಲ್ಲಿ ಎರಡೂ ಪ್ರಕರಣಗಳನ್ನ ದಾಖಲು ಮಾಡಿಕೊಂಡು ವಂಚಕರಿಗೆ ಬಲೆಬೀಸಿದ್ದಾರೆ. ಗೂಗಲ್‌ನಲ್ಲಿ ಜನರು ವೀಕ್ಷಣೆ ಮಾಡುವುದು ಸಹ ಆನ್ಲೈನ್ ಖದೀಮರಿಗೆ ಗೊತ್ತಾಗುತ್ತದೆ. ಯಾವುದೇ ಕರೆ ಬಂದರೂ ಅದನ್ನ ಸ್ವೀಕರಿಸಿ ಮಾತಾನಾಡುವ ಮುನ್ನ ಎಚ್ಚರದಿಂದ ಆನ್ಲೈನ್ ನಲ್ಲಿ ವ್ಯಹರಿಸಬೇಕು ಎಂಬುದಕ್ಕೆ ಈ ಎರಡೂ ಪ್ರಕರಣ ಸಾಕ್ಷಿ.

English summary
Hubballi: Man Loses Rs 1.77 Lakh While Booking Helicopter Ticket from Online.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X