ಮಹಾ ಕುಂಭಮೇಳ: ಕರ್ನಾಟಕದ ಈ ಭಾಗದಿಂದ ವಿಶೇಷ ರೈಲು ಸೇವೆ!
Maha Kumbh Mela: ರಾಜ್ಯದ ಹುಬ್ಬಳ್ಳಿ - ಧಾರವಾಡ ಭಾಗದ ಜನರಿಗೆ ಗುಡ್‌ನ್ಯೂಸ್‌ವೊಂದನ್ನು ಕೊಡಲಾಗಿದೆ. ಕುಂಭಮೇಳ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗುತ್ತಿದೆ. ಈ ಹಿನ್ನೆಲೆಯಲ್ಲಿ ವಿಶೇಷ ರೈಲು ಸೇವೆ ನೀಡಲಾಗುತ್ತಿದೆ. ಈ ಸಮಯದಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗುತ್ತಿದೆ. ಹೀಗಾಗಿ ರೈಲ್ವೆ ಮಂಡಳಿಯು ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ (ಎಸ್‌ಎಸ್‌ಎಸ್ ಹುಬ್ಬಳ್ಳಿ) ಹಾಗೂ ಉತ್ತರ ಪ್ರದೇಶದ ವಾರಣಾಸಿ ನಡುವೆ ಮೂರು ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಪರಿಚಯಿಸಲಾಗುತ್ತಿದೆ. ವಿಶೇಷ ರೈಲುಗಳ ವಿವರ ಇಲ್ಲಿದೆ.
144 ವರ್ಷಗಳಿಗೆ ಒಮ್ಮೆ ನಡೆಯುವ ವಿಶೇಷ ಕುಂಭಮೇಳಕ್ಕೆ ಈ ಬಾರಿ ಅದ್ಧೂರಿ ಸಿದ್ಧತೆ ಮತ್ತು ವ್ಯವಸ್ಥೆ ಮಾಡಿಕೊಳ್ಳಲಾಗಿದ್ದು. ಭಕ್ತಾದಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಕಾಲ್ತುಳಿತದ ದುರಂತ ಪ್ರಕರಣದ ನಂತರ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಉತ್ತರ ಪ್ರದೇಶ ಸರ್ಕಾರ ಹಲವು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದೆ. ಇದೀಗ ಕೇಂದ್ರ ಸರ್ಕಾರವು ದೇಶದ ವಿವಿಧ ಭಾಗದಲ್ಲಿ ರೈಲ್ವೆಯಲ್ಲಿ ಪ್ರಯಾಣಿಕರ ದಟ್ಟಣೆಯನ್ನು ತಪ್ಪಿಸುವ ಉದ್ದೇಶದಿಂದ ವಿಶೇಷ ರೈಲುಗಳ ಸೇವೆಯನ್ನು ಪರಿಚಯಿಸಲಾಗಿದೆ. ರೈಲುಗಳ ವಿವರ ಇಲ್ಲಿದೆ.

ಮಹಾಕುಂಭಮೇಳಕ್ಕೆ ಲಕ್ಷಾಂತರ ಜನ ಭಕ್ತಾದಿಗಳು ಆಗಮಿಸುತ್ತಿದ್ದಾರೆ. ಈ ವೇಳೆ ಪ್ರಯಾಣಿಕರ ದಟ್ಟಣೆಯನ್ನು ತಪ್ಪಿಸುವುದಕ್ಕೆ ರೈಲ್ವೆ ಮುಂದಾಗಿದೆ. ಹೀಗಾಗಿ, ವಿಶೇಷ ರೈಲು ಸೇವೆಯನ್ನು ಪರಿಚಯಿಸಿದೆ.
ಹುಬ್ಬಳ್ಳಿ ಹಾಗೂ ವಾರಣಾಸಿ ನಡುವೆ ವಿಶೇಷ ರೈಲು (07383/84): ರೈಲು ಸಂಖ್ಯೆ 07383 ಎಸ್‌ಎಸ್‌ಎಸ್ ಹುಬ್ಬಳ್ಳಿ - ವಾರಣಾಸಿ ವಿಶೇಷ ಎಕ್ಸ್‌ಪ್ರೆಸ್ ರೈಲು ಪರಿಚಯಿಸಲಾಗಿದೆ. ಫೆಬ್ರವರಿ 14, 21 ಮತ್ತು 28ರ ಶುಕ್ರವಾರದ ದಿನ ಬೆಳಿಗ್ಗೆ 8 ಗಂಟೆಗೆ ಹುಬ್ಬಳ್ಳಿಯಿಂದ ಹೊರಡಲಿರುವ ರೈಲು ಭಾನುವಾರ ಬೆಳಿಗ್ಗೆ 5.30ರ ವೇಳೆಗೆ ವಾರಣಾಸಿ ತಲುಪಲಿದೆ.
ಇನ್ನು ಮತ್ತೊಂದು ರೈಲು ಸಂಖ್ಯೆ 07384 ವಾರಣಾಸಿ - ಎಸ್‌ಎಸ್‌ಎಸ್ ಹುಬ್ಬಳ್ಳಿ ವಿಶೇಷ ಎಕ್ಸ್‌ಪ್ರೆಸ್ ಸಹ ಸಂಚರಿಸಲಿದೆ. ಇದು ಫೆಬ್ರವರಿ 17, 24 ಮತ್ತು ಮಾರ್ಚ್ 3ರಂದು (ಸೋಮವಾರ) ಬೆಳಿಗ್ಗೆ 5 ಗಂಟೆಗೆ ವಾರಣಾಸಿಯಿಂದ ಹೊರಡಲಿದೆ. ಬುಧವಾರ ಮಧ್ಯಾಹ್ನ 12.45ಕ್ಕೆ ಹುಬ್ಬಳ್ಳಿಗೆ ಹಿಂದಿರುಗಲಿದೆ.

ಹುಬ್ಬಳ್ಳಿ - ವಾರಣಾಸಿ ರೈಲು ನಿಲ್ದಾಣಗಳ ವಿವರ: ಇನ್ನು ಈ ವಿಶೇಷ ರೈಲುಗಳು ಧಾರವಾಡ, ಅಳ್ನಾವರ, ಲೋಂಡಾ, ಖಾನಾಪುರ, ಬೆಳಗಾವಿ, ಗೋಕಾಕ್, ಘಟಪ್ರಭಾ, ರಾಯಬಾಗ, ಕುಡಚಿ, ಮೀರಜ್, ಸಾಂಗ್ಲಿ, ಕಿರ್ಲೋಸ್ಕರವಾಡಿ, ಕರಡ್, ಸತಾರಾ, ಪುಣೆ, ದೌಂಡ್ ಚಾರ್ಡ್ ಲೈನ್, ಅಹಮದ್‌ನಗರ, ಕೋಪರಗಾಂವ್, ಮನ್ಮಾಡ್, ಭೂಸಾವಲ್, ತಳವಾಡ, ತಲವಾ, ಪಿಪಾರಿಯಾ, ನರಸಿಂಗ್‌ಪುರ್, ಜಬಲ್‌ಪುರ್, ಕಟ್ನಿ, ಮೈಹಾರ್, ಸತ್ನಾ, ಮಾಣಿಕ್‌ಪುರ್, ಪ್ರಯಾಗ್‌ರಾಜ್ ಛೋಕಿ, ಮಿರ್ಜಾಪುರ್ ಹಾಗೂ ಚುನಾರ್ ನಿಲ್ದಾಣಗಳಲ್ಲಿ ರೈಲು ನಿಲುಗಡೆ ನೀಡಲಿದೆ ಎಂದು ಹೇಳಲಾಗಿದೆ.
ಇನ್ನು ಪ್ರತಿ ನಿಲ್ದಾಣದಲ್ಲಿ ರೈಲುಗಳ ಆಗಮನ ಹಾಗೂ ನಿರ್ಗಮನದ ನಿಖರ ಸಮಯವನ್ನು ನೋಡುವುದಕ್ಕೆ ಪ್ರಯಾಣಿಕರು ಭಾರತೀಯ ರೈಲ್ವೆ ವೆಬ್‌ಸೈಟ್ www.enquiry.indianrail.gov.in ಗೆ ಭೇಟಿ ನೀಡಬಹುದು. ಹೆಚ್ಚಿನ ಮಾಹಿತಿ ಹಾಗೂ ಸಹಾಯಕ್ಕಾಗಿ ಸಹಾಯವಾಣಿ ಸಂಖ್ಯೆ 139ಕ್ಕೆ ಕರೆ ಸಹ ಮಾಡಬಹುದು ಎಂದು ರೈಲ್ವೆ ಪ್ರಕಟಣೆ ತಿಳಿಸಿದೆ.












Click it and Unblock the Notifications