ಅಪಘಾತದಲ್ಲಿ ಬೈಕ್ ಸವಾರ ಸಾವು, ಲಾರಿ ಪಲ್ಟಿ

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ, ಆಗಸ್ಟ್, 27: ನಗರದ ಕೇಶ್ವಾಪುರ ಪ್ರದೇಶದಲ್ಲಿ ಲಾರಿ ಹರಿದು ವ್ಯಕ್ತಿ ಮೃತಪಟ್ಟಿದ್ದಾನೆ. ಹುಬ್ಬಳ್ಳಿಯಿಂದ ಕುಸುಗಲ್ ಮಾರ್ಗದಲ್ಲಿ ವೇಗವಾಗಿ ಬಂದ ಲಾರಿ ಗದಗನ ದಂಡಾಪೂರ ಓಣಿಯ ನಿವಾಸಿ ಲೋಹಿತ ಹುಯಿಲಗೋಳ ಎಂಬ ಬೈಕ್ ಸವಾರನಿಗೆ ಡಿಕ್ಕಿ ಹೊಡೆದು, ನಂತರ ಎರಡು ವಾಹನ ಜಖಂಗೊಳಿಸಿ ರಸ್ತೆ ಮಧ್ಯೆ ಪಲ್ಟಿಯಾಗಿದೆ.

accident

ಅಪಘಾತದಲ್ಲಿ ಲೋಹಿತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ರೋಸ್ಟರ್ಸ್ ದಾಬಾ ಹತ್ತಿರ ನಡೆದ ಈ ಅಪಘಾತದಿಂದ ಸಂಚಾರ ಅಸ್ತವ್ಯಸ್ತವಾಗಿತ್ತು. ಲಾರಿ ಚಾಲಕ ಪರಾರಿಯಾಗಿದ್ದಾನೆ. ಪೂರ್ವ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.[ಕಲಘಟಗಿ ಅತ್ಯಾಚಾರ ಆರೋಪಿ ವಿಷ ಸೇವಿಸಿ ಆತ್ಮಹತ್ಯೆ]

ಮಹಿಳೆ ನಾಪತ್ತೆ: ಧಾರವಾಡದ ದುರ್ಗಾ ಕಾಲೋನಿ ನಿವಾಸಿ ಶಿಲ್ಪಾ (21) ಎಂಬುವವರು ತಮ್ಮ ಮನೆಯಿಂದ ಆ.25ರಂದು ನಾಪತ್ತೆಯಾಗಿದ್ದಾರೆ ಎಂದು ಕೃಷ್ಣಾ ರಮೇಶ ತಿಟ್ಟೇನವರ ಎಂಬುವರು ಶಹರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣದ ತನಿಖೆಯನ್ನು ಪೊಲೀಸರು ಕೈಗೊಂಡಿದ್ದಾರೆ.[ಹುಬ್ಬಳ್ಳಿ: ನಾಲ್ವರು ಕೊಲೆ ಆರೋಪಿಗಳ ಬಂಧನ]

ಸಂಚಾರ ನಿಯಮ ಉಲ್ಲಂಘನೆ : ಸಂಚಾರ ನಿಯಮ ಉಲ್ಲಂಘನೆ ಮಾಡಿದ 489 ಪ್ರಕರಣಗಳನ್ನು ದಾಖಲಿಸಿ, 59,000 ದಂಡ ವಸೂಲಿ ಮಾಡಲಾಗಿದೆ ಎಂದು ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Lorry accident occur in Keshwapura area, Hubballi. Person died. Lohita huyilagola, bike rider died in accident. It was a series of accident, two car damaged and lorry toppled later.
Please Wait while comments are loading...