ಹುಬ್ಬಳ್ಳಿ ಸಿನಿಪ್ರಿಯರಿಗೆ ಗುಡ್ ನ್ಯೂಸ್.. ಶೀಘ್ರದಲ್ಲೇ ಮತ್ತೊಂದು ಪಿವಿಆರ್ ಆರಂಭ
ಹುಬ್ಬಳ್ಳಿ, ಆಗಸ್ಟ್ 20 : ಅವಳಿ ನಗರಗಳಾದ ಹುಬ್ಬಳ್ಳಿ ಧಾರವಾಡ ಸಿನಿ ಪ್ರೇಮಿಗಳಿಗೆ ಒಂದು ಸಂತಸದ ಸುದ್ದಿಯಿದೆ. ಹುಬ್ಬಳ್ಳಿಯ ಗೋಕುಲ್ ರಸ್ತೆಯಲ್ಲಿ ಅಕ್ಷಯ್ ಸ್ಕೈ ಮಾಲ್‌ನಲ್ಲಿ ಹುಬ್ಬಳ್ಳಿಯ ಎರಡನೇ ಪಿವಿಆರ್ ಮಲ್ಟಿಪ್ಲೆಕ್ಸ್ ಶೀಘ್ರದಲ್ಲೇ ಆರಂಭವಾಗುತ್ತಿದೆ.
ಅಕ್ಷಯ ಸ್ಕೈ ಮಾಲ್‌ನಲ್ಲಿನ ಹೊಸ ಪಿವಿಆರ್ 4 ಅಥವಾ 5 ಪರದೆಗಳನ್ನು ಹೊಂದುವ ನಿರೀಕ್ಷೆಯಿದೆ . ಅಕ್ಷಯ್ ಸ್ಕೈ ಮಾಲ್ ಗೋಕುಲ್ ರಸ್ತೆ ಹುಬ್ಬಳ್ಳಿಯಲ್ಲಿ ದೊಡ್ಡ ಶಾಪಿಂಗ್ ಮಾಲ್ ನಿರ್ಮಾಣವಾಗುತ್ತಿದೆ. ಮಾಲ್ ಆರು ಹಂತಗಳನ್ನು ಹೊಂದಿದ್ದು, 4,50, 000 ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ. ಈಗಾಗಲೇ 2015 ರಲ್ಲಿ ಕೋಯಿನ್ ರಸ್ತೆಯಲ್ಲಿರುವ ಲಕ್ಷ್ಮಿ ಪ್ರೈಡ್ ಮಾಲ್‌ನಲ್ಲಿ ಪಿವಿಆರ್ ಆರಂಭವಾಗಿದ್ದು, ಇದು ನಾಲ್ಕು ಪರದೆಯ ಮಲ್ಟಿಪ್ಲೆಕ್ಸ್ ಆಗಿದ್ದು, ಒಟ್ಟು 27,388 ಚದರ ಅಡಿ ವಿಸ್ತೀರ್ಣ ಮತ್ತು 890 ಆಸನಗಳ ಸಾಮರ್ಥ್ಯವನ್ನು ಹೊಂದಿದೆ.
ಮೆಕ್ಸಿಕನ್‌ನ ಮೂವಿ ಥಿಯೇಟರ್ ಆಗಿರುವ ಸಿನಿಪೊಲಿಸ್ ಅರ್ಬನ್ ಓಯಸಿಸ್ ಮಾಲ್‌ನಲ್ಲಿ 5 ಸ್ಕ್ರೀನ್ ಮಲ್ಟಿಫ್ಲೆಕ್ಸ್ ಹೊಂದಿದೆ. ಇದೀಗ ಮತ್ತೊಂದು ಪಿವಿಆರ್ ಮಲ್ಟಿಫ್ಲೆಕ್ಸ್‌ನ ಆವೃತ್ತಿ ಆರಂಭವಾಗುತ್ತಿರುವುದು ಸಿನಿಪ್ರೇಮಿಗಳಿಗೆ ಸಿನಿಮಾ ನೋಡುವುದಕ್ಕೆ ಬಹು ಆಯ್ಕೆಗಳನ್ನು ನೀಡಿದೆ.

ಪ್ರಸ್ತುತ ಹುಬ್ಬಳ್ಳಿಯಲ್ಲಿ ಸಿನಿಪೊಲಿಸ್ ಮತ್ತು ಪಿವಿಆರ್ ಮಲ್ಟಿಪ್ಲೆಕ್ಸ್ ಗಳನ್ನು ಹೊಂದಿದೆ. ಶೀಘ್ರದಲ್ಲೇ ವಾಣಿಜ್ಯ ನಗರಿ ಮತ್ತೊಂದು ಮಲ್ಟಿಪ್ಲೆಕ್ಸ್ ಹೊಂದಲಿದೆ. ಹೊಸೂರು-ಹುಬ್ಬಳ್ಳಿ ಧಾರವಾಡ ರಸ್ತೆಯಲ್ಲಿರುವ ಒನ್ ಹುಬ್ಬಳ್ಳಿ ಮಾಲ್‌ನಲ್ಲಿ ಹೊಸ ಮಲ್ಟಿಪ್ಲೆಕ್ಸ್ ಆರಂಭವಾಗಲಿದೆ. ಉತ್ತರ ಕರ್ನಾಟಕದ ಅತಿದೊಡ್ಡ ಮಾಲ್ ಆಗಲಿರುವ ಒನ್ ಹುಬ್ಬಳ್ಳಿ ಮಾಲ್‌ನಲ್ಲೂ ಮುಂಬರುವ ದಿನಗಳಲ್ಲಿ ಮಲ್ಟಿಫ್ಲೆಕ್ಸ್ ಆರಂಭವಾಗಲಿದೆ ಎನ್ನಲಾಗುತ್ತಿದೆ. ಇದು 5 ಸ್ಕ್ರೀನ್‌ಗಳನ್ನು ಹೊಂದಿರಲಿದೆ ಎಂಬ ಮಾಹಿತಿಯಿದೆ.

ಭಾರತದಲ್ಲಿ ಪಿವಿಆರ್ ಸಂಸ್ಥೆ ಸಿನಿಮಾ ಮಾರುಕಟ್ಟೆಯ ಲೀಡರ್ ಆಗಿದ್ದು, ಭಾರತ ಮತ್ತು ಶ್ರೀಲಂಕಾ ಸೇರಿದಂತೆ 71 ನಗರಗಳಲ್ಲಿ 176 ಚಿತ್ರಮಂದಿರಗಳಲ್ಲಿ 846 ಸ್ಕ್ರೀನ್‌ಗಳನ್ನು ಹೊಂದಿದೆ.












Click it and Unblock the Notifications