Pralhad Joshi: ಲಿಂಗಾಯತ ಡ್ಯಾಂನಲ್ಲಿದ್ದ ನೀರು ಕಾಂಗ್ರೆಸ್ಸೆಂಬ ಸಮುದ್ರ ಸೇರಿದೆ: ಆ ನೀರು ಉಪಯೋಗಕ್ಕೆ ಬರಲ್ಲ: ಪ್ರಹ್ಲಾದ್ ಜೋಶಿ

ಹುಬ್ಬಳ್ಳಿ, ಏಪ್ರಿಲ್ 23: ಕರ್ನಾಟಕ ರಾಜ್ಯ ವಿಧಾನಸಭೆಗೆ ದಿನಗಣನೆ ಆರಂಭವಾಗಿದೆ. ಪ್ರಮುಖ ಪಕ್ಷಗಳಾಗಿರುವ ಕಾಂಗ್ರೆಸ್ ಮತ್ತು ಬಿಜೆಪಿ ಆರೋಪ ಪ್ರತ್ಯಾರೋಪಗಳಲ್ಲಿ ಮುಳುಗಿವೆ. ಕಾಂಗ್ರೆಸ್‌ನವರು ಲಿಂಗಾಯತರನ್ನು ಸಿಎಂ ಮಾಡಲಿ ಎಂಬ ಚರ್ಚೆ ಅಂತ್ಯಗೊಳ್ಳುವಂತೆ ಕಾಣುತ್ತಿಲ್ಲ. ಇದರ ಮಧ್ಯೆ ಲಿಂಗಾಯತ ನಾಯಕರ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರೊಂದಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿರುಗೇಟು ನೀಡಿದ್ದಾರೆ.

ಟಿಕೆಟ್ ಕೈತಪ್ಪಿದ ಹಲವು ಬಿಜೆಪಿ ನಾಯಕರು ಈಗಾಗಲೇ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಈ ಸಂಬಂಧ ಡಿಕೆ ಶಿವಕುಮಾರ್ ಲಿಂಗಾಯತ ಡ್ಯಾಮ್ ನೀರು ಕಾಂಗ್ರೆಸ್​​ಗೆ ಬರುತ್ತಿದೆ ಎಂದಿದ್ದರು. ಇದಕ್ಕೆ ಭಾನುವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಜೋಶಿ, ಲಿಂಗಾಯತ ಡ್ಯಾಮ್​ನಲ್ಲಿದ್ದ ಕಾಂಗ್ರೆಸ್​​ ನೀರು ಸಮುದ್ರ ಸೇರಿದೆ. ಸಮುದ್ರದ ನೀರು ಉಪ್ಪು ಇರುತ್ತದೆ. ಆ ನೀರು ಯಾವುದಕ್ಕೂ ಉಪಯೋಗಕ್ಕೆ ಬರಲ್ಲ. ಸಮುದ್ರದ ನೀರನ್ನು ಕಾಂಗ್ರೆಸ್​ನವರೇ ಇಟ್ಟುಕೊಳ್ಳಲಿ ಎಂದು ಲೇವಡಿ ಮಾಡಿದ್ದಾರೆ.

Karnataka Elections 2023: Pralhad Joshi Hits Back to DK Shivakumar on BJP Leaders joined congress

ಬಿಜೆಪಿಯನ್ನು ನದಿಗಳಿಗೆ ಹೋಲಿಕೆ ಮಾಡಿದೆ ಪ್ರಹ್ಲಾದ್ ಜೋಶಿ, ಬಿಜೆಪಿ ಮಲಪ್ರಭಾ, ಕಾವೇರಿ ನದಿಯಂತೆ ಶುದ್ಧ, ಪವಿತ್ರವಾಗಿದ್ದು, ಜನ ಸ್ವೀಕಾರ ಮಾಡುತ್ತಾರೆ ಎಂದು ಬಿಜೆಪಿ ಅಧಿಕಾರಕ್ಕೆ ಬರುವ ಬಗ್ಗೆ ಅವರು ವಿಶ್ವಾಸ ವ್ಯಕ್ತಪಡಿಸಿದರು.

ಚುನಾವಣೆ ವೇಳೆ ಕಾಂಗ್ರೆಸ್​​ ಪಕ್ಷ ಲಿಂಗಾಯತರ ಕುರಿತು ಸಿಂಪಥಿ ವ್ಯಕ್ತಪಡಿಸುತ್ತಿದೆ. ಇವತ್ತು ರಾಹುಲ್ ಗಾಂಧಿ ಅವರು ಲಿಂಗಾಯತ ಸಮುದಾಯದ ನಾಯಕರೊಬ್ಬರನ್ನು ಸಿಎಂ ಎಂದು ಘೋಷಣೆ ಮಾಡಲಿ ಎಂದು ಅವರು ಸವಾಲೆಸೆದರು. ರಾಜ್ಯದಲ್ಲಿ ಬಿಜೆಪಿ ಹಾಲಿ ಸಿಎಂ ಸಹ ಲಿಂಗಾಯತ ಸಮುದಾಯರದವರೆ ಎಂದು ಟಾಂಗ್ ನೀಡಿದರು.

ಲಿಂಗಾಯತ ಸಮಾಜದ ಜೊತೆಗಿನ ಕಾಂಗ್ರೆಸ್‌ ನಡವಳಿಕೆ ಗೊತ್ತಿದೆ

ರಾಜ್ಯದಲ್ಲಿ ಈ ಹಿಂದೊಮ್ಮೆ ಕಾಂಗ್ರೆಸ್ ಲಿಂಗಾಯತ ಸಮಾಜದ ಜೊತೆ ಯಾವ ರೀತಿ ನಡೆದುಕೊಂಡರು ಅನ್ನೋದು ಜನರಿಗೆ ಗೊತ್ತಿದೆ. ಹಿಂದೆ ಲಿಂಗಾಯತ ನಾಯಕರಾದ ವೀರೇಂದ್ರ ಪಾಟೀಲ್​, ನಿಜಲಿಂಗಪ್ಪ ಜೊತೆ ಕಾಂಗ್ರೆಸ್​ ಹೇಗೆಲ್ಲ ನಡೆಸಿಕೊಂಡ್ರು, ಇವರ ತುಷ್ಟೀಕರಣ ಜನರಿಗೆ ಅರ್ಥವಾಗಿದೆ. ಕಾಂಗ್ರೆಸ್​ನವರು ತುಕಡೆ ತುಕಡೆ ಗ್ಯಾಂಗ್ ಜೊತೆ ಸಂಪರ್ಕ ಇಟ್ಟುಕೊಂಡಿದ್ದು ಜನರಿಗೆ ಗೊತ್ತಿದೆ ಎಂದು ಟೀಕಿಸಿದರು.

Karnataka Elections 2023: Pralhad Joshi Hits Back to DK Shivakumar on BJP Leaders joined congress

ಪ್ರಹ್ಲಾದ್ ಜೋಶಿಯವರು ಭಾನುವಾರ ಹುಬ್ಬಳ್ಳಿಯ ದೇಶಪಾಂಡೆನಗರದಲ್ಲಿ ಚುನಾವಣಾ ಕಚೇರಿಯೊಂದಕ್ಕೆ ಚಾಲನೆ ನೀಡಿದರು. ಯನ್ನ ಕೇಂದ್ರ ಸಚಿವ ಜೋಶಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅವರಿಗೆ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ, ಹುಬ್ಬಳ್ಳಿ ಧಾರವಾಡ ಕೇಂದ್ರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಹೇಶ್ ಜೊತೆಗಿದ್ದರು.

ಉತ್ತರ ಕರ್ನಾಟಕದಲ್ಲಿ ಪ್ರಧಾನಿ ಮೋದಿ ಪ್ರಚಾರ

ಮುಂದಿನ ವಾರದ ಏಪ್ರಿಲ್ 29 ರಂದು ಬೆಳಗಾವಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಪ್ರಚಾರ ಮಾಡಲಿದ್ದಾರೆ. ರಾಜ್ಯದ ಬೃಹತ್ ಜಿಲ್ಲೆಯಾದ ಬೆಳಗಾವಿ ವ್ಯಾಪ್ತಿಯ ಚಿಕ್ಕೋಡಿ, ಕುಡಚಿ ಕ್ಷೇತ್ರ, ಉತ್ತರ ಕನ್ನಡ ಜಿಲ್ಲೆಯ ಆಂಕೋಲಾದಲ್ಲಿ ಮೋದಿ ಚುನಾವಣಾ ರೋಡ್ ಶೋ ನಡೆಯಲಿದೆ. ಸೋಮವಾರ (ಏ.24) ಕರ್ನಾಟಕಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸಲಿದ್ದಾರೆ. ಅವರು ಮುಂದಿನ ಮೂರರಿಂದ ನಾಲ್ಕು ದಿನ ಇಲ್ಲಿಯೆ ಪ್ರಚಾರ ನಡೆಸಲಿದ್ದಾರೆ. ಅವರೊಂದಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಸೇರಿದಂತೆ ಕೆಲವು ಕೇಂದ್ರ ಸಚಿವರು ಭಾಗವಹಿಸಲಿದ್ದಾರೆ ಎಂದು ಜೋಶಿ ವಿವರಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+