ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿದೇಶದಲ್ಲಿ ಕರ್ನಾಟಕದ ಖಡಕ್ ರೊಟ್ಟಿ, ಬದನೆಕಾಯಿ ಪಲ್ಯ!

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, ಅಕ್ಟೋಬರ್‌ 31 : ಕಟ್ ಅಂತ ಖಡಕ್ ರೊಟ್ಟಿ ಮುರಿದುಕೊಂಡು, ಅದನ್ನು ಗಟ್ಟಿ ಮೊಸರು, ಗುರೆಳ್ಳು ಹಿಂಡಿ (ಚಟ್ನಿ) ಅಥವಾ ಅಗಸಿ ಹಿಂಡಿಯಲ್ಲಿ ಅದ್ದಿಕೊಂಡು, ಬದನೆಕಾಯಿ ಎಣ್ಣೆಗಾಯಿ ಪಲ್ಯದೊಂದಿಗೆ ಬಾಯಿಗಿಟ್ಟುಕೊಂಡರೆ ಸ್ವರ್ಗಕ್ಕೆ ಕಿಚ್ಚು ಹಚ್ಚುವಂತಹ ಸ್ವಾದ.

ಉತ್ತರ ಕರ್ನಾಟಕ ಅದರಲ್ಲೂ ಧಾರವಾಡ ಜಿಲ್ಲೆಯ ಪ್ರಮುಖ ಆಹಾರ ಜೋಳದ ಖಡಕ್ ರೊಟ್ಟಿ ಎಣ್ಣೆಗಾಯಿ ಬದನೆಕಾಯಿ ಪಲ್ಯ, ಶೇಂಗಾ ಚಟ್ನಿ ಮೊಸರು, ಮಡಕಿಕಾಳು ಪಲ್ಯ ಇವು ಈ ಭಾಗದ ಪ್ರತಿ ಹಬ್ಬ ಹರಿದಿನಗಳಲ್ಲಿ ವಿಶೇಷವಾದ ಆಹಾರ.

ರೊಟ್ಟಿ, ಚಪಾತಿಗೆ ಶೇ.5 ಜಿಎಸ್‌ಟಿ, ಪರಾಠ ಮೇಲೆ ಶೇ.18: ಏನಿದರ ವ್ಯತ್ಯಾಸ?ರೊಟ್ಟಿ, ಚಪಾತಿಗೆ ಶೇ.5 ಜಿಎಸ್‌ಟಿ, ಪರಾಠ ಮೇಲೆ ಶೇ.18: ಏನಿದರ ವ್ಯತ್ಯಾಸ?

ಜೊತೆಗೆ ಸಿಹಿಯಾದ ಧಾರವಾಡ ಪೇಡಾ ಗೋಕಾಕ ಕರದಂಟು ಸೇರಿ ಬಿಟ್ಟರೆ ದೇವಲೋಕದ ಅಮೃತವು ಅದರ ಮುಂದೆ ಸಪ್ಪೆ ಎನ್ನುವುದು ಭೋಜನ ಪ್ರಿಯರ ಮಾತು. ಇಷ್ಟು ಸ್ವಾದಿಷ್ಟವಾದ ಊಟ ವಿಶ್ವದ ಯಾವುದೇ ಮೂಲೆಗೆ ಹೋದರು ಸಿಗುವುದಿಲ್ಲ.

ಖಡಕ್ ರೊಟ್ಟಿ ಸವಿದ ಯುಎಸ್ಎ ಕನ್ನಡಿಗರು

ಖಡಕ್ ರೊಟ್ಟಿ ಸವಿದ ಯುಎಸ್ಎ ಕನ್ನಡಿಗರು

ಉತ್ತರ ಕರ್ನಾಟಕ ಊಟದ ರುಚಿಯೇ ಹಾಗಿದೆ. ಇಗಿನ ಫಿಜ್ಜಾ ಬರ್ಗರ್ ಫಾಸ್ಟ್ ಫುಡ್ ಕಾಲ ಇದ್ದರೂ ಖಡಕ್ ರೊಟ್ಟಿಯ ಊಟ ಇನ್ನೂ ಕೂಡ ರುಚಿಯನ್ನು ಕಳೆದುಕೊಂಡಿಲ್ಲ. ಈ ಊಟದಲ್ಲಿ ಖಾರವೇ ಮುಂದಾದರೂ ಸ್ವಾದದಲ್ಲಿ ಹಿಂದಿಲ್ಲ. ವಿಶ್ವದ ಯಾವ ಭಾಗದಲ್ಲೂ ಸಿಗದ ಅಪರೂಪದ ಮೆನು ಇದು. ಹಾಗೆಯೇ ಈ ಊಟವನ್ನು ಸವಿಯುವುದೂ ಒಂದು ಕಲೆ. ಅದನ್ನು ಆ ಶೈಲಿಯಲ್ಲಿಯೇ ತಿನ್ನಬೇಕು. ಈಗ ಈ ಭೂರಿ ಭೋಜನವನ್ನು ವಿದೇಶದಲ್ಲೂ ತನ್ನ ರುಚಿಯನ್ನು ಉಣಬಡಿಸಿದ್ದು, ಯುಎಸ್ಎಯಲ್ಲಿ ಇರುವ ಕನ್ನಡಿಗರು ಹುಬ್ಬಳ್ಳಿಯ ಖಡಕ್ ರೊಟ್ಟಿಯನ್ನು ತಾವಿರುವಲ್ಲಿಗೆ ತರಸಿಕೊಂಡು ಸವಿದಿದ್ದಾರೆ.

ಬಾಯಿ ಚಪ್ಪರಿಸಿದ ವಿದೇಶಿ ಕನ್ನಡಿಗರು

ಬಾಯಿ ಚಪ್ಪರಿಸಿದ ವಿದೇಶಿ ಕನ್ನಡಿಗರು

ವಿದೇಶದಲ್ಲಿ ಇದ್ದುಕೊಂಡು ಖಡಕ್ ರೊಟ್ಟಿ, ಎಣ್ಣೆಗಾಯಿ ಬದನೆಕಾಯಿ ಪಲ್ಯ, ಶೇಂಗಾ ಚಟ್ನಿ ಹಾಗೂ ಗೋಕಾಕ ಕರದಂಟು ಸವಿದು ನಮ್ಮ ಕನ್ನಡಿಗರು ಪುನೀತರಾಗಿದ್ದಾರೆ. ವಿಶೇಷವಾಗಿ ಹುಬ್ಬಳ್ಳಿಯಿಂದ ಈ ಎಲ್ಲಾ ಆಹಾರವನ್ನು ತರಿಸಿಕೊಂಡು ಅಲ್ಲಿನ ಕನ್ನಡಿಗರು ಬಾಯಿ ಚಪ್ಪರಿಸಿದ್ದಾರೆ. ಯುಎಸ್ಎಯ ಟೆಕ್ಸಾಸ್‌ನ ಉತ್ತರ ಆಸ್ಟಿನ್ ಉಪನಗರದಲ್ಲಿರುವ ಸೀಡರ್ ಪಾರ್ಕ್‌ನಲ್ಲಿ ಉತ್ತರ ಕರ್ನಾಟಕದ ಊಟದಲ್ಲಿ ಭಾರಿ ವಿಶೇಷ ಹಾಗೂ ಶ್ರೀಮಂತ ಎನಿಸಿಕೊಂಡಿರುವ ರೊಟ್ಟಿ ಪಾರ್ಟಿಯನ್ನು ಅಲ್ಲಿ ನೆಲೆಸಿದ್ದ ಕನ್ನಡಿಗರು ಏರ್ಪಡಿಸಿದ್ದರು.

ಹುಬ್ಬಳ್ಳಿಯಿಂದ ಬಂದ ಖಡಕ್‌ ರೊಟ್ಟಿ

ಹುಬ್ಬಳ್ಳಿಯಿಂದ ಬಂದ ಖಡಕ್‌ ರೊಟ್ಟಿ

350 ಕ್ಕೂ ಹೆಚ್ಚು ಜನ ಈ ರೊಟ್ಟಿ ಪಾರ್ಟಿಯಲ್ಲಿ ಪಾಲ್ಗೊಂಡು ರುಚಿ ರುಚಿಯಾಗಿರುವ ಖಡಕ್ ರೊಟ್ಟಿ, ಶೇಂಗಾ ಚಟ್ನಿ, ಮೊಸರು, ಬದನೆಕಾಯಿ ಪಲ್ಯ, ಮಡಕೆ ಕಾಳು ಪಲ್ಯ, ಮಿರ್ಚಿ ಹಾಗೂ ಸಿಹಿಗಾಗಿ ವಿಶ್ವ ಪ್ರಸಿದ್ಧ ಧಾರವಾಡ ಪೇಡಾ ಗೋಕಾಕ ಕರದಂಟು ಸವಿದರು. ವಿದೇಶಕ್ಕೆ ಬಂದ ಮೇಲೆ ನಾವು ನಮ್ಮ ರುಚಿಯನ್ನು ಕಳೆದುಕೊಂಡಿದ್ದೆವು. ಆದ್ದರಿಂದ ಈ ರೊಟ್ಟಿ ಪಾರ್ಟಿಯನ್ನು ನಾವೆಲ್ಲ ಕನ್ನಡಿಗರು ಸೇರಿ ಏರ್ಪಡಿಸಿ ನಮ್ಮ ಪ್ರಮುಖ ಆಹಾರವಾಗಿರುವ ಖಡಕ್ ರೊಟ್ಟಿಯನ್ನು ಹುಬ್ಬಳ್ಳಿಯಿಂದ ಆಮದು ಮಾಡಿಕೊಂಡು ಎಲ್ಲರೂ ಸೇರಿ ಸವಿದೆವು ಎಂದು ಅಲ್ಲಿರುವ ಕನ್ನಡಿಗರು ಹೆಮ್ಮೆಯಿಂದ ಹೇಳಿದರು.

ಹಾಡು ಹಾಡಿ ಸಂಭ್ರಮಿಸಿದ ಕನ್ನಡಿಗರು

ಹಾಡು ಹಾಡಿ ಸಂಭ್ರಮಿಸಿದ ಕನ್ನಡಿಗರು

ಖಡಕ್ ರೊಟ್ಟಿಯ ರುಚಿಯ ಜೊತೆಗೆ ಹಾಡು ಹಾಡಿ ಕುಣಿದು ಕುಪ್ಪಳಿಸಿದ ನಮ್ಮ ಕನ್ನಡಿಗರು. ನಾವು ಬಂದೇವಾ.. ನಾವು ಬಂದೇವಾ.. ರೊಟ್ಟಿ ಊಟ ಸವಿಯಲಿಕ್ಕ ಎಂದು ವಿದೇಶದಲ್ಲೂ ಕನ್ನಡದ ಗೀಯ ಗೀಯ ಪದವನ್ನು ಮೇಳೈಸಿದರು. 66ನೇ ಕರ್ನಾಟಕ ರಾಜ್ಯೋತ್ಸವದಲ್ಲಿರುವ ನಾವು, ವಿದೇಶದಲ್ಲೂ ಕನ್ನಡ ಹಾಗೂ ಉತ್ತರ ಕರ್ನಾಟಕ ವಿಶೇಷ ಶೈಲಿಯ ಊಟ ರಾರಾಜಿಸುತ್ತಿರುವುದು ನಮಗೆಲ್ಲ ಹೆಮ್ಮೆಯ ವಿಷಯ. ಕರ್ನಾಟಕದ ಖಡಕ್ ರೊಟ್ಟಿ ಎಣ್ಣೆಗಾಯಿ ಬದನೆಕಾಯಿ ಪಲ್ಯ, ಶೇಂಗಾ ಚಟ್ನಿ ಮೊಸರು, ಮಡಕಿಕಾಳು ಪಲ್ಯ ವಿದೇಶದ ಕನ್ನಡಿಗರಿಗೆ ಖುಷಿಕೊಟ್ಟಿರುವುದಂತೂ ಸತ್ಯ.

English summary
Kannadigas in USA imported Kadak Roti, Eggplant Peanut Chutney from Hubballi for a party. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X