ಗೌರಿ ಲಂಕೇಶ್ ಮಾನನಷ್ಟ ಪ್ರಕರಣ: ನ.28 ಕ್ಕೆ ಅಂತಿಮ ತೀರ್ಪು

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ, ನವೆಂಬರ್, 24: ಹಿರಿಯ ಪತ್ರಕರ್ತ ದಿ.ಲಂಕೇಶ್ ಅವರ ಪುತ್ರಿ ಗೌರಿ ಲಂಕೇಶ ಅವರ ಮೇಲೆ ಆರೋಪಿಸಿದ್ದ ಮಾನನಷ್ಟ ಮೊಕದ್ದಮೆ ಪ್ರಕರಣದ ತೀರ್ಪನ್ನು ನಗರದ 2 ನೇ ಜೆಎಂಎಫ್ ಸಿ ನ್ಯಾಯಾಲಯ ನ.28ಕ್ಕೆ ಮುಂದೂಡಿದೆ.

ಗುರುವಾರ ನ್ಯಾಯಾಧೀಶ ಅಮರ ವಿ.ಎಲ್. ಆದೇಶ ನೀಡಿದರು. ಈ ಹಿಂದೆ ನ.24 ರಂದೇ ಅಂತಿಮ ತೀರ್ಪಿನ ದಿನಾಂಕವನ್ನು ನಿಗದಿಪಡಿಸಲಾಗಿತ್ತು. ಹೀಗಾಗಿ ಇಂದು ಪತ್ರಕರ್ತೆ ಗೌರಿ ಲಂಕೇಶ್ ನ್ಯಾಯಾಲಯಕ್ಕೆ ಆಗಮಿಸಿದ್ದರು.

JMFC Court postpones hearing on Gowri lankesh case to November 28

ಈಗಾಗಲೇ ವಿಚಾರಣೆ ಅಂತಿಮ ಹಂತಕ್ಕೆ ತಲುಪಿದ್ದು, ಇಂದೇ ಅಂತಿಮ ಅದೇಶ ಪ್ರಕಟಿಸಲಾಗುವುದು ಎಂದು ಎಲ್ಲರೂ ನಿರೀಕ್ಷಿಸಿದ್ದರು. ಆದರೆ ನ್ಯಾಯಾಲಯ ತೀರ್ಪನ್ನು ನ.28 ಕ್ಕೆ ಮುಂಡೂಡಿರುವುದು ಅಂತಿಮ ತೀರ್ಪಿನ ಬಗ್ಗೆ ಹಲವರ ಕುತೂಹಲ ಕೆರಳಿಸಿದೆ.

ಏನಿದು ಪ್ರಕರಣ:

ಪತ್ರಕರ್ತೆ ಗೌರಿ ಲಂಕೇಶ್ ವಿರುದ್ಧ 2008 ರಲ್ಲಿ ಲಂಕೇಶ್ ಪತ್ರಿಕೆಯಲ್ಲಿ ತಮ್ಮ ಬಗ್ಗೆ ಮಾನಹಾನಿಕಾರ ಲೇಖನ ಬರೆದಿದ್ದಾರೆ ಎಂದು ಸಂಸದ ಪ್ರಹ್ಲಾದ ಜೋಶಿ ಸೇರಿದಂತೆ ಮೂವರು ಬಿಜೆಪಿ ಧುರೀಣರು ದೂರಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.

JMFC Court postpones hearing on Gowri lankesh case to November 28

ಈ ಕುರಿತು ಕಳೆದ 8 ವರ್ಷಗಳಿಂದ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿತ್ತು. ಹಲವಾರು ಬಾರಿ ಗೌರಿ ಲಂಕೇಶ್ ವಿಚಾರಣೆ ಸಂದರ್ಭದಲ್ಲಿ ಹಾಜರಿರುತ್ತಿರಲಿಲ್ಲ.

ಈಗ ಅಂತಿಮ ತೀರ್ಪಿನ ದಿನ ಹತ್ತಿರ ಬಂದಿರುವುದರಿಂದ ಕಳೆದ ಮೂರ್ನಾಲ್ಕು ವಿಚಾರಣೆಗಾಗಿ ನಗರದ ನ್ಯಾಯಾಲಯಕ್ಕೆ ಗೌರಿ ಲಂಕೇಶ್ ಬರುತ್ತಿದ್ದಾರೆ. ಪ್ರಕರಣದ ಕುತೂಹಲದಿಂದ ಹಲವಾರು ಸಾರ್ವಜನಿಕರು ನ್ಯಾಯಾಲಯದಲ್ಲಿ ಹಾಜರಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Hubballi Second JMFC Court Thursday posted hearing a defamation case filed by Dharwad MP Prahlad Joshi and other BJP leaders against journalist Gauri Lankesh to Nov 28.
Please Wait while comments are loading...