''Caste Census of Karnataka: ವರದಿ ವಿರುದ್ಧ ಕಾನೂನು ಹೋರಾಟ, ಜೂ. 8ಕ್ಕೆ ಜೈನ ಜನಣಗತಿ ವರದಿ ಸಲ್ಲಿಕೆ''
ಹುಬ್ಬಳ್ಳಿ, ಏಪ್ರಿಲ್ 17: ಕರ್ನಾಟಕ ರಾಜ್ಯ ಸರ್ಕಾರ ಜಾತಿ ಗಣತಿ ವರದಿ ಅನುಷ್ಠಾನಕ್ಕೆ ತಯಾರಿ ಮಾಡಿಕೊಂಡಿದೆ. ಒಕ್ಕಲಿಗರು, ಲಿಂಗಾಯತರಂತೆ ಇದೀಗ ಜೈನ ಸಮುದಾಯದವರು ಜಾತಿ ಗಣತಿ ವರದಿ ವಿರೋಧಿಸುತ್ತಿದ್ದಾರೆ. ಈ ವರದಿ ಅವೈಜ್ಞಾನಿಕವಾಗಿದೆ. ಹೀಗಾಗಿ ಇದಕ್ಕೆ ನಮ್ಮ ಸಂಪೂರ್ಣ ವಿರೋಧವಿದೆ ಎಂದು ವರೂರಿನ ನವಗ್ರಹ ಕ್ಷೇತ್ರದ ಎ.ಜಿ.ಎಮ್ ಸಮೂಹ ಸಂಸ್ಥೆ ಅಧ್ಯಕ್ಷ ಹಾಗೂ ರಾಷ್ಟ್ರಸಂತ ಆಚಾರ್ಯ ಶ್ರೀ 108 ಗುಣಧರನಂದಿ ಮಹಾರಾಜ ಹೇಳಿದರು.
ಇಲ್ಲಿನ ವರೂರು ಕ್ಷೇತ್ರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ರಾಜ್ಯ ಸರ್ಕಾರ ಬಹಿರಂಪಡಿಸಲು ಮುಂದಾಗಿರುವ ಜಾತಿಗಣತಿ ವೈಜ್ಞಾನಿಕವಾಗಿದೆ. ಜೈನ ಸಮುದಾಯ ವರದಿ ವಿರೋಧಿಸಿಸುತ್ತದೆ. ಕರ್ನಾಟಕ ರಾಜ್ಯದಲ್ಲಿ ಜೈನ್ ಸಮುದಾಯವು ಕೇವಲ ಒಂದು ಲಕ್ಷ 65,565 ಜನಸಂಖ್ಯೆ ಹೊಂದಿದೆ ಎಂದು ಅಂಕಿ ಅಂಶಗಳಿಲ್ಲದೆ ತಿಳಿಸಲಾಗಿದೆ.

ರಾಜ್ಯ ಸರ್ಕಾರಕ್ಕೆ ಜೈನ ಜಸಂಖ್ಯಾ ವರದಿ ಸಲ್ಲಿಕೆ..
ಕರ್ನಾಟಕ ಸರ್ಕಾರ ಜಾರಿಗೊಳಿಸಲು ಹೊರಟಿರುವ ಜಾತಿಗಣತಿಯು ಅಸಮಂಜಸವಾಗಿದೆ. ಇದರಿಂದ ಜೈನ ಸಮಾಜಕ್ಕೆ ಅನ್ಯಾಯವಾಗಲಿದೆ. ಕಾರಣ ಸ್ವತಃ ನಾನೇ ಇಂದಿನಿಂದ ರಾಜ್ಯಾದ್ಯಂತ ಸಂಚರಿಸಿ ಜಾತಿ ಸಮೀಕ್ಷೆ ನಡೆಸಿ ಜೂನ್ 8 ರಂದು ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸುತ್ತೇವೆ ಎಂದು ಹೇಳಿದರು.
ಸರ್ಕಾರ ಜಾತಿ ಗಣತಿ ಸಮೀಕ್ಷೆ ಮಾಡುವಾಗ ಇದುವರೆಗೂ ಯಾರು ನನ್ನನ್ನು ಸೇರಿ ಸಮಾಜದ ಯಾರೊಬ್ಬರನ್ನೂ ಭೇಟಿಯಾಗಿಲ್ಲ. ಈಗ ಏಕಾಏಕಿ ಜಾತಿ ಗಣತಿ ಜಾರಿಗೊಳಿಸಲಾಗುತ್ತಿದೆ. ಇದರಿಂದ ಸಮಾಜದ ಜನರಿಗೆ ಭಾರಿ ಅನ್ಯಾಯವಾಗಲಿದೆ. ಸಮಾಜದಿಂದ ಈಗ ನಡೆಸಲಾಗುವ ಸಮೀಕ್ಷಾ ವರದಿಯನ್ನು ಸರ್ಕಾರ ಪರಿಗಣಿಸಬೇಕು. ಒಂದು ವೇಳೆ ನಿರ್ಲಕ್ಷ್ಯಿಸಿದರೆ ಕಾನೂನು ಹೋರಾಟ ಮಾಡಲು ಸಿದ್ಧ ಎಂದು ಅವರು ಸರ್ಕಾರವನ್ನು ಎಚ್ಚರಿಸಿದರು.
ಜೈನ ಸಮುದಾಯ ಜನಸಂಖ್ಯೆ ಸಮೀಕ್ಷಾಗಿ ನಾವು ನಾಡಿನ ಪ್ರತಿ ಹಳ್ಳಿ ಗ್ರಾಮಗಳನ್ನು ಸಂಚರಿಸುತ್ತೆವೆ. ಮನೆ ಮನೆಗೆ ತೆರಳಿ ಸಮಾಜದ ಅಂಕಿ ಸಂಖ್ಯೆಯನ್ನು ಪಡೆಯುತ್ತೇವೆ. ರಾಜ್ಯದಲ್ಲಿರುವ ಜೈನ್ ಸಮುದಾಯದ ಧರ್ಮ ಗುರುಗಳು ತಮ್ಮ ತಮ್ಮ ವಿಭಾಗಗಳಲ್ಲಿ ಸಂಚರಿಸಿ ಜಾತಿ ಗಣತಿ ಮಾಡಲಿದ್ದಾರೆ ಎಂದು ಅವರು ವಿವರಿಸಿದರು.
ಕಾನೂನು ಹೋರಾಟ, ಪ್ರತಿಭಟನೆಗೆ ನಿರ್ಧಾರ
ನಾನು ಸ್ವತಃ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ, ಐನಾಪುರ, ಹುಕ್ಕೇರಿ ಸೇರಿದಂತೆ ಎಲ್ಲ ತಾಲೂಕುಗಳನ್ನು ಸಂಚರಿಸಿ ಸಮೀಕಷೆ ನಡೆಸುತ್ತೇನೆ. ಮೇ 8ರಂದು ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ರಾಜ್ಯದಲ್ಲಿ ಪ್ರತಿಭಟನೆ ಮತ್ತು ವರದಿ ವಿರುದ್ಧ ಕಾನೂನು ಹೋರಾಟ ಪ್ರಾರಂಭಿಸುತ್ತೇವೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ಆರ್ಥಿಕ, ಶೈಕ್ಷಣಿಕ ಮತ್ತು ಸಾಮಾಜಿಕ ವರದಿಯಿಂದ (ಜಾತಿ ಗಣತಿ ವರದಿ) ಸಮಾಜದ ವಿದ್ಯಾರ್ಥಿಗಳಿಗೆ ಅನ್ಯಾಯವಾಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜಾತಿ ಗಣತಿಯನ್ನು ಪರಿಗಣಿಸಬಾರದು. ಅವೈಜ್ಞಾನಿಕ ಗಣತಿ ವರದಿಯನ್ನು ರಾಜ್ಯದಲ್ಲಿ ಜಾರಿಗೆ ತರಬಾರದು ಎಂದು ಅವರು ಆಗ್ರಹಿಸಿದರು.
ಇದೇ ವೇಳೆ ರಾಜ್ಯ ಸಚಿವ ಜಮೀರ್ ಅಹ್ಮದ್ ಅವರು ಜೈನ ಸಮಾಜವು ರಾಜ್ಯದಲ್ಲಿ 20 ಲಕ್ಷಕ್ಕೂ ಹೆಚ್ಚಿಸಿದೆ ಎಂದು ವಿಧಾನಸೌಧದ ಸಭೆಯಲ್ಲಿ ಹೇಳಿದ್ದಾರೆ. ಅವರ ಹೇಳಿಕೆ ಸ್ವಾಗತಾರ್ಹವಾದದ್ದು. ಗಣತಿ ವರದಿ ಜಾರಿಗೆ ಮುಂದಾಗಿರುವ ಮುಖ್ಯಮಂತ್ರಿಗಳು ರಾಜ್ಯ ಸಚಿವ ಹೇಳಿಕೆ ಪರಿಗಣಿಸುವಂತೆ ಅವರು ಆಗ್ರಹಿಸಿದರು.












Click it and Unblock the Notifications