ಹುಬ್ಬಳ್ಳಿ, ಡಿಸೆಂಬರ್ 28 : ವೀರಶೈವ ಹಾಗು ಲಿಂಗಾಯತ ಪ್ರತ್ಯೇಕ ಎಂಬುದು ನಮ್ಮ ವಾದ ಆದರೆ ದಿಂಗಾಲೇಶ್ವರ ಸ್ವಾಮಿಗಳು ಎರಡೂ ಒಂದೇ ಎಂದು ಪ್ರತಿಪಾದಿಸುತ್ತಿದ್ದಾರೆ ಈ ಕುರಿತು ಡಿ.೩೦ರಂದು ಮೂರು ಸಾವಿರ ಮಠದಲ್ಲಿ ಬಹಿರಂಗ ಚರ್ಚೆ ನಡೆಸಲಿದ್ದೇವೆ ಎಂದು ಎಂಎಲ್ ಸಿ ಬಸವರಾಜ ಹೊರಟ್ಟಿ ಹೇಳಿದರು.
ಗದಗದಲ್ಲಿ ವೀರಶೈವ-ಲಿಂಗಾಯತ ಸಮಾವೇಶ, 8 ನಿರ್ಣಯ
ನಾವು ಲಿಂಗಾಯತ ಹಾಗೂ ವೀರಶೈವ ಬೇರೆ ಎಂದು ಹೇಳಿದ್ದೇವೆ ಆದರೆ ದಿಂಗಾಲೇಶ್ವರ ಸ್ವಾಮಿಗಳು ಇದನ್ನು ಒಪ್ಪುತ್ತಿಲ್ಲ. ಇದರ ಬಗ್ಗೆ ಸ್ಪಷ್ಟನೆ ನೀಡುವಂತೆ ಕೇಳಿದ್ದೇವೆ. ಹೀಗಾಗಿ ಡಿ. 30 ರಂದು ಬೆಳಗ್ಗೆ ೧೧ ಗಂಟೆಗೆ ಮೂರು ಸಾವಿರ ಮಠದಲ್ಲಿ ಬಹಿರಂಗ ಚರ್ಚೆ ಏರ್ಪಡಿಸಲಾಗಿದೆ. ಇದರ ಹಿನ್ನೆಲೆ ಮೂರು ಸಾವಿರಮಠಕ್ಕೆ ಭೇಟಿ ನೀಡಿರುವುದಾಗಿ ತಿಳಿಸಿದರು.
ಅಧ್ಯಯನ ಸಮಿತಿ ಸದಸ್ಯರಿಗೆ ಧರ್ಮದ ತಿಳುವಳಿಕೆ ಇಲ್ಲ: ರಂಭಾಪುರಿ ಶ್ರೀ
ದಿಂಗಾಲೇಶ್ವರ ಮಹಾಸ್ವಾಮಿಗಳು ರಕ್ಷಣೆ ಬೇಕೆಂದು ಹೇಳಿದ್ದಾರೆ. ಆದರೆ ಅವರಿಗೆ ರಕ್ಷಣೆ ಕೊಡಲು ನಾವು ಪೊಲೀಸರಲ್ಲ.ನಮ್ಮ ಬೆಂಬಲಿಗರಿಂದ ಯಾವುದೇ ತೊಂದರೆ ಆಗುವುದಿಲ್ಲ ಎಂದು ಹೊರಟ್ಟಿ ಸ್ಪಷ್ಟನೆ ನೀಡಿದರು. ಚರ್ಚೆಯಲ್ಲಿ ವೀರಶೈವ ಮತ್ತು ಲಿಂಗಾಯತ ಧರ್ಮದ ಪ್ರತಿಪಾದಕರ ಐವರು ತಜ್ಞರು ಭಾಗಿಯಾಗಲಿದ್ದಾರೆ. ಲಿಂಗಾಯತ ಧರ್ಮ ಪ್ರತ್ಯೇಕ ಎಂಬುದಕ್ಕೆ ನಮ್ಮ ಬಳಿ ದಾಖಲೆಗಳು ಇವೆ ಎಂದು ಹೇಳಿದರು.
Oneindia ಬ್ರೇಕಿಂಗ್ ನ್ಯೂಸ್ . ಇಡೀ ದಿನ ತಾಜಾ ಸುದ್ದಿಗಳ ಪಡೆಯಿರ.subscribe to Kannada Oneindia.
ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!