ಹುಬ್ಬಳ್ಳಿಯಲ್ಲಿ ಮತ್ತಿಬ್ಬರು ಮಹಿಳೆಯರು ನಾಪತ್ತೆ

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ, ನವೆಂಬರ್ 24: ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ ಮತ್ತೆ ಇಬ್ಬರು
ಮಹಿಳೆಯರು ನಾಪತ್ತೆಯಾದ ಪ್ರಕರಣ ದಾಖಲಾಗಿದೆ.

ನಗರದ ಬೆಂಡಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಗಬ್ಬೂರಿನ ರೇಣುಕಾ ನಟರಾಜ ಕೋಟಿಗೌಡ್ರ
(21) ಎಂಬ ವಿವಾಹಿತ ಮಹಿಳೆ ತನ್ನ ಗಂಡನ ಮನೆಯಿಂದ ನ.6 ರಿಂದ
ನಾಪತ್ತೆಯಾಗಿದ್ದಾಳೆ. ಯಾರಿಗೂ ಹೇಳದೇ ಗಂಡನ ಮನೆಯಿಂದ ರೇಣುಕಾ ಮನೆ ಬಿಟ್ಟು
ಹೋಗಿದ್ದಾಳೆ ಎಂದು ಬ್ಯಾಡಗಿ ಸಂಗಮೇಶ್ವರ ನಗರದ ಬಸರವಾಜ ತಿಪ್ಪಣ್ಣ ಕುರವತ್ತಿ ಪೊಲೀಸ
ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.[ದೀಪಾವಳಿಗೆ ಹೆಂಡತಿ ಮನೆಗೆ ಹೋದ ವ್ಯಕ್ತಿ ಶವವಾಗಿ ಪತ್ತೆ]

Hubli city two women escape in other places

ಧಾರವಾಡದ ಸ್ಥಳೀಯ ನೆಹರು ನಗರದ ಸಲ್ಮಾ ಅಮಾನುಲ್ಲಾಖಾನ ಪಠಾಣ (37) ಎಂಬ ಮಹಿಳೆ ಮನೆ
ಕೆಲಸಕ್ಕೆ ಹೋಗುತ್ತೇನೆ ಎಂದು ನ.3 ರಂದು ಹೋದವಳು ಮತ್ತೆ ಮರಳಿ ಮನೆಗೆ ಬಂದಿಲ್ಲ ಎಂದು ಧಾರವಾಡ
ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಕುರಿತು ಅಮಾನುಲ್ಲಾಖಾನ್ ಮಹ್ಮದ್
ಪಠಾಣ ಎಂಬುವವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮಟ್ಕಾ ಬುಕ್ಕಿಗಳ ಬಂಧನ
ನಗರದ ಅಂಚಟಗೇರಿ ಓಣಿ ಮತ್ತು ಪೆಂಡಾರ ಗಲ್ಲಿಯಲ್ಲಿ 1 ರೂ. ಗೆ 90 ರೂ. ಕೊಡುತ್ತೇವೆ
ಎಂದು ಮಟ್ಕಾ ನಂಬರ್ ಬರೆದುಕೊಳ್ಳುತ್ತಿದ್ದ ಇಬ್ಬರನ್ನು ಉಪನಗರ ಪೊಲೀಸರು ಬಂಧಿಸಿ
ಅವರಿಂದ ನಗದು ವಶಪಡಿಸಿಕೊಂಡಿದ್ದಾರೆ. ಮನೋಹರ ಹನುಮಂತಸಾ ಖೋಡೆ, ಶ್ರೀನಿವಾಸ ಮಾದುಸಾ
ಮೇತ್ರಾಣಿ ಬಂಧಿತ ಜೂಜಾಟದ ಆರೋಪಿಗಳಾಗಿದ್ದಾರೆ.

ದಂಡ:
ಸಂಚಾರ ನಿಯಮ ಉಲ್ಲಂಘನೆ ಮಾಡಿದ 525 ಕೇಸ ದಾಖಲಿಸಿ 92,000 ರೂ. ದಂಡ ವಸೂಲಿ
ಮಾಡಲಾಗಿದೆ ಎಂದು ಹು-ಧಾ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ,

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Hubli city two women missing in other places and other incidents. One is missing form his home, another is she went to work not come back.
Please Wait while comments are loading...