ಯಡಿಯೂರಪ್ಪ ಸಿಎಂ ಆದರೆ ಒಂದು ದಿನ 'ಚೌಕಿದಾರ್' ಆಗ್ತೀನಿ: ಜಮೀರ್ ಅಹ್ಮದ್

Recommended Video

      ಬಿ ಎಸ್ ವೈ ಮುಖ್ಯಮಂತ್ರಿಯಾದರೆ ಜಮೀರ್ ಅಹ್ಮದ್ ಖಾನ್ ಈ ಕೆಲಸ ಮಾಡ್ತಾರಂತೆ | Oneindia Kannada

      ಹುಬ್ಬಳ್ಳಿ, ಮೇ 13: ಬಿಜೆಪಿಯವರು ಹೇಳುತ್ತಿರುವಂತೆ ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ಸರ್ಕಾರ ಪತನಗೊಂಡು ಬಿಜೆಪಿ ಅಧಿಕಾರಕ್ಕೆ ಬಂದರೆ ರಾಜಕೀಯ ನಿವೃತ್ತಿ ಪಡೆದುಕೊಳ್ಳುವುದಾಗಿ ಸಚಿವ ಜಮೀರ್ ಅಹ್ಮದ್ ಸವಾಲು ಹಾಕಿದರು.

      ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಮೇ 25ರ ಒಳಗೆ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದರೆ ವಾಚ್‌ಮನ್ ಉಡುಪು ಹಾಕಿಕೊಂಡು ಸಂಪೂರ್ಣ ಒಂದು ದಿನ ಅವರ ಮನೆ ಬಾಗಿಲು ಕಾಯುತ್ತೇನೆ. ಈ ಸವಾಲನ್ನು ಅವರು ಸ್ವೀಕರಿಸಲಿ. ಸಿಎಂ ಆಗದೆ ಇದ್ದರೆ ಅವರೇನು ಮಾಡುತ್ತಾರೆ ಹೇಳಲಿ ಎಂದು ಹೇಳಿದರು.

      ಸಿದ್ದರಾಮಯ್ಯ ಅವರು ಮತ್ತೆ ಸಿಎಂ ಆಗಬೇಕು ಎನ್ನುತ್ತಿರುವವರು ಕಾಂಗ್ರೆಸ್ ಚೇಲಾಗಳು ಎಂಬ ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಾವು ಚಮಚಾಗಿರಿ, ಚೇಲಾಗಿರಿ ಮಾಡುತ್ತಿಲ್ಲ ಎಂದರು.

      Hubballi zameer ahmed i will gaurd yeddyurappa house if he become cm before may 25

      ಜೆಡಿಎಸ್ ಮುಖಂಡ ಎಚ್. ವಿಶ್ವನಾಥ್ ಹೇಳಿಕೆಗೆ ಕಿಡಿಕಾರಿದ ಜಮೀರ್, ಅವರೂ ಕಾಂಗ್ರೆಸ್‌ನಲ್ಲಿ ಇದ್ದವರು. ಅವರಿಗೆ ಚಮಚಾಗಿರಿ ಮಾಡಿ ಅಭ್ಯಾಸ ಇರಬೇಕು. ಉಳಿದವರೂ ಚಮಚಾಗಳು ಎಂದುಕೊಳ್ಳುತ್ತಾರೆ ಎಂದು ಹೇಳಿದರು.

      ಕಾಂಗ್ರೆಸ್ ಹಣ ಕೊಟ್ಟು ಮತಗಳನ್ನು ಖರೀದಿ ಮಾಡುತ್ತಿದೆ ಎಂಬ ಬಿಜೆಪಿ ಆರೋಪಕ್ಕೆ, ಬಿಜೆಪಿಯವರು ಬಾಯಿ ಚಟಕ್ಕೆ ಏನೇನೋ ಹೇಳುತ್ತಾರೆ. ಹಣದಿಂದ ಮತ ಸಿಗುವುದಿಲ್ಲ. ಹಾಗಿದ್ದರೆ ನಾವೇಕೆ ಇಲ್ಲಿ ಬಂದು ಬೀಡುಬಿಟ್ಟು ಪ್ರಚಾರ ಮಾಡಬೇಕಿತ್ತು ಎಂದರು.

      ಸಿದ್ದರಾಮಯ್ಯ ಅವರು ಈಗಲೇ ಸಿಎಂ ಆಗಲಿ ಎಂದು ಯಾರೂ ಹೇಳಿಲ್ಲ. ಹೈಕಮಾಂಡ್ ರಾಹುಲ್ ಗಾಂಧಿ ಅವರು ಈ ಸರ್ಕಾರಕ್ಕೆ ಬೆಂಬಲ ನೀಡುವಂತೆ ಸೂಚಿಸಿದ್ದಾರೆ. ಈ ಸರ್ಕಾರದ ಐದು ವರ್ಷ ಮುಗಿದು ಮುಂದಿನ ಚುನಾವಣೆ ಬಂದಾಗ ಸಿದ್ದರಾಮಯ್ಯ ಸಿಎಂ ಆಗಲಿ ಎಂದು ನಾವು ಮತ್ತು ಜನರು ಕಾಯುತ್ತಿದ್ದೇವೆ ಎಂದು ಸ್ಪಷ್ಟನೆ ನೀಡಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+