ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಏನಿದು ಬಿಯರ್ ಯೋಗ? ಇದೆಲ್ಲಿಂದ ಬಂತು ಹುಬ್ಬಳ್ಳಿಗೆ?

By Basavaraj Maralihalli
|
Google Oneindia Kannada News

ಹುಬ್ಬಳ್ಳಿ, ಜೂನ್ 24 : ಬೆಂಗಳೂರು ಹಾಗೂ ಹುಬ್ಬಳ್ಳಿಯಲ್ಲಿ ಆಯೋಜಿಸಿರುವ ವಿವಾದಾತ್ಮಕ ಬಿಯರ್ ಯೋಗಕ್ಕೆ ಸರ್ಕಾರ ಅನುಮತಿ ನೀಡಬಾರದು ಎಂದು ಯೋಗ ಶಿಕ್ಷಕ ಪ್ರಸನ್ನ ದೀಕ್ಷಿತ್ ಆಗ್ರಹಿಸಿದ್ದಾರೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಯೋಗ ಭಾರತೀಯರಿಗೆ ಭಾವನಾತ್ಮಕ ವಿಷಯ. ಇದು ಮನಸ್ಸಿಗೆ ಸಂಬಂಧಿಸಿದ ಕ್ರಿಯೆಯೂ ಆಗಿದೆ.

ಭಾರತೀಯ ಯೋಗ ಪದ್ಧತಿಯನ್ನು ಒಪ್ಪಿ ಪ್ರಪಂಚದ ಹಲವು ಭಾಗಗಳಲ್ಲಿ ಪ್ರತಿವರ್ಷ ಜೂನ್ 21 ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲಾಗುತ್ತದೆ. ಇಂಥ ಯೋಗವನ್ನು ಬಿಯರ್‌ ನೊಂದಿಗೆ ಮಾಡುವುದು ಸರಿಯಲ್ಲ, ಇದಕ್ಕೆ ಸರ್ಕಾರ ಅನುಮತಿ ನೀಡಬಾರದು ಎಂದು ಒತ್ತಾಯಿಸಿದರು.

Hubballi Yoga teachers opposed Beer yoga

ಬಿಐಆರ್ ಎಂಬ ಕಂಪನಿಯು ತನ್ನ ಪ್ರಚಾರಕ್ಕಾಗಿ ಯೋಗದ ಹೆಸರಿನಲ್ಲಿ ಇಂಥ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಈ ಶಿಬಿರದಲ್ಲಿ ಪಾಲ್ಗೊಳ್ಳುವವರಿಗೆ ತಲಾ 700 ರು.ಪ್ರವೇಶ ಶುಲ್ಕ ನಿಗದಿಪಡಿಸಿದೆ.

ಇದಕ್ಕೆ ಸರ್ಕಾರ ಹಾಗೂ ಬೆಂಗಳೂರು ಪೊಲೀಸ್ ಇಲಾಖೆ ಅನುಮತಿ ನೀಡಿದ್ರೆ ಭಾರತೀಯ ಪರಂಪರೆ ಅವಹೇಳನ ಮಾಡಿದಂತಾಗುತ್ತದೆ. ಈಗಾಗಲೇ ಪ್ರಧಾನಿ ಕಚೇರಿಗೆ ದೂರು ನೀಡಲಾಗಿದೆ.

'ಇದು ಭಾರತೀಯ ಸಂಸ್ಕೃತಿಗೆ ವಿರುದ್ಧವಾಗಿರುವುದರಿಂದ ಹುಬ್ಬಳ್ಳಿ ಹಾಗೂ ಬೆಂಗಳೂರಿನಲ್ಲಿ ಆಯೋಜಿಸಿರುವ ಈ ಕಾರ್ಯಕ್ರಮಕ್ಕೆ ಅನುಮತಿ ನೀಡಬಾರದು' ಎಂದು ಆಗ್ರಹಿಸಿದರು.

ಏನಿದು ಬಿಯರ್ ಯೋಗ? : ಈ ಯೋಗ ಮಾಡಬೇಕಾದ್ರೆ ಕೈಯಲ್ಲಿ ಒಂದು ಬಾಟಲ್ ಬಿಯರ್ ಕಡ್ಡಾಯ. ಜರ್ಮನಿ ಮಂದಿಯಿಂದ ಪರಿಚಿತವಾದ ಈ ಯೋಗ ಇಂದು ವಿಶ್ವದೆಲ್ಲೆಡೆ ಪ್ರಸಿದ್ಧಿ ಪಡೆದುಕೊಂಡಿದೆ. ಯೋಗ ಜತೆ ಬಿಯರ್ ಕುಡಿಯುವುದರಿಂದ ಮನಸಿಗೆ ರಿಲಾಕ್ಸ್ ಹಾಗೂ ಎನರ್ಜಿ ಬರಲಿದೆಯಂತೆ.

English summary
Hubballi Yoga teachers and people opposed Beer yoga by BIR company.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X