ಹುಬ್ಬಳ್ಳಿ ಉದ್ಯಮಿಯ ಪಾಲಾದ ವಿಜಯ್ ಮಲ್ಯನ ದುಬಾರಿ ಕಾರು!

Posted By:
Subscribe to Oneindia Kannada

ಹುಬ್ಬಳ್ಳಿ, ಆಗಸ್ಟ್ 28 : ಭಾರತೀಯ ಬ್ಯಾಂಕುಗಳಿಂದ ಸಾವಿರಾರು ಕೋಟಿ ಹಣ ಸಾಲ ಪಡೆದು ತೀರಿಸಲಾಗದೇ ಲಂಡನ್ ನಲ್ಲಿ ನೆಲೆಸಿರುವ ವಿಜಯ ಮಲ್ಯ ಅವರ ದುಬಾರಿ ಕಾರನ್ನು ಹುಬ್ಬಳ್ಳಿಯ ಉದ್ಯಮಿಯೊಬ್ಬರು ಖರೀದಿಸಿದ್ದಾರೆ.

   Vijay Malya`s Maserati ,Porche On Auction | OneIndia Kannada

   ವಿಜಯ್ ಮಲ್ಯಗೆ ಸೇರಿರುವ ಎರಡು ದುಬಾರಿ ಬೆಲೆಯ ಕಾರುಗಳನ್ನು ಕಳೆದ ಜನವರಿಯಲ್ಲಿ ಮುಂಬೈನಲ್ಲಿ ನಡೆದ ಆನ್‌ ಲೈನ್ ಹರಾಜಿನಲ್ಲಿ ಹುಬ್ಬಳ್ಳಿಯ ಉದ್ಯಮಿ ಹನುಮಂತ ರೆಡ್ಡಿ ಎನ್ನುವರು ಖರೀದಿಸಿದ್ದಾರೆ.

   Hubballi's businessman purchased Mallya's two car for Rs 1.58 lakh

   2002 ಮಾಡೆಲ್ ನ ಹುಂಡೈ ಸೋನಾಟಾ MH 01 DA 7227 ಪಾಸಿಂಗ್ ಗೋಲ್ಡ್ ಕಲರ್ ಕಾರನ್ನು ಕೇವಲ 40 ಸಾವಿರ ರು,ಗೆ ಖರೀದಿಸಿದ್ದಾರೆ.

   ಇನ್ನು ಹುಂಡೈ ಎಕಾರ್ಡ್ MH 01 DA 1235 ನಂಬರಿನ ಕಾರನ್ನು ಹನುಮಂತ ರೆಡ್ಡಿ ಅವರು 1 ಲಕ್ಷಕ್ಕೆ ‌ಖರೀದಿಸಿದ್ದಾರೆ. ಟ್ಯಾಕ್ಸ್ ಸೇರಿ ಒಟ್ಟು1.58 ಲಕ್ಷ ಹಣ ನೀಡಿ ಎರಡೂ ಕಾರುಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

   ಕಾರು ಹಳೆಯದಾದರೂ, ಕಾರುಗಳು ಚೆನ್ನಾಗಿದ್ದು, ಜನರು ಇದೀಗ ಈ ಎರಡು ಕಾರುಗಳನ್ನು ಅಧಿಕ ಬೆಲೆಗೆ ನೀಡುವಂತೆ ಜನರು ಕೇಳುತ್ತಿದ್ದಾರೆ ಎಂದು ಹನುಮಂತ ರೆಡ್ಡಿ ಹೇಳಿಕೊಂಡಿದ್ದಾರೆ.

   ಹುಂಡೈ ಸೋನಾಟಾ ಕಾರನ್ನು 2.5 ಲಕ್ಷ ರು. ಹುಂಡೈ ಎಕಾರ್ಡ್ ಕಾರನ್ನು 4.5 ಲಕ್ಷ ರು.ಗಳಿಗೆ ನೀಡುವಂತೆ ಕೇಳಿದ್ದಾರೆ. ಆದರೆ. ಇವುಗಳನ್ನು ಯಾವುದೇ ಕಾರಣಕ್ಕೂ ಮಾರಾಟ ಮಾಡುವುದಿಲ್ಲವೆಂದು ಅವರು ತಿಳಿಸಿದ್ದಾರೆ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Good times have begun for Hubballi's businessman Hanumantha Reddy as he purchased two cars belonging to liquor baron Vijay Mallya, at Rs 1.58 lakh through an online auction. The original cost of those cars were Rs 53 lakh, when Vijay Mallya purchased them years ago.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ