Hubballi Rain: ಹುಬ್ಬಳ್ಳಿ-ಧಾರವಾಡದಲ್ಲಿ ಆಲಿಕಲ್ಲು ಸಹಿತ ಭಾರೀ ಮಳೆ: ವಿದ್ಯುತ್ ಕಟ್, ಆವಾಂತರ, ಜನಜೀವನ ಅಸ್ತವ್ಯಸ್ತ
ಹುಬ್ಬಳ್ಳಿ, ಮೇ 11: ಉತ್ತರ ಕರ್ನಾಟಕದ ಅವಳಿ ನಗರವೆಂದೆ ಖ್ಯಾತಿ ಪಡೆದಿರುವ ಹುಬ್ಬಳ್ಳಿ-ಧಾರವಾಡ (Hubballi Dharwad Rain) ದಲ್ಲಿ ಶನಿವಾರ ದಿಢೀರ್ ಆಲಿಕಲ್ಲು ಸಹಿತ ಧಾರಾಕಾರ ಮಳೆ ಸುರಿಯಿತು. ಬಿಸಲಿನಿಂದ ಕಂಗೆಟ್ಟಿದ್ದ ಜನರಿಗೆ ತಂಪು ವಾತಾವರಣದಿಂದ ನಿಟ್ಟುಸಿರುವ ಬಿಟ್ಟರು, ಮತ್ತೊಂದೆಡೆ, ಭಾರಿ ಮಳೆಗೆ ಸಂಚಾರ, ಜನಜೀವನ ಅಸ್ತವ್ಯಸ್ತವಾಗಿತು.
ಹಲವು ದಿನಗಳಿಂದ ತೀವ್ರ ತಾಪಮಾನ ಬಿಸಿಯ ವಾತಾವರಣ ಕಂಡಿದ್ದ ಹುಬ್ಬಳ್ಳಿ, ಧಾರವಾಡ, ಲಕ್ಷ್ಮೇಶ್ವರ ರಸ್ತೆ, ಗದಗ ರಸ್ತೆ ಹಾಗೂ ಸುತ್ತಮುತ್ತಲಿನ ತಾಲೂಕುಗಳಲ್ಲಿ ಶನಿವಾರ ಸಾಧಾರಣದಿಂದ ಭಾರೀ ಮಳೆ ದಾಖಲಾಗಿದೆ.

ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ, ಇಂದಿನಿಂದ ಉತ್ತರ ಒಳನಾಡಿನ ಭಾಗದ ಜಿಲ್ಲೆಗಳಲ್ಲಿ ಅತ್ಯಧಿಕ ಮಳೆ ಆಗಲಿದೆ. ಇದಕ್ಕೆ ಪೂರಕವಾಗಿ ಇಂದು ಧಾರವಾಡ ಜಿಲ್ಲೆ ವ್ಯಾಪ್ತಿಯಲ್ಲಿ ಜೋರು ಬಿರುಗಾಳಿ, ಗುಡುಗು, ಸಿಡಿಲು ಸಮೇತ ಆಲಿಕಲ್ಲು ಮಳೆ ದಾಖಲಾಗಿದೆ.
ಭಾರೀ ಮಳೆಗೆ ಕೆಲವು ಮರಗಳು ಧರೆಗೆ: ವಿದ್ಯುತ್ ಕಟ್
ದಿಢೀರ್ ಬಂದ ಆಲಿಕಲ್ಲು ಮಳೆಗೆ ಅನೇಕ ಮರಗಳು, ಮರದಕೊಂಬೆಗಳು ಧರೆಗುರುಳಿವೆ. ಕೇಲವಡೆ ವಾಹನಗಳು ಜಖಂಗೊಂಡಿವೆ. ಭಾರೀ ಗುಡುಗು ಸಿಡಿಲು ಮಿಶ್ರಿತ ಗಾಳಿಯ ರಭಸಕ್ಕೆ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಯ ಕಂಬಗಳಿಗೂ ಹಾನಿ ಉಂಟಾಗಿದೆ. ಹುಬ್ಬಳ್ಳಿಯ ಮಾಧವಪುರದಲ್ಲಿ ವಿದ್ಯುತ್ ಟಿಸಿವೊಂದು ಸುಟ್ಟು ಹೋಗಿದೆ.
ಮರ ಬಿದ್ದು ಮನೆಗಳು ಜಖಂ
ಇನ್ನೂ ನಗರದ ಹೃದಭಾಗವಾದ ಕೊಪ್ಪೀಕರ್ ರಸ್ತೆ, ಅರವಿಂದ ನಗರ, ಆನಂದ ನಗರ ಮುಖ್ಯ ರಸ್ತೆ, ಹೊಸೂರ ವೃತ್ತ, ಸಿದ್ಧಾರೂಢಮಠ, ಹಳೆ ಆದಾಯ ತೆರಿಗೆ ಕಚೇರಿ, ಜನತಾ ಬಜಾರ್, ದುರ್ಗದ್ ಬೈಲ್ ಮುಂತಾದ ಕಡೆಗಳಲ್ಲಿ ವಾಹನ ಸವಾರರು ದಟ್ಟಣೆಯಿಂದ ಮಳೆಯಲ್ಲೇ ನೆಂದರು.
ಕೆಲ ಕಾಲ ಸುರಿದ ಉತ್ತಮ ಮಳೆ
ಮುಂದೆಯು ಹೋಗಲಾರದೇ ಓಡಾಟಕ್ಕೆ ಸಾಕಷ್ಟು ತೊಂದರೆ ಆಯಿತು. ಕೆಲವರು ರಸ್ತೆಯಲ್ಲಿ ಬೈಕ್ ನಿಲ್ಲಿಸಿ ಮಳಿಗೆಗಳ ಛಾವಣಿಯ ಆದರೆ ಪಡೆದರು. ಕೆಲ ಬಡಾವಣೆಗಳಲ್ಲಿ ಮರಗಳು ರಸ್ತೆಗೆ ಬಿದ್ದಿದ್ದರಿಂದ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ಗೋಪನಕೊಪ್ಪ, ಇಸ್ಲಾಂಪುರ, ಗಿರಣಿಚಾಳ, ಹಳೆ ಮೇದಾರ ಓಣಿ, ಕಾರವಾರ ರಸ್ತೆಯಲ್ಲಿ ಉತ್ತಮ ಮಳೆ ಕಂಡು ಬಂದಿದೆ.
ಹುಬ್ಬಳ್ಳಿಯ ಪ್ರಮುಖ ರಸ್ತೆವೊಂದರಲ್ಲಿ ಕೆರೆಯಂತೆ ಮಳೆ ನೀರು ನಿಂತಿದೆ. ಮಳಿಗೆಗಳ ಮುಂದೆ ನಿಲ್ಲಿಸಿರುವ ವಾಹನಗಳು ಮುಳುಗಿವೆ. ಅದರಲ್ಲಿ ವಾಹನ ಸವಾರರು ಸಂಚರಿಸಿದ್ದಾರೆ. ಸುಮಾರು ಎರಡು ಅಡಿಯಷ್ಟು ನೀರು ರಸ್ತೆಯಲ್ಲಿ ನಿಂತು ಭಾರೀ ಆವಾಂತರ ಸೃಷ್ಟಿ ಆಯಿತು.

ಹಳೇ ಹುಬ್ಬಳ್ಳಿಯ ಕೆಲ ಪ್ರದೇಶಗಳಲ್ಲಿ ಮರಗಳು ಬಿದ್ದ ಬಗ್ಗೆ ವರದಿ ಆಗಿವೆ. ಮರದಿಂದಾಗಿ ಅಕ್ಕಪಕ್ಕದ ಕೆಲವು ಮನೆಗಳು ಭಾಗಶಃ ಜಖಂಗೊಂಡಿವೆ. ಜತೆಗೆ ವಿದ್ಯುತ್ ಕಂಬಗಳು ಬಿದ್ದ ಪರಿಣಾಮ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ ಎಂದು ತಿಳಿದು ಬಂದಿದೆ.
ಹುಬ್ಬಳ್ಳಿಯಲ್ಲಿ ಹಲವು ಕಡೆ ಮನೆಗಳಿಗೆ ನೀರು ನುಗ್ಗಿದೆ. ಒಳಚರಂಡಿ ಉಕ್ಕಿ ಹರಿದಿವೆ. ಜನರು ಗಾಳಿ ಸಹಿತ ಮಳೆಗೆ ತತ್ತರಿಸಿದ್ದಾರೆ. ತಗ್ಗು ಪ್ರದೇಶಗಳಲ್ಲಿ ಸಾಕಷ್ಟು ಸಮಸ್ಯೆ ಉಂಟಾಗಿದೆ.
ಶನಿವಾರ ಸಂಜೆ ಹುಬ್ಬಳ್ಳಿ-ಧಾರವಾಡ ಮಾತ್ರವಲ್ಲದೇ, ಹಾವೇರಿ, ಲಕ್ಷ್ಮೇಶ್ವರ, ಗದಗ, ಕಲಘಟಗಿ, ಶಿಗ್ಗಾಂವ್, ಹಾನಗಲ್, ರಾಣಿಬೆನ್ನೂರು, ಬೆಳಗಾವಿ, ಸೇರಿದಂತೆ ಇನ್ನಿತರ ಭಾಗಗಳು ಹಾಗೂ ಜಿಲ್ಲಾ ವ್ಯಾಪ್ತಿಯಲ್ಲಿ ಮಳೆ ತಂಪೆರೆದಿದೆ. ರಭಸದ ಗಾಳಿ ಸಹಿತ ಭರ್ಜರಿ ಮಳೆ ಬಿದ್ದಿದೆ.
ಉತ್ತರ ಕರ್ನಾಟಕಕ್ಕೆ ಭಾರೀ ಮಳೆ ಎಚ್ಚರಿಕೆ
ನಗರದ ಮಾರುಕಟ್ಟೆ ಪ್ರದೇಶದ ಇಕ್ಕೆಲಗಳಲ್ಲಿ ನಿಲ್ಲಿಸಿದ್ದ ಬೈಕ್‌ಗಳು ನೀರಿನಲ್ಲಿ ಮುಳುಗಿದ್ದವು. ಹಳೆ ಹುಬ್ಬಳ್ಳಿ ಗಾರ್ಡನ್ ಪೇಟ, ಅಂಬೇಡ್ಕರ್ ಕಾಲೊನಿ ಸೇರಿದಂತೆ ಹಲವು ಕಡೆಗಳಲ್ಲಿ ಮನೆಗಳಲ್ಲಿ ನೀರು ನುಗ್ಗಿದ್ದು ಕಂಡು ಬಂತು. ಈ ಮಳೆ ತಡರಾತ್ರಿವರೆಗೂ ಮುಂದುವರಿಯಲಿದೆ.
ಇಂದು ಧಾರವಾಡ ಮಾತ್ರವಲ್ಲದೇ, ಹಾವೇರಿ, ಬೆಳಗಾವಿ, ವಿಜಯಪುರ, ಕೊಪ್ಪಳ, ಗದಗ, ರಾಯಚೂರು, ಯಾದಗಿರಿ, ಬೀದರ್, ಕಲಬರಗಿ ಹಾಗೂ ಕರಾವಳಿ, ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಮುಂದಿನ 48 ಗಂಟೆ ಭಾರೀ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಈಗಾಗಲೇ ಮುನ್ಸೂಚನೆ ನೀಡಿದೆ.












Click it and Unblock the Notifications