ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರ್ತವ್ಯಕ್ಕೂ ಸೈ, ಕಲೆಗೂ ಸೈ ಎಂದ ಹುಬ್ಬಳ್ಳಿಯ ಇನ್ಸ್‌ಪೆಕ್ಟರ್‌ ಜೆ.ಎಂ.ಕಾಲಿಮಿರ್ಚಿ

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, ಸೆಪ್ಟೆಂಬರ್‌, 12: ಪೊಲೀಸರೆಂದರೆ ತಾವಾಯಿತು, ತಮ್ಮ ಕರ್ತವ್ಯ ಆಯಿತು ಎಂದು ಇರುವುದನ್ನು ನೋಡಿದ್ದೇವೆ. ಆದರೆ, ಹುಬ್ಬಳ್ಳಿಯಲ್ಲಿ ಪೊಲೀಸ್ ಅಧಿಕಾರಿ ಜೆ.ಎಂ.ಕಾಲಿಮಿರ್ಚಿ ಎನ್ನುವವರು ಕರ್ತವ್ಯದ ಜೊತೆಗೆ, ದೊಡ್ಡಾಟ ಪ್ರದರ್ಶನ ಮಾಡಿ ದೇಶದ ಸಂಸ್ಕೃತಿ ಉಳಿಸಿ ಬೆಳೆಸುವುದಕ್ಕೂ ಸೈ ಎಂಬುದನ್ನು ತೋರಿಸಿದ್ದಾರೆ.

ಕಾನೂನು ಪರಿಪಾಲಿಸಲು, ರಾಜ್ಯವನ್ನು ರಕ್ಷಿಸಲು, ಜನರು ಮತ್ತು ಆಸ್ತಿಯನ್ನು ರಕ್ಷಿಸಲು ಮತ್ತು ಅಪರಾಧ, ನಾಗರಿಕ ಅಸ್ವಸ್ಥತೆಯನ್ನು ತಡೆಗಟ್ಟುವ ಶಕ್ತಿಯೇ ಪೊಲೀಸ್. ಅವರ ಅಧಿಕಾರವು ಬಂಧನ ಶಕ್ತಿ ಮತ್ತು ನ್ಯಾಯಸಮ್ಮತವಾದ ಬಲವನ್ನು ಬಳಸುತ್ತದೆ. ಈ ಪದವು ಸಾಮಾನ್ಯವಾಗಿ ಸಾರ್ವಭೌಮ ರಾಜ್ಯಗಳ ಪೊಲೀಸ್ ಸೇವೆಗಳೊಂದಿಗೆ ಸಂಬಂಧಿಸಿದೆ.

ಕಳೆಗಟ್ಟಿದ 700 ವರ್ಷಗಳ ಇತಿಹಾಸವಿರುವ ಮಾಗಡಿ ದನಗಳ ಜಾತ್ರೆಕಳೆಗಟ್ಟಿದ 700 ವರ್ಷಗಳ ಇತಿಹಾಸವಿರುವ ಮಾಗಡಿ ದನಗಳ ಜಾತ್ರೆ

ಕಾನೂನುಬದ್ಧ ಅಥವಾ ಪ್ರಾದೇಶಿಕ ಪ್ರದೇಶದ ಜವಾಬ್ದಾರಿಯೊಳಗೆ ಅಧಿಕಾರವನ್ನು ನಿರ್ವಹಿಸುವ ಅಧಿಕಾರವನ್ನು ಪೊಲೀಸ್‌ ಇಲಾಖೆ ಹೊಂದಿದೆ. ವಿದೇಶಿ ಆಕ್ರಮಣಕಾರರ ವಿರುದ್ಧ ರಾಜ್ಯದ ರಕ್ಷಣೆಗಾಗಿ ಸೇರ್ಪಡೆ ಆದ ಮಿಲಿಟರಿ ಅಥವಾ ಇತರ ಸಂಸ್ಥೆಗಳಿಂದ ಪ್ರತ್ಯೇಕ ಆಗಿರುವುದನ್ನು ಪೊಲೀಸ್ ಪಡೆಗಳು ಸಾಮಾನ್ಯವಾಗಿ ವ್ಯಾಖ್ಯಾನಿಸಿದೆ. ಹೀಗೆ ಪೊಲೀಸ್‌ ಅಧಿಕಾರಿ ಜೆ.ಎಮ್. ಕಾಲಿಮಿರ್ಚಿ ಅವರು ಕೈಯಲ್ಲಿ ಧನಸ್ಸು ಹಿಡಿದು ಎದುರಾಳಿ ಎದೆ ನಡುಗುವಂತೆ ಸಂಭಾಷಣೆ ನಡೆಸಿದ್ದಾರೆ. ಇವರು ಹುಬ್ಬಳ್ಳಿಯ ಗೋಕುಲರಸ್ತೆ ಪೋಲಿಸ್ ಠಾಣೆಯ ಇನ್ಸ್ಪೆಕ್ಟರ್ ಆಗಿದ್ದು, ಈಗಾಗಲೇ ತಮ್ಮ ಶಿಸ್ತು ಬದ್ದ ಕಾರ್ಯದಿಂದ ಅಪರಾಧಿಗಳ ಹೆಡೆಮುರಿ ಕಟ್ಟಿ ಜೈಲಿಗೆ ಅಟ್ಟುವ ಕೆಲಸವನ್ನು ಮಾಡಿದ್ದಾರೆ. ಅಲ್ಲದೇ ಸಾಮಾಜಿಕ ಕಾರ್ಯಗಳ ಮೂಲಕ ಹುಬ್ಬಳ್ಳಿ ಜನರ ಮನೆ ಮನದ ಮಾತಾಗಿದ್ದಾರೆ.

ವೃಷಸೇನಾ ಪಾತ್ರದಲ್ಲಿ ವೇಷ ಧರಿಸಿ ನಟನೆ

ವೃಷಸೇನಾ ಪಾತ್ರದಲ್ಲಿ ವೇಷ ಧರಿಸಿ ನಟನೆ

ಇದೀಗ ಇನ್ಸ್‌ಪೆಕ್ಟರ್ ಜೆ.ಎಂ.ಕಾಲಿಮಿರ್ಚಿ ಹುಬ್ಬಳ್ಳಿಯ ಸವಾಯಿ ಗಂಧರ್ವ ಹಾಲ್‌ನಲ್ಲಿ ಜಾನಪದ ಕಲಾ ಬಳಗ ಟ್ರಸ್ಟ್‌ನಿಂದ ನಡೆದ ಕರ್ಣಪರ್ವ ದೊಡ್ಡಾಟ ಪ್ರದರ್ಶನದಲ್ಲಿ ಭಾಗವಹಿಸಿದ್ದರು. ಇವರು ವೃಷಸೇನಾ ಪಾತ್ರದಲ್ಲಿ ವೇಷ ಧರಿಸಿ ಅದ್ಭುತವಾಗಿ ನಟನೆ ಮಾಡುವ ಮೂಲಕ ಪ್ರೇಕ್ಷಕರ ಪ್ರೀತಿಗೆ ಪಾತ್ರರಾಗಿದ್ದಾರೆ. ಪೊಲೀಸರೆಂದರೆ ಇಂದಿನ ಕಾಲದಲ್ಲಿ ಸಾರ್ವಜನಿಕರಿಗೆ ಅನೇಕ ತಪ್ಪು ಅಭಿಪ್ರಾಯಗಳಿವೆ. ಲಂಚಬಾಕರು, ಹಣ ಇರುವವರ ಪರ ಮಾತ್ರ ಕೆಲಸ ಮಾಡುತ್ತಾರೆ. ಬಡವರ ಮೇಲೆ ದೌರ್ಜನ್ಯ ಎಸಗುತ್ತಾರೆ. ಏನಾದರೂ ದೂರು ಕೊಡಲು ಹೋದರೆ ಸರಿಯಾಗಿ ಸ್ಪಂದಿಸುವುದಿಲ್ಲ. ಠಾಣೆಗಳಲ್ಲಿ ಹಣವಿದ್ದರೆ ಮಾತ್ರ ಕೆಲಸ ನಡೆಯುತ್ತದೆ ಎಂದೆಲ್ಲ ಆರೋಪಿಸುತ್ತಾರೆ. ಪೊಲೀಸರು ಅಂದರೆ ಮೂಗು ಮುರಿಯುವವರೇ ಹೆಚ್ಚಾಗಿದ್ದಾರೆ.

ಯುವಕರು ಯುವತಿಯರ ವೇಷ ಧರಿಸುವ ರಮ್ಮನಹಳ್ಳಿ ಜಾತ್ರೆ!ಯುವಕರು ಯುವತಿಯರ ವೇಷ ಧರಿಸುವ ರಮ್ಮನಹಳ್ಳಿ ಜಾತ್ರೆ!

ಕಲಾವಿದರಾಗಿ ಪಾತ್ರ ನಿರ್ವಹಿಸಿದ ಖಾಕಿ

ಕಲಾವಿದರಾಗಿ ಪಾತ್ರ ನಿರ್ವಹಿಸಿದ ಖಾಕಿ

ಪೊಲೀಸರೆಂದರೆ ಕಲ್ಲು ಹೃದಯದವರು, ಅವರಿಗೆ ಭಾವನೆಗಳು ಅರ್ಥವಾಗುವುದಿಲ್ಲ. ಕಷ್ಟ ಸುಖ ಯಾವುದೂ ನೋಡದೇ ಜನರೊಂದಿಗೆ ವರ್ತಿಸುತ್ತಾರೆ ಎಂಬುದರಿಂದ ಹಿಡಿದು ಅಮಾನವೀಯರು, ಅವರಿಗೆ ಹೊಡಿ ಬಡಿ ಎಂಬುದಷ್ಟೇ ಗೊತ್ತು ಎಂಬುವವರೆಗೂ ಆರೋಪಗಳಿವೆ. ಅದರಲ್ಲೂ ಟ್ರಾಫಿಕ್ ಪೊಲೀಸರೆಂದರೆ ಜನರಿಗೆ ಮತ್ತಷ್ಟು ಸಿಟ್ಟು. ಹೆಲ್ಮೆಟ್, ಡಿಎಲ್ ಇಲ್ಲದಿದ್ದರೆ ದಂಡ ಹಾಕುವುದಲ್ಲದೇ, ಲಂಚ ತಿನ್ನುತ್ತಾರೆ ಎಂಬ ಆರೋಪಗಳು ಸಾಮಾನ್ಯವಾಗಿಬಿಟ್ಟಿವೆ. ಇದರಲ್ಲಿ ಕೆಲವು ವಾಸ್ತವಾಂಶಗಳಿರುವುದು ಸಹ ಸತ್ಯ ಆಗಿದೆ. ಆದರೆ ಅವರಲ್ಲಿ ಕೆಲವರು ಮಾನವೀಯತೆಗೆ ಬೆಲೆ ಕೊಡುವವರು, ಕಲಾವಿದರು ಇದ್ದಾರೆ.‌

ಜನರ ಮೆಚ್ಚುಗೆಗೆ ಪಾತ್ರರಾದ ಇನ್ಸ್‌ಪೆಕ್ಟರ್

ಜನರ ಮೆಚ್ಚುಗೆಗೆ ಪಾತ್ರರಾದ ಇನ್ಸ್‌ಪೆಕ್ಟರ್

ಪೊಲೀಸ್ ಇಲಾಖೆ ಅಂದರೆ ಸಾಕು ಅದು ಬಿಡುವಿಲ್ಲದ ಕೆಲಸದ ಇಲಾಖೆ ಎಂದು ಎಲ್ಲರಿಗೂ ಗೊತ್ತಿದೆ. ಅದರಲ್ಲೂ ಮಹಾಮಾರಿ ಕೊರೊನಾ ಸಮಯದಲ್ಲಿ ಪೊಲೀಸರು ಹಗಲು ರಾತ್ರಿ ಅನ್ನದೆ ಕೆಲಸ ಮಾಡಿದ್ದರು. ಹೀಗೆ ಬಿಡುವಿಲ್ಲದೇ ವೃತ್ತಿ ಮಾಡುತ್ತಿರುವ ಪೊಲೀಸರು ಯಾರಿಗೇನು ಕಮ್ಮಿಯಿಲ್ಲ ಎಂಬುದನ್ನು ಸಾಬೀತು ಮಾಡಿದ್ದಾರೆ. ಹುಬ್ಬಳ್ಳಿಯ ಸ್ಥಳೀಯ ಗೋಕುಲ ರಸ್ತೆ ಠಾಣೆ ಇನ್ಸ್‌ಪೆಕ್ಟರ್ ಜೆ.ಎಂ.ಕಾಲಿಮಿರ್ಚಿ ಅವರು ಮಾದರಿ ಕಾರ್ಯಗಳ ಮೂಲಕ ಪರಿಚಿತರಾಗಿದ್ದು, ಇದೀಗ ದೊಡ್ಡಾಟದ ಪಾತ್ರದ ಮೂಲಕ ಕಲಾವಿದರಾಗಿಯೂ ಹೊಸ ಮಿಂಚು ಹರಿಸಿದ್ದಾರೆ.

ಈಗಾಗಲೇ ಬೀಟ್‌ಗೊಂದು ಮರ, ಸ್ವಾತಂತ್ರ್ಯದ ಅಮೃತದಿನದಂದು ಎಲ್ಲ ಬೀಟ್‌ಗಳಲ್ಲೂ ಧ್ವಜಾರೋಹಣ ಮಾಡಿದ್ದಾರೆ. ಅಲ್ಲದೇ ಇತ್ತೀಚೆಗೆ ಗಣೇಶೋತ್ಸವದ ಸಂದರ್ಭದಲ್ಲಿ ತಾವೇ ಹಣೆಗೆ ತಿಲಕವಿಟ್ಟು ಗಣೇಶ ಮೂರ್ತಿ ತಂದು ಪ್ರತಿಷ್ಠಾಪಿಸುವ ಮೂಲಕ ಭಾವೈಕ್ಯತೆಗೆ ಅಕ್ಷರಶಃ ಭಾವಾರ್ಥವನ್ನು ಬರೆದಿದ್ದಾರೆ. ನಗರದ ಸವಾಯಿ ಗಂಧರ್ವ ಹಾಲ್‌ನಲ್ಲಿ ಜನಪದ ಕಲಾ ಬಳಗ ಟ್ರಸ್ಟ್ ಆಶ್ರಯದಲ್ಲಿ ನಡೆದ ರಮೇಶ್‌ ಕರಬಸಮ್ಮನವರ ನಿರ್ದೇಶನದ ಕರ್ಣಪರ್ವ ದೊಡ್ಡಾಟ ಪ್ರದರ್ಶನದಲ್ಲಿ ಕಾಣಿಸಿಕೊಂಡಿದ್ದರು. ವೃಷಸೇನಾ ಪಾತ್ರದ ಮೂಲಕ ಅತ್ಯುತ್ತಮವಾಗಿ ಅಭಿನಯಿಸಿ ಎಲ್ಲರಿಂದಲೂ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ.

ಎಲ್ಲರ ಮೆಚ್ಚುಗೆಗೆ ಪಾತ್ರರಾದ ಕಾಲಿಮಿರ್ಚಿ

ಎಲ್ಲರ ಮೆಚ್ಚುಗೆಗೆ ಪಾತ್ರರಾದ ಕಾಲಿಮಿರ್ಚಿ

ಕಾಲಿಮಿರ್ಚಿ ಅವರ ಕೈಯಲ್ಲಿ ಧನಸ್ಸು ಹಿಡಿದಿದ್ದು, ಎದುರಾಳಿ ಎದೆ ನಡುಗುವಂತೆ ಸಂಭಾಷಣೆ ಹೇಳಿರುವ ದೃಶ್ಯಗಳು ಈಗಾಗಲೇ ಸಾಮಾಜಿಕ ಜಾಲ ತಾಣಗಳಲ್ಲೂ ವೈರಲ್ ಆಗಿದೆ. ಅಧಿಕಾರ ಸ್ವೀಕರಿಸಿದ ದಿನದಿಂದ ಠಾಣೆಯನ್ನು ಸಾರ್ವಜನಿಕ ಸ್ನೇಹಿಯಾಗಿಸಿರುವ ಅವರು ಅನೇಕ ಕ್ಲಿಷ್ಟ ಪ್ರಕರಣಗಳನ್ನು ಭೇದಿಸಿ ಹಿರಿಯ ಅಧಿಕಾರಿಗಳ ಮೆಚ್ಚುಗೆ ಗಳಿಸಿದ್ದಾರೆ. ಇದೀಗ ನಟನೆಯಲ್ಲೂ ಸೈ ಎನಿಸಿಕೊಂಡಿದ್ದಾರೆ. ಸಕಾರಾತ್ಮಕ ಧೋರಣೆ, ಜಾತಿ, ಮತ, ಪಂಥಗಳನ್ನು ಮೀರಿ ಭಾವೈಕ್ಯತೆಯನ್ನು ಸಾರಿದ್ದಾರೆ.

English summary
JM Kalimirchi, a police officer in Hubballi, has shown his ability to preserve and develop the country's art and culture by performing various arts in addition to his duty. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X