ಹೈಫೈ ದರೋಡೆಕೋರರ ಮೇಲೆ ಗುಂಡಿನ ದಾಳಿ: ಹುಬ್ಬಳ್ಳಿ ಪೊಲೀಸರ ಸಾಹಸಗಾಥೆ ಇಲ್ಲಿದೆ ನೋಡಿ
ಹುಬ್ಬಳ್ಳಿ, ಮಾರ್ಚ್, 15: ಛೋಟಾ ಮುಂಬೈ ಖ್ಯಾತಿಯ ಹುಬ್ಬಳ್ಳಿಯಲ್ಲಿ ಮತ್ತೇ ಖಾಕಿ ಗುಂಡು ಮತ್ತೆ ಸದ್ದು ಮಾಡಿದೆ. ಈ ಬಾರಿ ಪೊಲೀಸರು ಫುಲ್ ಹೈಫೈ ದರೋಡೆಕೋರರಿಗೆ ಟಾರ್ಗೆಟ್ ಮಾಡಿದ್ದಾರೆ. ಕರ್ನಾಟಕ ಸೇರಿದಂತೆ ಐದು ರಾಜ್ಯಕ್ಕೆ ಬೇಕಾಗಿರುವ ಈ ದರೋಡೆಕೋರರ ಲೈಫ್ ಸ್ಟೈಲ್ ಹೇಗಿದೆ ಗೊತ್ತಾ? ಈ ಭಯಾನಕ ಸ್ಟೋರಿ ಕೇಳಿದರೆ ಬೆಚ್ಚಬೀಳೋದಂತೂ ಗ್ಯಾರಂಟಿ.
ಪೊಲೀಸ್ ಮೇಲೆಯೇ ಹಲ್ಲೆ ಮಾಡಿ ಕಾರದಪುಡಿ ಎರಚಿ ಪರಾರಿಯಾಗಲು ಪ್ರಯತ್ನಿಸಿದ ದರೋಡೆಕೋರರ ಮೇಲೆ ಹುಬ್ಬಳ್ಳಿ ಸಬ್ ಅರ್ಬನ್ ಠಾಣೆಯ ಪೊಲೀಸರು ಒಟ್ಟು ಏಂಟು ಸತ್ತು ಗುಂಡು ಹಾರಸಿದ್ದಾರೆ.

ಮಾರ್ಚ್ 1 ರಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ನಿವಾಸದ ಬಳಿಯ ಅಪಾರ್ಟ್ಮೆಂಟ್‌ನಲ್ಲಿ ಸುಮಾರು 20 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳು ಕಳ್ಳತನವಾಗಿತ್ತು. ಈ ಹಿಂದೆ ವಿದ್ಯಾಗಿರಿ, ಧಾರವಾಡ ಶಹರ, ಕೇಶ್ವಾಪುರ ಠಾಣೆಯಲ್ಲಿ ಇದೇ ಮಾದರಿಯಲ್ಲಿ ದರೋಡೆ ಪ್ರಕರಣ ನಡೆದಿತ್ತು. ಬಳಿಕ ಪೊಲೀಸರು ಆರೋಪಿಗಳಿಗಾಗಿ ಶೋಧಕಾರ್ಯಕ್ಕೆ ಮುಂದಾಗಿದ್ದರು. ಕೊನೆಗೂ ಖದೀಮರ ಗ್ಯಾಂಗ್ ದೆಹಲಿ ಮತ್ತು ಉತ್ತರ ಪ್ರದೇಶದಲ್ಲಿ ಆಕ್ಟೀವ್ ಆಗಿರುವುದು ಪೊಲೀಸರಿಗೆ ಸುಳಿವು ಸಿಕ್ಕಿತ್ತು.
ಬಳಿಕ ಈ ದರೋಡೆಕೋರನನ್ನು ಟ್ರ್ಯಾಕ್ ಮಾಡಿದಾಗ ಶಿವಮೊಗ್ಗದಲ್ಲಿ ಇರುವುದು ಕಂಡುಬಂದಿದೆ. ನಂತರ ಹುಬ್ಬಳ್ಳಿಯತ್ತ ಬರುತ್ತಿರುವ ಮಾಹಿತಿ ಲಭ್ಯವಾದೆ. ಅದರಂತೆಯೇ ಖಾಕಿ ಪಡೆ ಈ ಈ ದರೋಡೆಕೋರಿಗೆ ಬಲೆ ಬೀಸುತ್ತಾ ಬಂದಿತ್ತು. ಬಳಿಕ ಹುಬ್ಬಳ್ಳಿಯಲ್ಲಿ ಮಾರುತಿ ಎನ್ನುವರರ ಮೇಲೆ ಹಲ್ಲೆ ಮಾಡಿದ ಈ ತಂಡ ಬೈಕ್ ಕಸಿದುಕೊಂಡು ಪರಾರಿಯಾಗಿದ್ದರು.
ದರೋಡೆಕೋರು ಹುಬ್ಬಳ್ಳಿ ಹೊರವಲಯದ ದೇವರಗುಡಿಹಾಳ ಸಮೀಪದಲ್ಲಿ ಅಡಗಿಕುಳಿತ್ತಿರುವುದು ಖಚಿತ ಮಾಹಿತಿ ಪಡೆದ ಪೊಲೀಸರು, ಸ್ಥಳಕ್ಕೆ ತೆರಳಿ ಆರೋಪಿಗಳ ಬಂಧನಕ್ಕೆ ಮುಂದಾಗಿದ್ದರು. ಈ ವೇಳೆ ಪೊಲೀಸ್ ಸಿಬ್ಬಂದಿ ಕಣ್ಣಿಗೆ ಕಾರದಪುಡಿ ಎರಚಿ, ಆಯುಧಗಳಿಂದ ಹಲ್ಲೆಗೆ ಪ್ರಯತ್ನಿಸಿ ಎಸ್ಕೇಪ್ ಆಗಲು ಪ್ರಯತ್ನಿಸಿದ್ದರು. ಈ ಹಿನ್ನೆಲೆ ಆತ್ಮ ರಕ್ಷಣೆಗಾಗಿ ಪೊಲೀಸರು ಇಬ್ಬರು ದರೋಡೆಕೋರರಾದ ಇರ್ಷಾದ್, ಅಬ್ಬರ್ ಎಂಬುವವರ ಕಾಲಿಗೆ ನಾಲ್ಕು ಸುತ್ತು ಗುಂಡು ಹಾರಿಸಿದ್ದಾರೆ.
ಪೊಲೀಸರ ದಾಳಿ ವೇಳೆ ಓರ್ವ ಆರೋಪಿ ಪರಾರಿಯಾಗಿದ್ದ. ಘಟನೆಯಲ್ಲಿ ಪಿಎಸ್‌ಐ ದೇವೇಂದ್ರ ಮಾವಿನದಂಡಿ, ಸಿಬ್ಬಂದಿ ದ್ಯಾನೇಶ್, ಆನಂದ ಜಾವೂರಗೆ ಗಾಯಗಳಾಗಿವೆ. ಇದೀಗ ಗಾಯಗೊಂಡ ಆರೋಪಿಗಳು ಮತ್ತು ಪೊಲೀಸ್ ಸಿಬ್ಬಂದಿಗೆ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಗೆ ಕಮಿಷನರ್ ಶಶಿಕುಮಾರ್ ಭೇಟಿ ನೀಡಿ ಸಿಬ್ಬಂದಿ ಆರೋಗ್ಯ ವಿಚಾರಿಸಿದರು.
ಇನ್ನೂ ಪೊಲೀಸ್ ದಾಳಿ ವೇಳೆಯಲ್ಲಿ ಪರಾರಿಯಾಗಿದ್ದ ಶಂಷಾದ್ ಕುರೇಶಿನನ್ನು ಪೊಲೀಸರು ಕೆಲ ಹೊತ್ತಲ್ಲೇ ಬಲೆಗೆ ಬೀಳಿಸಿದ್ದಾರೆ. ಈತನನ್ನು ವಿಚಾರಣೆ ಮಾಡಿದಾಗ ಭಯಾನಕ ಸತ್ಯ ಹೊರಬಿದ್ದಿದೆ. ಆರೋಪಿಗಳು ತಮ್ಮ ದರೋಡೆಗೆ ಬಳಸುತ್ತಿದ್ದ ಐಷಾರಾಮಿ ಕಾರ್ ಅನ್ನೇ ಹುಬ್ಬಳ್ಳಿ ಹೈವೆ ಪಕ್ಕದಲ್ಲಿ ಸುಟ್ಟುಹಾಕಿದ್ದಾರೆ. ಅಲ್ಲದೆ, ಸುಮಾರು 10 ರಿಂದ 15 ಸದಸ್ಯರು ಇರುವ ಈ ತಂಡ ಶೋಕಿ ಜೀವನ ನಡೆಸುತ್ತಿದೆ. ದೊಡ್ಡ ದೊಡ್ಡ ಕಾರ್‌ನಲ್ಲಿ ಸುತ್ತಾಡಿ, ಪ್ರತಿಷ್ಠಿತ ಹೋಟೆಲ್‌ಗಳಲ್ಲಿ ಉಳಿದುಕೊಂಡೇ ಇತಂಹ ಕೆಲಸಗಳನ್ನು ಮಾಡುತ್ತಿದ್ದರು ಎನ್ನುವುದು ತನಿಖೆ ವೇಳೆ ಬಟಾಬಯಲಾಗಿದೆ.
ಪ್ರಮುಖ ನಗರದಲ್ಲಿನ ಶ್ರೀಮಂತರು ಹೆಚ್ಚಾಗಿರುವ ಏರಿಯಾಗಳಲ್ಲಿ ಓಡಾಟ ಮಾಡಿ, ಕಳ್ಳತನ ಮಾಡುವ ಮನೆ ಗುರುತಿಸುತ್ತಿದ್ದರು. ಬಳಿಕ ಪ್ಲಾನ್ ಮಾಡಿ ಮನೆ ಕಳ್ಳತನ ಮಾಡುತ್ತಿದ್ದರು. ಕಳ್ಳತನ , ದರೋಡೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಈ ಆರೋಪಿಗಳು ಕರ್ನಾಟಕ, ಆಂಧ್ರಪ್ರದೇಶದ, ಉತ್ತರ ಪ್ರದೇಶ, ಮಹಾರಾಷ್ಟ್ರ, ಮಧ್ಯಪ್ರದೇಶ ರಾಜ್ಯದ ಪೊಲೀಸರಿಗೂ ಸಹ ಬೇಕಾಗಿದ್ದಾರೆ. ಒಟ್ಟಿನಲ್ಲಿ ಹುಬ್ಬಳ್ಳಿ ಧಾರವಾಡ ಪೊಲೀಸರು ಅಂತರ್ ರಾಜ್ಯಗಳಿಗೆ ಬೇಕಾಗಿದ್ದ ನಟೋರಿಯಸ್ ದರೋಡೆಕೋರರನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.












Click it and Unblock the Notifications