ರಾಮಮಂದಿರ ನಿರ್ಮಾಣಕ್ಕೆ ಶಪಥ: 15 ವರ್ಷಗಳ ಬಳಿಕ ಕೇಶಕ್ಕೆ ಕತ್ತರಿ ಹಾಕಿದ ಗನು ಜರತಾಘರ
ಹುಬ್ಬಳ್ಳಿ, ಫೆಬ್ರವರಿ 23: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಆಗಬೇಕು ಎನ್ನುವುದು ಬಹುದಿನಗಳ ಕನಸು ಮತ್ತು ಹೋರಾಟ. ಅನೇಕರು ಅನೇಕ ರೀತಿಯಲ್ಲಿ ತ್ಯಾಗ ಮಾಡಿದ್ದು, ಬಲಿದಾನ ಸಹ ಆಗಿದೆ. ಜೊತೆಗೆ ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣಕ್ಕೆ ತಮ್ಮದೇ ಆದ ರೀತಿಯಲ್ಲಿ ಬೇಡಿಕೆ ಇರಿಸಿಕೊಂಡಿದ್ದರು. ಇದರಲ್ಲಿ ಹುಬ್ಬಳ್ಳಿಯ ಗನು ಅಲಿಯಾಸ್ ಗಣೇಶ ಜರತಾರಘರ ಸಹ ಒಬ್ಬರು.
ಸತತವಾಗಿ 15 ವರ್ಷ 6 ತಿಂಗಳು ಕಾಲ ಕೇಶ ಮುಂಡನ ಮಾಡುದಿಲ್ಲ ಎಂದು ಶಪಥ ಮಾಡಿದರು. ಈಗ ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಆದ ಬಳಿಕ ಕೇಶ ಮುಂಡನ ನೀಡಿದರು.

2003ರಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ಶಿಲಾನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕರ್ನಾಟಕದ ಹುಬ್ಬಳ್ಳಿಯಿಂದ ಅಶೋಕ ಸಿಂಘಾಲ್ ಅವರ ಕರೆ ಮೆರೆಗೆ ನೂರಾರು ಕರ ಸೇವಕರು ಹೋಗಿದ್ದರು. ಸಾಕಷ್ಟು ತೊಂದರೆ ನಡುವೆಯೂ ಗನು ಅಲಿಯಾಸ್ ಗಣೇಶ ಜರತಾಘರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಅಂದು ಯಾವುದೇ ಕಾರಣಕ್ಕೂ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆಗಕೂಡದು ಎಂದು ಕೆಲ ಸಂಘಟನೆಗಳು ಹಾಗೂ ಕೆಲವರು ಷಡ್ಯಂತ್ರ ಮಾಡಿದ್ದರು. ಅಂದಿನ ಸನ್ನಿವೇಶದಿಂದ ಬೇಸತ್ತ ಗನು ಅವರು ತಾವು ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠಾನೆ ಆಗುವವರೆಗೂ ಕೇಶ ಮುಂಡನೆ ಮಾಡಿಸಿಕೊಳ್ಳಲ್ಲ ಅಂತಾ ಶಪಥ ಮಾಡಿದರು. ಅಂದಿನಿಂದ ಇಂದಿನವರೆಗೂ ಅನೇಕ ಹೋರಾಟ ತೊಂದರೆ ಅನುಭವಿಸಿದವರು ಗನು ಅಲಿಯಾಸ್ ಗಣೇಶ ಜರತಾರಘರ.

ಸಂಘ ಪರಿವಾರದ ಕುಟುಂಬದಿಂದ ಬಂದ ಇವರು ಬಾಲ್ಯದಿಂದಲೇ ಆರ್‌ಎಸ್‌ಎಸ್‌ನಲ್ಲಿ ಕಾರ್ಯಕರ್ತರಾಗಿ ಅನೇಕ ಹಿಂದೂ ಪರ ಹೋರಾಟದಲ್ಲಿ ಭಾಗವಹಿಸಿದ್ದರು. 1991ರಲ್ಲಿ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಿಸಲು ಹೋರಾಟ ಮಾಡಿ ಸೆರೆಮನೆ ವಾಸ ಸಹ ಅನುಭವಿಸಿದವರು.
ವಿಶ್ವ ಹಿಂದೂ ಪರಿಷತ್ ಸಂಘಟನೆಗೆ 2000 ರಲ್ಲಿ ಸೇರ್ಪಡೆಗೊಂಡು ಅನೇಕ ಹೋರಾಟ ಮಾಡಿ 2004ರಲ್ಲಿ ಭಜರಂಗದಳದ ಸಹ ಸಂಚಾಲಕ ಹಾಗೂ 2011ರಲ್ಲಿ ಸಂಚಾಲಕರಾಗಿ ಜವಾಬ್ದಾರಿ ಹೊತ್ತು ಸಮರ್ಥವಾಗಿ ನಡೆಸಿಕೊಂಡು ಹೋದವರು.
ಇಂತಹ ರಾಷ್ಟ್ರ ಭಕ್ತರಾದ ಗನು ಅಲಿಯಾಸ್ ಗಣೇಶ ಅವರ ಒಡನಾಟ ಹಾಗೂ ಮಾರ್ಗದರ್ಶನ ನಾವು ಬೆಳದವರು ಎಂದ ಅವರ ಹಿಂಬಾಲಕರಾದ ಶಿಷ್ಯ ಸಿದ್ದು ಶೆಟ್ಟರ್, ಎಷ್ಟೇ ಬೆದರಿಕೆ ಕರೆ ಬಂದವು, ಅವರ ಮೇಲೆ ಹಲ್ಲೆ ನಡೆಸಲಾಯಿತು. ಯಾವುದಕ್ಕೂ ಹೆದರದ ಅವರು ಹೋರಾಟ ಮಾಡಿ ತಮ್ಮದೇ ಆದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಜೊತೆಗೆ ಶ್ರೀರಾಮಲಲ್ಲಾನ ಪ್ರಾಣ ಪ್ರತಿಷ್ಠಾನ ಮಾಡುವವರೆಗೂ ಹೋರಾಟ ಬಿಡರದ ಛಲದಂಕ ಮಲ್ಲ ಅವರು ಎಂದು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದರು.
ಇಡೀ ಜಗತ್ತೇ ಅಯೋಧ್ಯೆಯಲ್ಲಿ ರಾಮನಮಂದಿರ ಆಗಬೇಕು ಎನ್ನುವಾಗ ಕೆಲವರು ವಿರೋಧ ಮಾಡಿದರು. ಆದ್ದರಿಂದ ಯಾವುದೇ ಕಾರಣಕ್ಕೂ ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣ ಜೊತೆಗೆ ರಾಮಲಲ್ಲಾನ ಪ್ರಾಣ ಪ್ರತಿಷ್ಠಾನ ಮಾಡುವವರೆಗೋ ಹೋರಾಟ ಬಿಡಲ್ಲ ಮತ್ತು ನನ್ನ ಕೇಶ ಮುಂಡನ ಮಾಡಿಸಿಕೊಳ್ಳಲ್ಲ ಅಂತಾ ಶಪಥ ಮಾಡಿ ಬರೋಬ್ಬರಿ 15 ವರ್ಷ 6 ತಿಂಗಳು ಕಾಲ ಕೇಶ ಮುಂಡನ ಬಿಟ್ಟಿದ್ದರು .
ಈಗ ಮಂದಿರ ನಿರ್ಮಾಣದ ಜೊತೆಗೆ ಶ್ರೀರಾಮಲಲ್ಲಾನ ಪ್ರಾಣ ಪ್ರತಿಷ್ಠಾನ ಆಗಿದೆ. ಕೇಶ ಮುಂಡನ ಕೊಟ್ಟಿದ್ದಾರೆ ಎಂದು ತಮ್ಮ ಶಪಥ ಬಗ್ಗೆ ಗನು ಅಲಿಯಾಸ್ ಗಣೇಶ ಜರತಾರಘರ ಹೇಳಿದರು. ಇಂತಹ ಅನೇಕ ಹೋರಾಟಗಾರರ ಭಕ್ತರ ಫಲವಾಗಿ ಇಂದು ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರತಿಷ್ಠಾನೆ ಆಗಿ ಕೋಟ್ಯಾಂತರ ಭಕ್ತರು ದರ್ಶನ ಪಡೆಯುವಂತಾಗಿದೆ.
-
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ -
March 28 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Viral ಆಯ್ತು ಅಕೌಂಟ್ಸ್ ಪ್ರಶ್ನೆಪತ್ರಿಕೆ: ಪರೀಕ್ಷೆಯಲ್ಲೂ ಮಿಂಚಿದ 'ಧುರಂಧರ್: ದಿ ರಿವೆಂಜ್' ಸಿನಿಮಾದ ಪಾತ್ರಗಳು -
ಹಿಂದಿ ರಾಜ್ಯಗಳಲ್ಲಿ ಕನ್ನಡವನ್ನ ಕಡ್ಡಾಯ ಮಾಡಿ: ವಿಜಯೇಂದ್ರಗೆ ನೇರ ಸವಾಲು ಹಾಕಿದ ಕರವೇ ನಾರಾಯಣಗೌಡ












Click it and Unblock the Notifications