ಅವಳಿ ನಗರದಲ್ಲಿ ಬಾಲ ಬಿಚ್ಚಿದರೆ ಜೋಕೆ: ನೂತನ ಕಮಿಷನರ್ ಎಚ್ಚರಿಕೆ
ಹುಬ್ಬಳ್ಳಿ, ಜುಲೈ 09: ಹುಬ್ಬಳ್ಳಿ ಧಾರವಾಡ ಅವಳಿನಗರ, ಹೊರ ಭಾಗದ ಮಾದಕ ವಸ್ತುಗಳ ಸೇವೆನೆ, ಮಾರಾಟ ದಂಧೆ ಮೀತಿ ಮೀರಿದ್ದು ಗಾಂಜಾ, ಡ್ರಗ್ಸ್ ಮಾರಾಟ ಮಾಡುವವರು ಹಾಗೂ ಸೇವನೆ ಮಾಡುವವರ ಮಟ್ಟ ಹಾಕಲಾಗುವುದು ಎಂದು ಹುಬ್ಬಳ್ಳಿ-ಧಾರವಾಡ ನೂತನ ಪೊಲೀಸ್ ಆಯುಕ್ತ ಶಶಿಕುಮಾರ್ ಹೇಳಿದರು.
ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿ, ಇದರಿಂದಾಗಿ ಯುವ ಸಮೂಹ ಹಾಳಾಗುತ್ತಿದೆ. ಮಾದಕ ವಸ್ತುಗಳ ಮಾರಾಟ ಹಾಗೂ ಸೇವೆನೆ ಮಾಡುವವರ ವಿರುದ್ಧ ಕಾರ್ಯಾಚರಣೆ ಆರಂಭಿಸಲಾಗುತ್ತದೆ. ಈಗ 180ಕ್ಕೂ ಹೆಚ್ಚು ಆರೋಪಗಳಿಗೆ ಪೇರಡ್ ಮೂಲಕ ವಾರ್ನ್ ಮಾಡಲಾಗಿದೆ. ಎನ್ ಡಿಪಿಎಸ್ ಕಾಯ್ದೆ ಅಡಿ ಆರೋಪಿಗಳಾಗಿದ್ದಾರೆ.

ಕೇವಲ ಸುಮ್ಮನೆ ಅವರನ್ನು ಕರೆಸಿ ಕಳಸಲ್ಲಯಾರಾರು ರೌಡಿಶೀಟರ್ ಸೇರಿದಂತೆ ಇತರ ಕೃತ್ಯಗಳಲ್ಲಿ ಭಾಗಿಯಾದವರ ಮೇಲೆ ಓಪನ್ ಮಾಡಲಾಗುತ್ತದೆ. ಇಂತಹ ಎನ್ ಡಿಪಿಎಸ್ ನಲ್ಲಿ ಭಾಗಿಯಾದವರು. ಅವರಿಗೆ ಬೆಂಬಲಕ್ಕೆ ನಿಂತವರು, ಸಹಾಯ ಮಾಡುವವರು,ವಾಹನ ಕೊಡುವವರು ಯಾರು? ಎಂದು ಪ್ರಶ್ನಿಸಿದರು.
ಬಂಧಿತರ ಬೆಂಬಲಿಸುವವರಿಗೂ ಸಂಕಷ್ಟ
ಬಂಧಿಸಿದಾಗ ಸಹಾಯ ಮಾಡುವವರು ಲೀಗಲ್ ಸಪೋರ್ಟ್ ಮಾಡುವವರುವ ಮೇಲೋ ಸಹ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸ್ ಆಯುಕ್ತರು ಎಚ್ಚರಿಕೆ ನೀಡಿದರು.
ಇದರ ಜೊತೆಗೆ ಮುಖ್ಯವಾಗಿ ಡಾಕ್ಯುಮೆಂಟ್ ಮೆಂಟೆನ್ ಮಾಡಲಾಗುತ್ತದೆ. ಮುಂಜಾಗ್ರತಾ ಕ್ರಮವಾಗಿ ಪ್ರಕರಣ ದಾಖಲು ಮಾಡಲಾಗುವುದು. ಎನ್ ಡಿಪಿಎಸ್ ನಲ್ಲಿ ಭಾಗಿಯಾದವರ ಬಿಡುಗಡೆಗಾಗಿ 2 ಲಕ್ಷ ಭದ್ರತಾ ಬಾಂಡ್ ಮೇಲೆ ಬಿಡುವ ಸೂಚನೆ ಸಹ ಕೊಡಲಾಗಿದೆ. ಈಗ ಮಾದಕ ವಸ್ತುಗಳನ್ನು ಯಾರು ಮಾರಾಟ ಮಾಡುತ್ತಿದ್ದಾರೆ. ಮಾದಕ ವಸ್ತುಗಳ ಹಾಟ್ಸ್ ಸ್ಪಾಟ್ ಬಗ್ಗೆ, ಅಂತಹ ಏರಿಯಾಗಳ ಬಗ್ಗೆ ನಿಗಾ ಇಡಲಾಗಿದೆ.

ಪೊಲೀಸ್ ವಿಶೇಷ ತಂಡ ರಚನೆ
ಡ್ರಗ್ ಮಾರಾಟ, ಹೋಲ್ ಸೇಲ್ ಮಾರಾಟ, ಸೇವೆನೆ ಕುರಿತು ಮಾಹಿತಿ ಕಲೆ ಹಾಕಲಾಗಿದೆ. ನಮ್ಮ ಸಬ್ ಇನ್ಸ್ಪೆಕ್ಟರ್ ,ಎಸಿಪಿ, ಡಿಸಿಪಿಗಳು, ಪ್ರತಿ ಠಾಣೆಯಿಂದ 10 ಸಿಬ್ಬಂದಿ ತಂಡ ರಚನೆ ಮಾಡಲಾಗಿದೆ. ಮುತುವರ್ಜಿಯಿಂದ ಕಾರ್ಯಾಚರಣೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಪ್ರತಿ ಪೊಲೀಸ್ ಠಾಣೆಯಲ್ಲಿ ಶೂನ್ಯ ಅಪರಾಧ ವ್ಯವಸ್ಥೆ ಮಾಡಲು ಪ್ರಯತ್ನ ಮಾಡಲಾಗುತ್ತದೆ. ಇನ್ನು ಗಾಂಜಾ, ಡ್ರಗ್ಸ್ ಮೂಲ ಯಾವುದು? ಈ ಕುರಿತು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆಯಾವ ಯಾವಾ ಏರಿಯಾಗಳಲ್ಲಿ ಮಾದಕ ವಸ್ತುಗಳ ಮಾರಾಟ ಮಾಡಲಾಗುತ್ತದೆ ಎಂಬ ಮಾಹಿತಿ ಕಲೆ ಹಾಕಲಾಗುತ್ತಿದೆ.
ಶಾಲಾ-ಕಾಲೇಜು ಸುತ್ತಮುತ್ತ ನಿಗಾ ಇಡಲು ಸೂಚನೆ
ಇನ್ನು ಶಾಲಾ ಕಾಲೇಜುಗಳ ಸುತ್ತಲಿನ ಪ್ರದೇಶದಲ್ಲಿ ಸಿಸಿ ಟಿವಿ ಅಳವಡಿಕೆ ಮಾಡುವಂತೆ ಅವರು ತಾಕೀತು ಮಾಡಿದರು. ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಕ್ರಮ ಕೈಗೊಳ್ಳಬೇಕು. ಒಂದು ಸಿಸಿ ಟಿವಿ ಇದೆ ಅಂದರೆ ಅಲ್ಲಿ ಎಷ್ಟೋ ಅಪರಾಧ ಕೃತ್ಯ ತಡೆಯಲು ಸಾಧ್ಯವಾಗುತ್ತದೆ. ಯಾವುದೇ ಪ್ರಭಾವಕ್ಕೆ ಒಳಗಾಗುವ ಪ್ರಶ್ನೆಯೇ ಇಲ್ಲ. ಗಾಂಜಾ ಡ್ರಗ್ಸ್ ಮಾರಾಟ, ಸೇವೆನೆ ವಿಚಾರದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿದ್ದೇವೆ ಎಂದು ಹೇಳಿದರು.












Click it and Unblock the Notifications