ಹುಬ್ಬಳ್ಳಿಯಲ್ಲಿ ಬೆಳ್ ಬೆಳಗ್ಗೆ ಬೈಕ್ ವ್ಹೀಲಿಂಗ್ ಗೆ ಸಹೋದರರ ಬಲಿ

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ, ನವೆಂಬರ್ 7: ಬೈಕ್ ವ್ಹೀಲಿಂಗ್ ಮಾಡುತ್ತಿದ್ದ ಸಹೋದರರಿಬ್ಬರು ಭಾನುವಾರ ಅಪಘಾತವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹುಬ್ಬಳ್ಳಿಯ ಆನಂದ ನಗರ ರಸ್ತೆಯ ಕುಷ್ಠರೋಗ ಆಸ್ಪತ್ರೆ ಬಳಿ ನ್ಯೂ ಆನಂದ ನಗರ ನಿವಾಸಿಗಳಾದ ಇಮ್ರಾನ್ ಮಕಾನದಾರ (17), ಖಲೀಲ್ ಶೇಖ್ ಮಕಾನದಾರ (17) ಬೈಕ್ ವ್ಹೀಲಿಂಗ್ ಮಾಡುವ ವೇಳೆ ಆಯತಪ್ಪಿ ಕೆಳಗೆ ಬಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಬೆಳಗಿನ ವೇಳೆ ವ್ಹೀಲಿಂಗ್ ಮಾಡುವಾಗ ಹೀಗಾಗಿದ್ದು, ಇತ್ತೀಚೆಗೆ ಕಾಲೇಜು-ಶಾಲೆಗೆ ತೆರಳುವ ಹುಡುಗರು ಹೀಗೆ ವ್ಹೀಲಿಂಗ್ ಮಾಡುವುದು ಸಾಮಾನ್ಯ ಎಂಬಂತಾಗಿದೆ. ಈ ಬಗ್ಗೆ ಪೊಲೀಸರು ಯಾವುದೇ ಕ್ರಮ ಕೈಗೊಂಡ ಉದಾಹರಣೆಗಳಿಲ್ಲ. ಇದೇ ರೀತಿ ವ್ಹೀಲಿಂಗ್ ಮಾಡುವಾಗಲೇ ಈಚೆಗೆ ಒಬ್ಬರು ಸಾವನ್ನಪ್ಪಿದ್ದರು ಎಂದು ಸ್ಥಳೀಯರು ಹೇಳುತ್ತಾರೆ.[ಬೈಕ್ ವ್ಹೀಲಿಂಗ್ ಮಾಡುತ್ತ ಕಾರ್‌ಗೆ ಗುದ್ದಿದ ಯುವಕ]

Hubballi brothers die while bike wheeling

ಲಾರಿ ಕಳ್ಳತನ: ಸ್ಥಳೀಯ ಕಸಬಾಪೇಟ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಲಾರಿ ಕಳವು ಮಾಡಲಾಗಿದೆ. ಹಳೇಹುಬ್ಬಳ್ಳಿ ಗುಡಿಹಾಳ ರಸ್ತೆಯ ಯು.ಕೆ. ಹಿಲ್ ನಿವಾಸಿ ಅನೀಶ್ ಮಹ್ಮದ್ ಮೆಹಬೂಬಸಾಬ ಹೊನ್ನಾಳಿ ಎಂಬುವವರು ತಮ್ಮ 10 ಗಾಲಿಗಳ ಲಾರಿಯನ್ನು ಬಾಣತಿಕಟ್ಟಿ ಹತ್ತಿರವಿರುವ ಶೌಚಾಲಯದಲ್ಲಿ ಬಳಿ ನಿಲ್ಲಿಸಿದ್ದಾಗ ಲಾರಿಯನ್ನು ಕಳವು ಮಾಡಲಾಗಿದೆ.[ಹುಬ್ಬಳ್ಳಿ: ಪತ್ನಿಯ ಕಿರುಕುಳಕ್ಕೆ ಪತಿ ಆತ್ಮಹತ್ಯೆ, ಇನ್ನಿತರ ಕ್ರೈಂಗಳು]

ಅಂಚೆ ಅಧಿಕಾರಿ ವಂಚನೆ: ಇಲ್ಲಿಯ ವಿಜಯನಗರ ಅಂಚೆ ಕಚೇರಿ ಸಿಬ್ಬಂದಿ ವಿ ನಾರಾಯಣಕರ ಎಂಬುವವರು ವೃದ್ದಾಪ್ಯ ವೇತನದ ಹಣವನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ಮನಿಯಾರ್ಡರ್ ವೋಚರ್ಗಳ ಮೇಲೆ ಫಲಾನುಭವಿಗಳ ಸಹಿ ಪಡೆದು ಅವರಿಗೆ ಹಣ ಕೊಡದೇ ಸ್ವಂತಕ್ಕೆ ಬಳಸಿಕೊಂಡಿದ್ದಾರೆ ಎಂದು ಮುಖ್ಯ ಅಂಚೆ ಕಚೇರಿಯ ರಂಗನಾಥ ಮದುಸಾಗರ ದೂರು ನೀಡಿದ್ದಾರೆ.

ದಂಡ: ಸಂಚಾರ ನಿಯಮ ಉಲ್ಲಂಘನೆ ಮಾಡಿದ 1072 ಕೇಸ್ ದಾಖಲಿಸಿ, 1,26,100 ರುಪಾಯಿ ದಂಡ ವಸೂಲಿ ಮಾಡಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Hubballi brothers Imran Makandara, Khaleel Sheikh Makandara die while bike wheeling on Sunday.
Please Wait while comments are loading...