ತಮ್ಮನ ಪ್ರಾಣ ಉಳಿಸಿದ ಹುಬ್ಬಳ್ಳಿ ಹುಡುಗಿಗೆ ಶೌರ್ಯ ಪ್ರಶಸ್ತಿ

Written By: Ramesh
Subscribe to Oneindia Kannada

ಹುಬ್ಬಳ್ಳಿ, ಜನವರಿ. 18 : ತಮ್ಮ ಪ್ರಾಣ ಭಯ ಲೆಕ್ಕಿಸದೆ ಇತರರನ್ನು ರಕ್ಷಿಸುವ ಸಾಹಸಿ ಮಕ್ಕಳಿಗೆ ನೀಡಲಾಗುವ ಶೌರ್ಯ ಪ್ರಶಸ್ತಿಗೆ ಹುಬ್ಬಳ್ಳಿಯ ಸಿಯಾ ಖೋಡೆ ಆಯ್ಕೆಯಾಗಿದ್ದಾಳೆ.

ಹುಬ್ಬಳ್ಳಿಯ ಗಂಗಾಧರೇಶ್ವರ ಶಾಲೆಯಲ್ಲಿ 7ನೇ ತರಗತಿಯಲ್ಲಿ ಓದುತ್ತಿರುವ ಸಿಯಾ 2015 ಏಪ್ರಿಲ್ 14ರಂದು ತನ್ನ ತಮ್ಮನನ್ನು ವಿದ್ಯುತ್ ಅವಘಡದಿಂದ ಕಾಪಾಡಿ ಪ್ರಾಣ ರಕ್ಷಸಿದಕ್ಕಾಗಿ ಈ ಪ್ರಶಸ್ತಿ ಲಭಿಸಿದೆ.

Hubballi 7th Class girl to get national bravery award

ಜನವರಿ 23ರಂದು ಪ್ರಧಾನಿ ನರೇಂದ್ರ ಮೋದಿ ಅವರು ಈ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ.

ಸಿಯಾಳ ಸಹಾಸ : 2015 ಏಪ್ರಿಲ್ 14ರಂದು ತಮ್ಮ ಮನೆಯಲ್ಲಿ ಆಟವಾಡುವ ಸಂದರ್ಭದಲ್ಲಿ ಸಿಯಾಳ ಸಹೋದರ ಯಲ್ಲಪ್ಪ ಆಕಸ್ಮಿಕವಾಗಿ ವಿದ್ಯುತ್ ವೈರ್ ತುಳಿದು ಅಪಾತದಲ್ಲಿ ಬಿದಿದ್ದ. ಇದನ್ನು ಕಂಡ ಸಿಯಾ ಓಡಿ ಬಂದು ತಮ್ಮನ ದೇಹ ಮುಟ್ಟದೆ ಅಂಗಿ ಹಿಡಿದು ಎಳೆದ ಕಾಪಾಡಿದ್ದಾಳೆ.

ಆ ವೇಳೆ ಸಿಯಾಳಿಗೆ ಸ್ವಲ್ಪ ಸುಟ್ಟ ಗಾಯಗಳಾಗಿದ್ದವು. ನಂತರ ಇವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಸಿಯಾಳ ಈ ಸಹಾಸಕ್ಕೆ ಸುತ್ತಮುತ್ತಲಿನ ಜನರು ಹಾಗೂ ಹೆತ್ತರವರು ಹರ್ಷ ವ್ಯಕ್ತಪಡಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Siya Khode, 7th class student from Hubballi, she rescued her a four year old brother trapped inside a house on fire, has been selected for the National Bravery Awards.
Please Wait while comments are loading...