ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಿಮ್ಸ್‌ ಆಸ್ಪತ್ರೆ ಭದ್ರತೆಗೆ ಗೃಹರಕ್ಷಕ ಸಿಬ್ಬಂದಿ ನಿಯೋಜನೆ

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ ನವೆಂಬರ್‌10 : ಉತ್ತರ ಕರ್ನಾಟಕದ ಬಡರೋಗಿಗಳ ಪಾಲಿಗೆ ಸಂಜೀವಿನ ಆಗಿರುವ ಕಿಮ್ಸ್ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಸ್ಥೆಗಳಲ್ಲಿ ಭದ್ರತಾ ವಿಷಯ ಸದಾ ಚರ್ಚೆಯಲ್ಲಿರುವ ವಿಚಾರವಾಗಿದೆ. ಈವರೆಗಿನ ಖಾಸಗಿ ಭದ್ರತಾ ಸಿಬ್ಬಂದಿ ಮತ್ತು ಸೂಪರ್‌ವೈಸರ್‌ ಸೇವೆಯನ್ನು ಹಿಂಪಡೆಯಾಗಲಾಗಿದ್ದು ಇಂದಿನಿಂದ ಸರ್ಕಾರದ ಅಧೀನದ ಗೃಹರಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ.

ಜಿಲ್ಲಾಧಿಕಾರಿಗಳು ಪತ್ರ ಬರೆದು ಭದ್ರತಾ ಸೇವೆಗಳನ್ನು ನಿರ್ವಹಿಸಲು ಗೃಹರಕ್ಷಕರನ್ನು ನಿಯೋಜಿಸಲು ಪ್ರಸ್ತಾವನೆ ಸಲ್ಲಿಸಿದ್ದರು. ಅದರಂತೆ ಗೃಹರಕ್ಷಕದಳದ ಆರಕ್ಷಕ ಮಹಾ ನಿರ್ದೇಶಕರು ಕಿಮ್ಸ್‌ ಸಂಸ್ಥೆಗೆ 150 ಗೃಹರಕ್ಷಕರನ್ನು ನಿಯೋಜಿಸಲು ಮಂಜೂರಾತಿ ಆದೇಶ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಬ್ಬಂದಿ ಇಂದು ಕರ್ತವ್ಯಕ್ಕೆ ಹಾಜರಾಗಿದ್ದಾರೆ.

Vande Bharat Train; ಬೆಂಗಳೂರು-ಹುಬ್ಬಳ್ಳಿ ವೇಳಾಪಟ್ಟಿ ಕೇಳಿದ ಮಂಡಳಿVande Bharat Train; ಬೆಂಗಳೂರು-ಹುಬ್ಬಳ್ಳಿ ವೇಳಾಪಟ್ಟಿ ಕೇಳಿದ ಮಂಡಳಿ

ಕಳೆದ 13 ವರ್ಷಗಳಿಂದ ಕಿಮ್ಸ್ ಭದ್ರತಾ ಸೇವೆ ಗುತ್ತಿಗೆ ನಿರ್ವಹಿಸುತ್ತಿದ್ದ ದೇಶಪಾಂಡೆ ನಗರದ ಭಾರತ ಎಕ್ಸ್‌ ಸರ್ವಿಸ್‌ಮೆನ್ ಸಂಸ್ಥೆಯ 139 ಸೆಕ್ಯುರಿಟಿ ಗಾರ್ಡ ಮತ್ತು ಸೂಪರ್ ವೈಸರ್‌ಗಳ ಸೇವೆಯನ್ನು ಹಿಂಪಡೆಯಲಾಗಿದೆ. ಈ ಹಿನ್ನೆಯಲ್ಲಿ ಇಂದಿನಿಂದ ಗೃಹರಕ್ಷಕ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿದ್ದು ಪ್ರತಿ ಪಾಳಿಗೆ 50 ಸಿಬ್ಬಂದಿಯಂತೆ ಮೂರು ಪಾಳಿಗಳಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ.

ಭದ್ರತಾ ಟೆಂಡರ್ ಗುತ್ತಿಗೆ ಅಧಿಕಾರವನ್ನು ಹಿಂಪಡೆದ ಕಿಮ್ಸ್ ನಿರ್ದೇಶಕರು

ಭದ್ರತಾ ಟೆಂಡರ್ ಗುತ್ತಿಗೆ ಅಧಿಕಾರವನ್ನು ಹಿಂಪಡೆದ ಕಿಮ್ಸ್ ನಿರ್ದೇಶಕರು

ಕೋವಿಡ್ ಕಾಲಾವಧಿಯಲ್ಲಿ ಕಿಮ್ಸ್ ಆಸ್ಪತ್ರೆಯ ಸೇವೆ ವ್ಯಾಪಕ ಪ್ರಶಂಸೆಗೊಳಪಟ್ಟಿತ್ತು. ಆ ಅವಧಿಯಲ್ಲಿ ಭದ್ರತಾ ಸಿಬ್ಬಂದಿಯ ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಅಂದಿನ ಜಿಲ್ಲಾಧಿಕಾರಿಗಳಾಗಿದ್ದ ನಿತೇಶ ಪಾಟೀಲ್‌, ಭದ್ರತಾ ಗುತ್ತಿಗೆ ಪಡೆದಿದ್ದ ಭಾರತ ಎಕ್ಸ್ ಸರ್ವಿಸ್‌ಮನ್ ಸಂಸ್ಥೆಯನ್ನು ಕಪ್ಪುಪಟ್ಟಿಗೆ ಸೇರಿಸಿದ್ದರು. ಹೀಗಾಗಿ ಭದ್ರತಾ ಟೆಂಡರ್ ಗುತ್ತಿಗೆ ಅಧಿಕಾರವನ್ನು ಕಿಮ್ಸ್ ನಿರ್ದೇಶಕರು ಹಿಂಪಡೆದಿದ್ದರು.

ಕಿಮ್ಸ್ ಸಂಸ್ಥೆಯ ಕಾಲೇಜು, ಆಸ್ಪತ್ರೆಗಳಲ್ಲಿ ಅನೇಕ ಭದ್ರತಾ ಲೋಪ, ಶಿಶು ನಾಪತ್ತೆ ಪ್ರಕರಣ, ಅಲ್ಲದೇ ಕಿಮ್ಸ್ ವಸತಿ ಗೃಹಗಳಲ್ಲಿ ಪದೇ ಪದೇ ಕಳ್ಳತನ ಪ್ರಕರಣಗಳು ನಡೆಯುತ್ತಿದ್ದವು. ಇವುಗಳಿಂದ ಯಾವುದೇ ತರಬೇತಿ ಇಲ್ಲದ ಹೊರ ಗುತ್ತಿಗೆ ಭದ್ರತಾ ಸಿಬ್ಬಂದಿಯನ್ನು ಸಂಶಯದಿಂದ ನೋಡುವಂತಾಗಿತ್ತಲ್ಲದೆ, ಈ ಪ್ರಕರಣದಲ್ಲೇ ವಿದ್ಯಾನಗರ ಠಾಣಾಧಿಕಾರಿಯೊಬ್ಬರ ತಲೆದಂಡವೂ ಆಗಿತ್ತು. ಈ ಹಿನ್ನೆಲೆಯಲ್ಲಿ ಗೃಹರಕ್ಷಕರನ್ನು ನಿಯೋಜನೆಗೊಳಿಸಲಾಗಿದೆ.

ಗೃಹರಕ್ಷಕರಿಂದ ಉತ್ತಮ ಸೇವೆಯ ನಿರೀಕ್ಷೆ

ಗೃಹರಕ್ಷಕರಿಂದ ಉತ್ತಮ ಸೇವೆಯ ನಿರೀಕ್ಷೆ

ಅನೇಕ ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದ ತಮ್ಮ ಸೇವೆ ಹಿಂಪಡೆಯಲಾಗಿದೆ ಎಂದು ಕೆಲ ಭದ್ರತಾ ಸಿಬ್ಬಂದಿ ಧರಣಿಗೆ ನಡೆಸಿದ್ದಾರೆ. ಈ ಬಗ್ಗೆ ಕಿಮ್ಸ್‌ ನಿರ್ದೇಶಕರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ. ಈ ಬಗ್ಗೆ ಮುಂದಿನ ಕ್ರಮ ಏನು ಎನ್ನುವುದರ ಬಗ್ಗೆ ಸಿಬ್ಬಂದಿ ಕಾದು ನೋಡಬೇಕಿದೆ.

ಗೃಹರಕ್ಷಕರ ನೆರವನ್ನು ಈಗಾಗಲೇ ಪೊಲೀಸ್ ಇಲಾಖೆಗೂ ನೀಡಲಾಗುತ್ತಿದೆ. ಸರ್ಕಾರದ ಅಧೀನ ಸಂಸ್ಥೆಯಾದ ಗೃಹರಕ್ಷಕ ದಳದ ಸಿಬ್ಬಂದಿ ಬೆಳಗಾವಿ ಜಿಲ್ಲಾ ಆಸ್ಪತ್ರೆಗೂ ನಿಯೋಜಿತಗೊಂಡಿದ್ದಾರೆ. ತರಬೇತಿ ಹೊಂದಿರುವ ಗೃಹರಕ್ಷಕರು ಸ್ವಯಂ ಸೇವಕರಾದ್ದರಿಂದ ಉತ್ತಮ ಸೇವೆ ನೀಡಬಹುದು ಎಂದು ನಿರೀಕ್ಷಿಸಲಾಗಿದೆ.

ಕೋರ್ಟ್ ಮೆಟ್ಟಿಲೇರಲು ಸಿದ್ಧರಾದ ಭದ್ರತಾ ಸಿಬ್ಬಂದಿ

ಕೋರ್ಟ್ ಮೆಟ್ಟಿಲೇರಲು ಸಿದ್ಧರಾದ ಭದ್ರತಾ ಸಿಬ್ಬಂದಿ

ಕಿಮ್ಸ್ ಸಂಸ್ಥೆ ಹಾಗೂ ಸೂಪರ್ ಸ್ಟೆಶಾಲಿಟಿ ಆಸ್ಪತ್ರೆಗೆ ಪ್ಯಾಕೇಜ್ 6 ಹಾಗೂ ಪ್ಯಾಕೇಜ್ 4ರ ಮೂಲಕ 139 ಸೆಕ್ಯುರಿಟಿ ಗಾರ್ಡ್ಸ ಮತ್ತು ಸೂಪರವೈಸರ್ ಸೇವೆಯನ್ನು ಭಾರತ ಎಕ್ಸ್ ಸರ್ವಿಸ್ ಮೆನ್ ಸಂಸ್ಥೆಯ ಮೂಲಕ ಸೇವೆ ಗುತ್ತಿಗೆಯನ್ನು 08-03-2019 ರಿಂದ 28-02-2022ರವರೆಗೆ ಪಡೆಯಲಾಗಿತ್ತು. ಕೋವಿಡ್ ಹಿನ್ನೆಲೆಯಲ್ಲಿ ಸದರಿ ಸೇವೆ ಕಾಲ ಕಾಲಕ್ಕೆ ಮುಂದೂಡಿದ್ದರೂ ಕಳೆದ ಕಳೆದ ಎಂಟು ತಿಂಗಳಿಂದ ಹಾಗೆಯೇ ಮುಂದುವರಿದಿತ್ತು. ಸಂಸ್ಥೆ ಪ್ರತಿ ತಿಂಗಳು 20 ಲಕ್ಷಕ್ಕೂ ಮೊತ್ತವನ್ನು ನಿಯಮಿತವಾಗಿ ಪಡೆದಿದ್ದರೂ ಭದ್ರತಾ ಸಿಬ್ಬಂದಿಗೆ ಕಳೆದ 9 ತಿಂಗಳಿಂದ ಪಿಎಫ್ ಪಾವತಿಸಿಲ್ಲ ಎನ್ನುವ ಆರೋಪ ಕೇಳಿಬಂದಿದೆ. ಅಲ್ಲದೇ ಕಳೆದ ಐದಾರು ತಿಂಗಳಿನಿಂದ ಸರಿಯಾಗಿ ವೇತನ ಸಹಿತ ನೀಡಿಲ್ಲ. ಹೀಗಾಗಿ ಕೆಲ ಸಿಬ್ಬಂದಿಗಳು ಕೋರ್ಟ್‌ ಮೆಟ್ಟಿಲೇರಲು ಸಿದ್ಧರಾಗಿದ್ದಾರೆ.

ಗೃಹರಕ್ಷಕರ ನಿಯೋಜನೆಯಿಂದ ಕಿಮ್ಸ್‌ಗೆ 36 ಲಕ್ಷ ರೂ ಲಾಭ

ಗೃಹರಕ್ಷಕರ ನಿಯೋಜನೆಯಿಂದ ಕಿಮ್ಸ್‌ಗೆ 36 ಲಕ್ಷ ರೂ ಲಾಭ

ಹೊರಗುತ್ತಿಗೆಯನ್ನು ಪಡೆದ ಭಾರತ ಎಕ್ಸ್ ಸರ್ವಿಸ್ ಮೆನ್ ಸಂಸ್ಥೆ ದಾಖಲೆಗಳಲ್ಲಿ 139 ಗಾರ್ಡ ಹಾಗೂ ಮೇಲ್ವಿಚಾರಕರನ್ನು ಕರ್ತವ್ಯಕ್ಕೆ ನೀಡಿದೆ ಎಂದು ಉಲ್ಲೇಖಿಸಿದೆ. ಸಂಸ್ಥೆ ಸೇವೆಗೆ ಕನಿಷ್ಟ 20ಕ್ಕೂ ಕಡಿಮೆ ಜನರನ್ನು ಪೂರೈಸಿದ್ದರೂ, 139ರ ಹಾಜರಾತಿಗನುಗುಣವಾಗಿ 20 ಲಕ್ಷಕ್ಕೂ ಹೆಚ್ಚು ಹಣ ಸಂದಾಯ ಮಾಡಿಕೊಳ್ಳುತ್ತಿತ್ತು ಎನ್ನಲಾಗಿದೆ. ಈಗ ಗೃಹರಕ್ಷಕರ ಸೇವೆ ನಿಯೋಜನೆಯಿಂದ ಸುಮಾರು 11 ಸಿಬ್ಬಂದಿ ಹೆಚ್ಚುವರಿ ಪಡೆದಿದ್ದರೂ ಕಿಮ್ಸ್ ಸಂಸ್ಥೆಗೆ ಪ್ರತಿ ತಿಂಗಳು ಸುಮಾರು 3 ಲಕ್ಷ ನಿವ್ವಳ ಉಳಿತಾಯವಾಗಲಿದ್ದು, ವರ್ಷಕ್ಕೆ 36 ಲಕ್ಷ ರೂಪಾಯಿ ಲಾಭವಾಗಲಿದೆ ಎನ್ನುವ ಮಾತುಗಳು ಕೇಳಿಬರುತ್ತಿದೆ.

English summary
Home Guard deployed for KIMs Hospital, Hubballi Security.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X