ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುಬ್ಬಳ್ಳಿ ದರ್ಗಾದಲ್ಲಿ 62 ವರ್ಷಗಳಿಂದ ಪೂಜೆ ಸಲ್ಲಿಸುತ್ತಿರುವ ಹಿಂದೂ ಮನೆತನ

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, ಮೇ.12 : ರಾಜ್ಯದಲ್ಲಿ ಹಿಂದೂ - ಮುಸ್ಲಿಂರ ನಡುವೆ ಆಝಾನ್, ಸುಪ್ರಭಾತ ಘರ್ಷಣೆ ನಡುವೆಯೇ ಧರ್ಮ ಸಾಮರಸ್ಯಕ್ಕೆ ಹುಬ್ಬಳ್ಳಿಯಲ್ಲಿರುವ ದರ್ಗಾ ಸಾಕ್ಷಿಯಾಗಿದೆ. ಹಿಂದೂ-ಮುಸ್ಲಿಂಮರು ಒಟ್ಟಿಗೆ ಸೇರಿ ಹುಬ್ಬಳ್ಳಿಯಲ್ಲಿ ದರ್ಗಾದಲ್ಲಿ ದೇವರಿಗೆ ಪೂಜೆ ಸಲ್ಲಿಸುವ ಮೂಲಕ ಧರ್ಮ ಸಾಮರಸ್ಯಕ್ಕೆ ಸಾಕ್ಷಿಯಾಗಿದ್ದಾರೆ.

ಧರ್ಮ ಧರ್ಮಗಳ ಮಧ್ಯೆ ಸದ್ಯ ಕೋಮು ಸಂಘರ್ಷ ಜೋರಾಗಿದೆ. ರಾಜ್ಯದಲ್ಲಿ ಹಿಂದೂ - ಮುಸ್ಲಿಂಮರ ನಡುವೆ ಆಝಾನ್, ಸುಪ್ರಭಾತ ಘರ್ಷಣೆ ನಡುವೆಯೇ ನಡುವೆ ಧರ್ಮ ಸಾಮರಸ್ಯಕ್ಕೆ ಹುಬ್ಬಳ್ಳಿಯಲ್ಲಿರುವ ದರ್ಗಾ ಸಾಕ್ಷಿಯಾಗಿದೆ. ನಾವೆಲ್ಲರೂ ಒಂದೇ.. ಒಂದೇ ತಾಯಿಯ ಮಕ್ಕಳಿದ್ದಂತೆ ಎಂಬಂತೆ ಹುಬ್ಬಳ್ಳಿಯಲ್ಲಿರುವ ದರ್ಗಾದಲ್ಲಿ ಹಿಂದೂ ಮಹಿಳೆಯೊಬ್ಬರು ದರ್ಗಾದಲ್ಲಿ ಪೂಜೆ ಮಾಡುತ್ತಾ ಬಂದಿದ್ದಾರೆ. ಅಷ್ಟೇ ಅಲ್ಲದೆ ಹಿಂದೂ-ಮುಸ್ಲಿಂಮರು ಒಟ್ಟಿಗೆ ಸೇರಿ ಪೂಜೆ ಸಲ್ಲಿಸುತ್ತಿರುವುದು ಜನರ ಮೆಚ್ಚುಗೆಗೆ ಹುಬ್ಬಳ್ಳಿಯಲ್ಲಿರುವ ದರ್ಗಾ ಸಾಕ್ಷಿಯಾಗಿದೆ.

ಕಳೆದ 62 ವರ್ಷಗಳಿಂದ ಹುಬ್ಬಳ್ಳಿಯ ಕೇಶ್ವಾಪೂರದ ರಾಮನಗರ ದೂದಪಿರಾ ದರ್ಗಾದಲ್ಲಿ 62 ವರ್ಷಗಳಿಂದ ಗುಡಗುಂಟಿ ಮನೆತನದ ಹನಮವ್ವ ಎಂಬುವವರು ದರ್ಗಾದಲ್ಲಿ ಪೂಜೆ ಸಲ್ಲಿಸುತ್ತಾ ಬಂದಿದ್ದಾರೆ. ಮುಸ್ಲಿಂ ಸಮುದಾಯದವರು ಕೂಡ ಈ ಮನೆತನಕ್ಕೆ ಅಷ್ಟೇ ಸಪೋರ್ಟ್ ಮಾಡುತ್ತಾ ಬಂದಿರುವುದು ವಿಶೇಷ ಸಂಗತಿ. ಒಂದು ಕಡೆ ಹಿಂದೂಗಳು ಪೂಜೆ ಮಾಡುತಿದ್ದರೆ. ಇನ್ನೊಂದಡೆ ಮುಸ್ಲಿಂರು ನಮಾಜ್ ಮಾಡುತ್ತಾರೆ. ಹೀಗೆ ಎಲ್ಲ ಧರ್ಮದವರು ಭಾವೈಕ್ಯತೆಯಿಂದ ಸಾಮರಸ್ಯದಿಂದ ಸಮಾಜದಲ್ಲಿ ಶಾಂತಿ ನೆಲೆಸುವಂತ ಹಿಂತಹ ಭಾವೈಕ್ಯತೆಯ ಕೇಂದ್ರಗಳು ಹೆಚ್ಚಾಗಲಿ ಎಂದು ಎಲ್ಲರು ಸೇರಿ ಪ್ರತಿ ವರ್ಷ ಸಂದಲ್ ಮತ್ತು ಉರುಸು ಸಹ ಮಾಡುತ್ತಿದ್ದಾರೆ.

 Hindu women performing puja at Dargah in Hubballi

ಸದ್ಯ ಇಲ್ಲಿಯವರೆಗೆ ಯಾರು ಕೂಡ ಇವರಿಗೆ ತಕರಾರು ಮಾಡಿಲ್ಲ. ಮುಸ್ಲಿಂರು ಬಂದು ಇಲ್ಲಿ ನಮಾಜ್ ಮಾಡಿ ಹೋಗುತ್ತಾರೆ. ಈ ಮದ್ಯೆಯೇ ಪೂಜೆ ಮಾಡುತ್ತಿರುವ ಹನಮವ್ವ ಅವರು ಅನೇಕ ವರ್ಷಗಳಿಂದ ಈ ದರ್ಗಾಕ್ಕೆ ಪೂಜೆ ಸಲ್ಲಿಸುತ್ತಿದ್ದಾರೆ. ಇವರ ತಂದೆ ತಾಯಿಯ ತೀರಿ ಹೋದ ನಂತರ ದರ್ಗಾ ಪೂಜೆ ಮುಮದುವರೆಸಿಕೊಮಡು ಬಂದಿದ್ದಾರೆ. ಒಟ್ಟಾರೆ ರಾಜ್ಯದಲ್ಲಿ ಧರ್ಮ ಧರ್ಮಗಳ ನಡುವೆ ಅಶಾಂತಿ ಬೀಜ ಬಿತ್ತುತ್ತಿರು ಕೆಲವರಿಗೆ ಈ ದರ್ಗಾ ಸಾಮರಸ್ಯದ ಪೂಜೆ ಸಾಕ್ಷಿಯಾಗಿದೆ.

 Hindu women performing puja at Dargah in Hubballi

ಹಿಂದೂ ಮನೆತನದ ದರ್ಗಾ ಪೂಜೆಗೆ ಹುಬ್ಬಳ್ಳಿ ಜನರ ವ್ಯಾಪಕ ಪ್ರಶಂಸೆ..!

ನಿನ್ನಯಷ್ಟೇ ಹುಬ್ಬಳ್ಳಿ ಮಸೀದಿ ಮೇಲೆ ಕಿಡಿಗೇಡಿಗಳು ಕೇಸರಿ ಧ್ವಜ ಹಾರಿಸಿದ್ದರು. ಆದರೆ ಅಂತಹ ಕಿಡಿಗೇಡಿಗಳಿಗೆ ಈ ದರ್ಗಾದಲ್ಲಿ ನಡೆಯುವ ಪೂಜೆ ಧರ್ಮ ಸಾಮರಸ್ಯಕ್ಕೆ ಮಾದರಿ ಎಂದು ಹುಬ್ಬಳ್ಳಿ ಜನರು ಪ್ರಶಂಶಿದ್ದಾರೆ. ಒಟ್ಟಿನಲ್ಲಿ ಜಾತಿ ಧರ್ಮ ಎಂದು ಕಚ್ಚಾಡುತ್ತಿರವರ ಮಧ್ಯ ಕೇಶ್ವಾಪೂರ ರಾಮನಗರದಲ್ಲಿರುವ ದೂದಪೀರಾ ದರ್ಗಾದಲ್ಲಿ ಹಿಂದೂ ಮನೆತನದವರು ಪೋಜೆ ಸಲ್ಲಿಸುತ್ತಿರುವುದು ಎಲ್ಲರಲ್ಲೂ ಸಂತಸ ಮೂಡಿದೆ. ಇನ್ನು ಈ ಏರಿಯಾದ ಜಾತಿ-ಧರ್ಮಗಳ ಭೇದ ಮರೆತು ಸಾಗಿಸುತ್ತಿರುವುದು ನಾಡಿನ ಜನತೆಗೆ ಸಾಮರಸ್ಯದ ಸಂದೇಶದ ವಿಷಯವಾಗಿದೆ.

English summary
Azaan vs Suprabhata Row in Karnataka : 62 Year Old Hindu women performing puja at dargah in Hubballi,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X