ಹುಬ್ಬಳ್ಳಿಯಲ್ಲಿ ಹೆಸ್ಕಾಂ ಎಟಿಪಿ ಮಶೀನ್ ಗಳು ಖಾಲಿ ಖಾಲಿ

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ ನವೆಂಬರ್ 30: ನಗರದಲ್ಲಿ ಹೊಸ ನೋಟಿಗೆ ಸರತಿಯಲ್ಲಿ ನಿಲ್ಲುವುದು ಈಗ ಸಾಮಾನ್ಯವಾಗಿದೆ. ಇತ್ತ ಹೆಸ್ಕಾಂ ಕರೆಂಟ್ ಬಿಲ್ ತುಂಬಲು ಜನ ಕರ್ನಾಟಕ ಒನ್ ಮತ್ತು ಹೆಸ್ಕಾಂ ಕಚೇರಿಗಳಲ್ಲಿ ತಾಸುಗಟ್ಟಲೇ ಸರತಿಯಲ್ಲಿ ನಿಲ್ಲುವ ಪರಿಸ್ಥಿತಿ ಎದುರಾಗಿದೆ.

ಆದರೆ, ಹೆಸ್ಕಾಂ ಕರೆಂಟ್ ಬಿಲ್ ತುಂಬಲೆಂದೇ ನಗರದ ಏಳು ಕಡೆಗಳಲ್ಲಿ ಎಟಿಪಿ (ಎನಿ ಟೈಮ್ ಪೇಮೆಂಟ್) ಮಶೀನ್ ಸ್ಥಾಪಿಸಿದೆ. ಆದರೆ ನಾಗರಿಕರು ಇಂತಹ ಎಟಿಪಿ ಮಶೀನ್ ಹತ್ತಿರ ಬೆರಳೆಣಿಕೆಯಷ್ಟೇ ಜನರು ಬರುತ್ತಿದ್ದಾರೆ.[ಹೆಸ್ಕಾಂ ಕರೆಂಟ್ ಬಿಲ್ ಕಟ್ಟಲು ಆನ್ ಲೈನ್ ವ್ಯವಸ್ಥೆ ಗತಿಯಿಲ್ಲ!]

HESCOM ATP machine awareness problem

ಈ ಮಶೀನ್ ಗಳ ವಿಶೇಷತೆಯೆನೆಂದರೆ ಇದರಲ್ಲಿ ನೋಟುಗಳನ್ನು ಮತ್ತು ಚೆಕ್ ಗಳನ್ನು ಕೂಡ ಹಾಕಬಹುದಾಗಿದೆ. ಈ ಬಗ್ಗೆ ಮಾಹಿತಿ ನೀಡಿದ ಮಶೀನ್ ಗಳ ಉಸ್ತುವಾರಿ ಸಿಸೆಲ್ ಈ ಯಂತ್ರಗಳ ಬಗ್ಗೆ ಜನರಲ್ಲಿ ಇನ್ನು ಹೆಚ್ಚಿನ ಜಾಗೃತಿ ಮೂಡಿಸಬೇಕಾಗಿದೆ. ಇಲ್ಲಿ ಸುಲಭವಾಗಿ ಅತೀ ಕಡಿಮೆ ಸಮಯದಲ್ಲಿ ಕರೆಂಟ್ ಬಿಲ್ ತುಂಬಬಹುದಾಗಿದ್ದು, ಬಿಲ್ ತುಂಬಲು ಸಹಾಯ ಮಾಡಲೆಂದೆ ನಗರದಲ್ಲಿ ಇರುವ ಎಲ್ಲ ಏಳು ಎಟಿಪಿ ಮಶೀನ ಗಳಲ್ಲಿ ಸಹಾಯಕರೊಬ್ಬರನ್ನ ನೇಮಿಸಲಾಗಿದೆ. ಗ್ರಾಹಕರು ಅವರ ಸಹಾಯ ಪಡೆದುಕೊಳ್ಳಬಹುದಾಗಿದೆ.[ಕರೆಂಟ್ ಕೊಡಿ ಎಂದು ಕರೆ ಮಾಡಿದ್ದಕ್ಕೆ ಕಂಬಿ ಹಿಂದೆ ಹೋದ್ರು]

HESCOM ATP machine awareness problem

ಈಗಾಗಲೇ ಹೆಸ್ಕಾಂ ನಲ್ಲಿ ಆನಲೈನ್ ನಲ್ಲಿ ಬಿಲ್ ತುಂಬುವ ಸೌಕರ್ಯವಿಲ್ಲ. ಇದರಿಂದ ಜನರು ಪರದಾಡುತ್ತಿದ್ದಾರೆ. ಎಟಿಪಿ ಮಶೀನ್ ಮೂಲ ಕೇಂದ್ರದಲ್ಲಿ ಇದರ ಬಗ್ಗೆ ಮಾಹಿತಿ ನೀಡಬೇಕಿದೆ ಎಂದರು. ಆದರೆ, ಈ ಬಗ್ಗೆ ಯಾವುದೇ ತಲೆ ಕೆಡಿಸಿಕೊಳ್ಳದೇ ಹೆಸ್ಕಾಂ ಅಧಿಕಾರಿಗಳು, ನಾವು ಏಜೆನ್ಸಿಯವರಿಗೆ ಕೊಟ್ಟಿದ್ದೇವೆ ಬೇಕಾದರೆ ಅವರೇ ಪ್ರಚಾರ ಮಾಡಿಕೊಳ್ಳಲಿ ಎಂದು ಸಾಗ ಹಾಕುತ್ತಾರೆ.

ಸದ್ಯ ಎಟಿಪಿ ಮಶೀನ್ ಉಸ್ತುವಾರಿ ನೋಡಿಕೊಳ್ಳುವ ಏಜೆನ್ಸಿಯವರು ಮಧ್ಯಾಹ್ನ 12 ರಿಂದ ಮರುದಿನ ಮಧ್ಯಾಹ್ನ 12 ರವರೆಗೆ ಸಂಗ್ರಹಗೊಂಡ ಹಣ ಮತ್ತು ಚೆಕ್ ಗಳನ್ನು ಹೆಸ್ಕಾಂ ಕ್ಯಾಶಿಯರ್ ಗೆ ತಲುಪಿಸುತ್ತಾರೆ. ಪ್ರತಿ ದಿನ ಬೆಳಗ್ಗೆ 7-30 ರಿಂದ ಸಂಜೆ 7-30 ರವರೆಗೆ ಎಟಿಪಿ ಮಶೀನ ಗಳಲ್ಲಿ ಸಹಾಯಕರು ಇರುತ್ತಾರೆ. ನಂತರ ಮಶೀನ್ ಬಳಕೆ ಗೊತ್ತಿದ್ದವರು ಕೆರೆಂಟ್ ಬಿಲ್ ಕಟ್ಟಬಹುದು. ಪ್ರಚಾರವೇ ಇಲ್ಲದಿದ್ದರೆ ಹೇಗೆ ? ಜನರು ಸರತಿ ಸಾಲಿನಲ್ಲಿ ನಿಲ್ಲಬೇಕೆ?

HESCOM ATP machine awareness problem

ಹೆಸ್ಕಾಂನಲ್ಲಿ ಸದ್ಯ ದಿನವೊಂದಕ್ಕೆ ರು 1.5 ರಿಂದ 2 ಲಕ್ಷ ಬಿಲ್ ಸಂಗ್ರಹವಾಗುತ್ತಿದೆ. ಎಟಿಪಿ ಮಶೀನ್ನಿನ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದಲ್ಲಿ ಹೆಸ್ಕಾಂಗೆ ಅತೀ ವೇಗದಲ್ಲಿ ಬಿಲ್ ಮೊತ್ತ ಸಂದಾಯವಾಗುವುದರಲ್ಲಿ ಸಂಶಯವೇ ಇಲ್ಲ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Hubli Electricity Supply Company Limited (HESCOM) online bill payment system sparks confusion. In online system are there in ATP( any time pement)machine in 7 place with guide. but still not publicity the people not Aware.
Please Wait while comments are loading...