ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾ ವಾರಿಯರ್ಸ್‌ಗಾಗಿ ಮುಖ ಕವಚ ತಯಾರಿಸಿದ ಜಿಟಿಟಿಸಿ

|
Google Oneindia Kannada News

ಧಾರವಾಡ, ಏಪ್ರಿಲ್ 14: ಕೊರೊನಾ ಸೋಂಕು ಹರಡುವುದನ್ನು ತಡೆಯಲು ವೈದ್ಯರು, ಪೊಲೀಸರು, ಪೌರ ಕಾರ್ಮಿಕರು ಶ್ರಮ ಪಡುತ್ತಿದ್ದಾರೆ. ಇವರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಎಲ್ಲರ ಕರ್ತವ್ಯವಾಗಿದೆ.

ಹುಬ್ಬಳ್ಳಿಯಲ್ಲಿರುವ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಜಿಟಿಟಿಸಿ) ಆರೋಗ್ಯ ಇಲಾಖೆ ಸಿಬ್ಬಂದಿ, ಪೊಲೀಸರು, ಪೌರ ಕಾರ್ಮಿಕರು ಮತ್ತು ಸರ್ಕಾರಿ ಸಿಬ್ಬಂದಿಗಳಿಗಾಗಿ ಫೇಸ್ ಶೀಲ್ಡ್ ಮಾಸ್ಕ್ ಸಿದ್ಧಪಡಿಸಿದೆ.

ಬೆಂಗಳೂರಿನಲ್ಲಿ ಸಾರ್ವಜನಿಕರಿಗೆ ಕೊರೊನಾ ವಾರಿಯರ್ಸ್ ಕಾಟ!ಬೆಂಗಳೂರಿನಲ್ಲಿ ಸಾರ್ವಜನಿಕರಿಗೆ ಕೊರೊನಾ ವಾರಿಯರ್ಸ್ ಕಾಟ!

ಮಂಗಳವಾರ ಜಿಟಿಟಿಸಿ ತಯಾರು ಮಾಡಿರುವ ವಿಶೇಷ ಮುಖ ಕವಚ (ಫೇಸ್ ಶೀಲ್ಡ್ ಮಾಸ್ಕ್) ಅನ್ನು ಪ್ರದರ್ಶನ ಮಾಡಲಾಯಿತು. ಪ್ರಸ್ತುತ ಪ್ರತಿದಿನ 200 ಮುಖ ಕವಚಗಳನ್ನು ತಯಾರು ಮಾಡುತ್ತಿದ್ದಾರೆ.

ಮಹಾತ್ಮ ಗಾಂಧಿ ವೇ‍ಷದಲ್ಲಿ ಸ್ಲಂ ಜನರಿಗೆ ಮಾಸ್ಕ್ ವಿತರಿಸಿದ ವ್ಯಕ್ತಿ ಮಹಾತ್ಮ ಗಾಂಧಿ ವೇ‍ಷದಲ್ಲಿ ಸ್ಲಂ ಜನರಿಗೆ ಮಾಸ್ಕ್ ವಿತರಿಸಿದ ವ್ಯಕ್ತಿ

ಬೃಹತ್, ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಸೇರಿದಂತೆ ವಿವಿಧ ನಾಯಕರಯ ಮಂಗಳವಾರ ಫೇಸ್‍ ಶೀಲ್ಡ್‌ ಮಾಸ್ಕ್‌ಗಳನ್ನು ವೀಕ್ಷಿಸಿದರು, ಮೆಚ್ಚುಗೆ ವ್ಯಕ್ತಪಡಿಸಿದರು.

ಕಚೇರಿಗೆ ಬಂದ ಕೇಂದ್ರ ಸಚಿವರು; ಮಾಸ್ಕ್ ಧರಿಸಿ ಕೆಲಸ ಕಚೇರಿಗೆ ಬಂದ ಕೇಂದ್ರ ಸಚಿವರು; ಮಾಸ್ಕ್ ಧರಿಸಿ ಕೆಲಸ

ಕಡಿಮೆ ವೆಚ್ಚದಲ್ಲಿ ಮುಖ ಕವಚ ಉತ್ಪಾದನೆ

ಕಡಿಮೆ ವೆಚ್ಚದಲ್ಲಿ ಮುಖ ಕವಚ ಉತ್ಪಾದನೆ

ಕೊರೊನಾದಿಂದ ಕಾಪಾಡಿಕೊಳ್ಳಲು ಸ್ವಯಂ ರಕ್ಷಣಾ ಸಾಧನವನ್ನು ಯಾವುದೇ ತಂತ್ರಜ್ಞಾನದ ಅವಶ್ಯಕತೆಯಿಲ್ಲದೇ ಅತ್ಯಂತ ಸರಳವಾಗಿ ಮತ್ತು ಕಡಿಮೆ ವೆಚ್ಚದಲ್ಲಿ ಉತ್ಪಾದಿಸಲಾಗುತ್ತಿದೆ. ಹುಬ್ಬಳ್ಳಿಯ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಜಿಟಿಟಿಸಿ) ಇದರ ವಿನ್ಯಾಸ ಮಾಡಿದೆ.

ಗರಿಷ್ಠ 25 ರೂ. ವೆಚ್ಚ

ಗರಿಷ್ಠ 25 ರೂ. ವೆಚ್ಚ

ಸ್ಥಳೀಯವಾಗಿ ಲಭ್ಯವಿರುವ ವಸ್ತುಗಳನ್ನು ಬಳಸಿಕೊಂಡು, ನೈರ್ಮಲ್ಯ ಸೂತ್ರಗಳನ್ನು ಪಾಲಿಸಿ ಅತ್ಯಂತ ಸರಳವಾಗಿ ಗರಿಷ್ಠ 25 ರೂಪಾಯಿ ವೆಚ್ಚದೊಳಗೆ ಜಿಟಿಟಿಸಿ ಫೇಸ್ ಶೀಲ್ಡ್‌ ಮಾಸ್ಕ್ ತಯಾರು ಮಾಡಿದೆ. ತಲೆಯ ಆಕಾರಕ್ಕೆ ಅನುಗುಣವಾಗಿ ಹೊಂದಿಕೊಳ್ಳಬಲ್ಲ ಮತ್ತು ಪಾರದರ್ಶಕವಾದ ಶೀಲ್ಡ್‌ ಇದಾಗಿದೆ.

ಅನುಮೋದನೆ ಪಡೆಯಲಾಗಿದೆ

ಅನುಮೋದನೆ ಪಡೆಯಲಾಗಿದೆ

ಜಿಟಿಟಿಸಿ ವ್ಯವಸ್ಥಾಪಕ ನಿರ್ದೇಶಕ ಹ. ರಾಘವೇಂದ್ರ ಈ ಕುರಿತು ಮಾಹಿತಿ ನೀಡಿದರು. " ಕೋವಿಡ್-19 ವಿರುದ್ದ ಹೋರಾಟದಲ್ಲಿ ಜಿಟಿಟಿಸಿ ವತಿಯಿಂದ ಸೂಕ್ತ ಯೋಗದಾನ ನೀಡುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾಗಿ ಕೇಂದ್ರದ ಸಂಯೋಜಕರು ಮತ್ತು ತರಬೇತಿ ಅಧಿಕಾರಿಗಳು ಈ ಮುಖ ಕವಚವನ್ನು ಸಿದ್ದಪಡಿಸಿ ಯಶಸ್ವಿಯಾಗಿದ್ದಾರೆ. ಜಿಟಿಟಿಸಿಯ ಬೆಂಗಳೂರು ಕೇಂದ್ರವು ಡಿಆರ್‌ಡಿಓ ಸಂಸ್ಥೆಯು ಅಭಿವೃದ್ಧಿಪಡಿಸಿರುವ ವೆಂಟಿಲೇಟರಿನ ಪ್ರಾಯೋಗಿಕ ಮಾದರಿಯನ್ನು ಈಗಾಗಲೇ ತಯಾರಿಸಿ ಪೂರೈಕೆ ಮಾಡಿದ್ದು, ಉತ್ಪಾದನೆಗೆ ಅನುಮೋದನೆಯನ್ನು ಪಡೆದಿರುತ್ತದೆ" ಎಂದರು.

ಪ್ರತಿದಿನ 200 ಮಾಸ್ಕ್ ತಯಾರಿ

ಪ್ರತಿದಿನ 200 ಮಾಸ್ಕ್ ತಯಾರಿ

ಜಿಟಿಟಿಸಿಯು ಮೊದಲ ಹಂತದಲ್ಲಿ ಧಾರವಾಡ ಜಿಲ್ಲಾಡಳಿತಕ್ಕೆ 500 ಮುಖ ಕವಚಗಳನ್ನು ಉಚಿತವಾಗಿ ನೀಡಿದೆ. ಮುಖ ರಕ್ಷಕ ಕವಚ ಸಿದ್ದಪಡಿಸುವಲ್ಲಿ ಜಿಟಿಟಿಸಿ ಹುಬ್ಬಳ್ಳಿಯ ಸಂಯೋಜಕರಾದ ಮಾರುತಿ ಭಜಂತ್ರಿ, ಜಿಟಿಟಿಸಿಯ ಹಳೆಯ ವಿದ್ಯಾರ್ಥಿ ಪ್ರಮೋದ ಇಟಗಿ, ತರಬೇತಿ ಅಧಿಕಾರಿಗಳಾದ ಲೀಲಾಧರ ಚಳಗೇರಿ, ರಮೇಶ ಸಾಂಗಲಿ, ಪ್ರಶಾಂತ ಸುತಾರ, ಶರಣಯ್ಯ ಹಿರೇಮಠ, ಗುರುಬಸಯ್ಯ, ಇತರರು ಶ್ರಮಿಸಿದ್ದಾರೆ. ವಿನ್ಯಾಸ ಮತ್ತು ವಿವರಗಳಿಗಾಗಿ 9902101010 / 9886915904 ಸಂಖ್ಯೆಗೆ ಸಂಪರ್ಕಿಸಬಹುದು.

English summary
Hubballi Government Tool Room and Training Centre producing face shield mask for health department and police who working to control coronavirus. At present 200 face shield mask producing daily.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X