ಮೈತ್ರಿ ಸರ್ಕಾರದಲ್ಲಿ ದಲಿತರು ಸಿಎಂ ಆಗಲಿ: ಶ್ರೀರಾಮುಲು
Recommended Video
ಹುಬ್ಬಳ್ಳಿ, ಮೇ 16: ಕರ್ನಾಟಕದ ಸಿಎಂ ಯಾರಾಗಬೇಕು ಎಂದು ನಡೆಯುತ್ತಿರುವ ರಾಜಕೀಯ ಚರ್ಚೆಗೆ ಶ್ರೀರಾಮುಲು ಸಹ ಧುಮುಕಿದ್ದು, ಮೈತ್ರಿ ಸರ್ಕಾರದಲ್ಲಿ ದಲಿತರು ಸಿಎಂ ಆಗಲಿ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ಸರ್ಕಾರದಲ್ಲಿ ಮಲ್ಲಿಕಾರ್ಜುನ ಖರ್ಗೆ ಅಥವಾ ಪರಮೇಶ್ವರ್ ಅವರು ಸಿಎಂ ಆಗಲಿ, ದಲಿತರಿಗೆ ಅವಕಾಶ ಕೊಟ್ಟಂತೆ ಆಗುತ್ತದೆ ಎಂದು ಹೇಳಿದ್ದಾರೆ.
ಹಲವು ಸಮುದಾಯದವರಿಗೆ ಅವಕಾಶ ಕೊಟ್ಟು ಆಗಿದೆ, ಈಗ ಉಳಿದಿರುವುದು ದಲಿತರು ಹಾಗೂ ವಾಲ್ಮಿಕಿ ಜನಾಂಗದವರು ಅವರಿಗೂ ಅವಕಾಶ ಕೊಡಲಿ ಎಂದು ರಾಮುಲು ಹೇಳಿದ್ದಾರೆ.

ಪರಮೇಶ್ವರ್ ಅವರು ತಾವೇ ಸಿಎಂ ಆಗಬೇಕು ಎಂದು ಕಣ್ಣೀರು ಹಾಕುತ್ತಿದ್ದರು, ಅವರನ್ನೇ ಸಿಎಂ ಮಾಡಲಿ ಅಭ್ಯಂತರವಿಲ್ಲ ಎಂದು ಅವರು ಹೇಳಿದರು.
ಬಿಜೆಪಿಯನ್ನು ಯಾರು ಸಿಎಂ ಆಗಬೇಕು ಯಾರೂ ಸಿಎಂ ಆಗಬಾರದು ಎಂದು ಪಕ್ಷದ ವರಿಷ್ಠರು ನಿರ್ಧಾರ ಮಾಡುತ್ತಾರೆ ಎಂದು ಅವರು ಹೇಳಿದರು.
ಸಿದ್ದರಾಮಯ್ಯ ಅವರ ಬೆಂಬಲಿಗರು ಸಿದ್ದರಾಮಯ್ಯ ಸಿಎಂ ಆಗಬೇಕು ಎನ್ನುತ್ತಿದ್ದರೆ, ಕುಮಾರಸ್ವಾಮಿ ಅವರು ಖರ್ಗೆ ಅವರಿಗೆ ಅರ್ಹತೆ ಇತ್ತು, ಅವರು ಎಂದೋ ಸಿಎಂ ಆಗಬೇಕಿತ್ತು ಎಂದರು, ನಂತರ ಸಿದ್ದರಾಮಯ್ಯ ಅವರು ರೇವಣ್ಣ ಅವರಿಗೂ ಅರ್ಹತೆ ಇದೆ ಎಂದಿದ್ದರು, ಇದು ರಾಜ್ಯ ರಾಜಕಾರಣದಲ್ಲಿ ಹೊಸ ಚರ್ಚೆ ಹುಟ್ಟುಹಾಕಿದೆ.












Click it and Unblock the Notifications