ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಾಂತಿಭಂಗದ ಹೇಳಿಕೆ : ಪ್ರಹ್ಲಾದ್ ಜೋಶಿ ವಿರುದ್ಧ ಎಫ್‌ಐಆರ್

By ಧಾರವಾಡ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, ಏಪ್ರಿಲ್ 01 : ಧಾರವಾಡದ ಬಿಜೆಪಿ ಸಂಸದ ಪ್ರಹ್ಲಾದ್ ಜೋಶಿ ವಿರುದ್ಧ ದೇಶ ದ್ರೋಹದ ಪ್ರಕರಣ ದಾಖಲಾಗಿದೆ. ಹುಬ್ಬಳ್ಳಿಯ ಕಸಬಾ ಪೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹುಬ್ಬಳ್ಳಿಯ ಗೌಸಿಯಾ ಟೌನ್‌ನಲ್ಲಿ ಮಾರ್ಚ್ 25 ರಂದು ಗುರುಸಿದಪ್ಪಾ ಅಂಬಿಗೇರ್ ಕೊಲೆ ನಡೆದಿತ್ತು. ಸಂಸದ ಪ್ರಹ್ಲಾದ್ ಜೋಶಿ 26ರಂದು ಗೌಸಿಯಾ ಟೌನ್‌ನಲ್ಲಿರುವ ಇರುವ ಗುರುಸಿದಪ್ಪಾ ಅಂಬಿಗೇರ ಅವರ ಮನೆಗೆ ಭೇಟಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದರು.

'ಬಿಜೆಪಿ ಅಧಿಕಾರಕ್ಕೆ ಬಂದ್ರೆ ಮುಲಾಜಿಲ್ಲದೆ ಟಿಪ್ಪು ಜಯಂತಿ ರದ್ದು''ಬಿಜೆಪಿ ಅಧಿಕಾರಕ್ಕೆ ಬಂದ್ರೆ ಮುಲಾಜಿಲ್ಲದೆ ಟಿಪ್ಪು ಜಯಂತಿ ರದ್ದು'

ಬಳಿಕ ಮಾಧ್ಯಮಗಳ ಜೊತೆ ಮಾತನಾಡುವ ಸಂದರ್ಭದಲ್ಲಿ, 'ಕಸಬಾ ಪೇಟ್ ಪಾಕಿಸ್ತಾನದ ಹಾಗೆ ಇದೆ. ಇಲ್ಲಿನ ಮದರಸಾಗಳಲ್ಲಿ ಅಕ್ರಮ ಶಸ್ತ್ರಾಸ್ತ್ರ ಸಂಗ್ರಹ ಇದೆ' ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.

Fir against Dharwad BJP MP Pralhad Joshi

ಶಾಂತಿಭಂಗ ಹಾಗೂ ಕೋಮು ಸೌರ್ಹಾದತೆಗೆ ಧಕ್ಕೆ ತಂದ ಆರೋಪದಲ್ಲಿ ಜೋಶಿ ವಿರುದ್ಧ, ಕಸಬಾ ಪೇಟ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 1860 ಅಂಡರ್ ಸೆ,153, 298 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು, ಪೊಲೀಸರು ವಿಚಾರಣೆ ನಡೆಸುತಿದ್ದಾರೆ.

'ಅಯ್ಯರ್ ಹೇಳಿಕೆ ಕಾಂಗ್ರೆಸ್ ಪಕ್ಷದ ದಿವಾಳಿತ ತೋರಿಸುತ್ತೆ''ಅಯ್ಯರ್ ಹೇಳಿಕೆ ಕಾಂಗ್ರೆಸ್ ಪಕ್ಷದ ದಿವಾಳಿತ ತೋರಿಸುತ್ತೆ'

ಪ್ರಹ್ಲಾದ್ ಜೋಶಿ ಅವರ ಹೇಳಿಕೆಗೆ ಮುಸ್ಲಿಂ ಮುಖಂಡರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಜೋಶಿ ವಿರುದ್ಧ ದೂರು ದಾಖಲಿಸುವಂತೆ ಒತ್ತಾಯ ಮಾಡಿದ್ದರು. ಸ್ಥಳೀಯರ ದೂರಿನ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

English summary
A case was registered against Dharwad BJP MP Prahlad Joshi for making a communal remark in a speech. Police registered an FIR under Section 153 (of the Indian Penal Code).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X