ಮಂತ್ರಿ ಮಾಡ್ತೀನಿ ಅನ್ನೋದೂ ಭ್ರಷ್ಟಾಚಾರನೇ ಅಲ್ವ?; ಬಿಜೆಪಿಗೆ ಡಿಕೆಶಿ ಪ್ರಶ್ನೆ
ಹುಬ್ಬಳ್ಳಿ, ನವೆಂಬರ್ 21: ಜೈಲಿನಿಂದ ಬಿಡುಗಡೆಗೊಂಡ ನಂತರ ಮೊದಲ ಬಾರಿಗೆ ನಗರಕ್ಕೆ ಆಗಮಿಸುತ್ತಿರುವ ಕಾಂಗ್ರೆಸ್ ಮುಖಂಡ, ಟ್ರಬಲ್ ಶೂಟರ್ ಎಂದೇ ಖ್ಯಾತರಾದ ಡಿ.ಕೆ.ಶಿವಕುಮಾರ್ ಅವರನ್ನು ಇಂದು ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ಬೃಹತ್ ಸೇಬು ಹಣ್ಣಿನ ಮಾಲೆ ಹಾಕುವ ಮೂಲಕ ಅದ್ಧೂರಿಯಾಗಿ ಸ್ವಾಗತಿಸಿದರು.
Recommended Video
ನಗರದ ವಿಮಾನ ನಿಲ್ದಾಣದಿಂದ ಬೈಕ್ ರ್ಯಾಲಿ ನಡೆಸಿದ ಕಾರ್ಯಕರ್ತರು, ಮಂಜುನಾಥ ನಗರದ ಹತ್ತಿರ ಸುಮಾರು ಮೂರು ಕ್ವಿಂಟಲ್ ಗೂ ಅಧಿಕ ಹಣ್ಣುಗಳಿಂದ ಮಾಡಿಸಿದ ಮಾಲೆಯನ್ನು ಕ್ರೇನ್ ಮೂಲಕ ಡಿ.ಕೆ.ಶಿವಕುಮಾರ್ ಅವರಿಗೆ ಹಾಕಿ ಸ್ವಾಗತ ಕೋರಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, "ನಮ್ಮ ಸರ್ಕಾರ ಹೋದ ಮೇಲೆ ಮೊದಲ ಬಾರಿಗೆ ಇಲ್ಲಿಗೆ ಬಂದಿದ್ದೇನೆ. ನಮ್ಮ ಸರ್ಕಾರ ಇರುತ್ತದೆ ಅಂದುಕೊಂಡಿದ್ದೆ. ಆದರೆ ಒಳ್ಳೆಯ ಆಪರೇಷನ್ ಮಾಡಿ ಸರ್ಕಾರ ಮಾಡಿದ್ದಾರೆ" ಎಂದು ಬಿಜೆಪಿ ವಿರುದ್ಧ ಮಾತನಾಡಿದರು.

"ಪ್ರಜಾಪ್ರಭುತ್ವದಲ್ಲಿ ಏನೇನ್ ಆಗಬಾರದೋ ಅವೆಲ್ಲ ಆಗಿದೆ. ಅದರ ಬಗ್ಗೆ ನಂತರ ಮಾತನಾಡುತ್ತೇನೆ. ಈ ಭಾಗದಲ್ಲಿ ಜಗದೀಶ್ ಶೆಟ್ಟರ್, ಬಸವರಾಜ್ ಬೊಮ್ಮಾಯಿ, ಪ್ರಹ್ಲಾದ್ ಜೋಶಿ, ಸುರೇಶ್ ಅಂಗಡಿ ಅಧಿಕಾರದಲ್ಲಿದ್ದಾರೆ. ಆದರೆ ಮಹದಾಯಿ ಬಗ್ಗೆ ಹೋರಾಟ ಮಾಡುತ್ತಿಲ್ಲ. ಹೆದರಿಕೊಂಡು ಬಾಯಿ ಬಿಡುತ್ತಿಲ್ಲ. ಅವರೆಲ್ಲ ಸಚಿವ ಸ್ಥಾನದಲ್ಲಿ ಇರಲು ಲಾಯಕ್ಕಿಲ್ಲ. ನ್ಯಾಯಾಲಯದ ತೀರ್ಪು ಇದ್ದರೂ ಒಂದು ಗೆಜೆಟ್ ನೋಟಿಫಿಕೇಷನ್ ಮಾಡಬೇಕಿತ್ತು. ಬಿಜೆಪಿಯವರು ಎಲ್ಲರಿಗೂ ಡಿಸಿಎಂ ಮಾಡ್ತಿನಿ ಮಂತ್ರಿ ಮಾಡ್ತಿನಿ ಅಂತಾರೆ. ಇದೊಂದು ಸಣ್ಣ ಕೆಲಸ ಮಾಡೋಕ್ಕಾಗಲ್ವಾ?" ಎಂದು ಪ್ರಶ್ನಿಸಿದರು.

"ಮಂತ್ರಿ ಮಾಡ್ತೀನಿ ಎಂದು ಆಸೆ ತೋರಿಸುವುದೂ ಭ್ರಷ್ಟಾಚಾರ ಅಲ್ವಾ?" ಎಂದು ಸಿಎಂ ವಿರುದ್ಧ ವಾಗ್ದಾಳಿ ನಡೆಸಿದರು.












Click it and Unblock the Notifications