Hubballi: ಮತದಾನ ಮಾಡಿ, ಶಾಹಿ ಗುರುತು ತೋರಿಸಿ ರಿಯಾಯಿತಿಗೆ 'ತಿಂಡಿ' ಸವಿಯಿರಿ

ಹುಬ್ಬಳ್ಳಿ, ಮೇ 06: ನಮ್ಮನ್ನ ಆಳುವ ಜನಪ್ರತಿನಿಧಿಯನ್ನು ಆಯ್ಕೆ ಮಾಡುವ ಸುಸಮಯ ಇದು. ಒಳ್ಳೆಯ ಜನಪ್ರತಿನಿಧಿ ಆಯ್ಕೆಯಾಗಬೇಕಾದರೆ ಮತದಾರರು ಕಡ್ಡಾಯವಾಗಿ ಮತದಾನ ಮಾಡಬೇಕು. ‌ಆದರೆ‌ ಇತ್ತೀಚಿನ ದಿನಗಳಲ್ಲಿ ಜನರು ಮತ ಚಲಾಯಿಸಲು ಹಿಂದೇಟು ಹಾಕುತ್ತಿದ್ದಾರೆ. ಇಂತಹ ಮತದಾರರನ್ನು ಸೆಳೆಯಲು ಹುಬ್ಬಳ್ಳಿಯಲ್ಲಿ ವ್ಯಾಪಾರಿಯೊಬ್ಬರು ಹೊಸ ಉಪಾಯ ಮಾಡಿದ್ದಾರೆ.

ಚುನಾವಣಾ ಆಯೋಗ, ಸಂಘ ಸಂಸ್ಥೆಗಳು ಸಾಕಷ್ಟು ಜಾಗೃತಿ ಮೂಡಿಸಿದರು ಸಹ ಮತದಾನ ಮಾಡಲು ಮತಗಟ್ಟಿಗೆ ಬರಲು ನಿರ್ಲಕ್ಷ್ಯ ಮಾಡುವವರೇ ಹೆಚ್ಚಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಇಲ್ಲೊಬ್ಬ ಅಂದೇ ದುಡಿದು ಅಂದೇ ತಿನ್ನುವ ಬದುಕು ಸಾಗಿಸುವ ಬೀದಿ ಬದಿ ವ್ಯಾಪಾರಯೊಬ್ಬರು ರಿಯಾಯಿತಿ ದರದಲ್ಲಿ ಉಪಾಹಾರ ನೀಡಲು ನಿರ್ಧರಿಸಿದ್ದಾರೆ.

Discount Price Idli Breakfast in Hubballi for Voters After Casting Vote

ಮೇ7 ರಂದು ಇಡ್ಲಿಗೆ ರಿಯಾಯಿತಿ ಎಷ್ಟು?

ಹುಬ್ಬಳ್ಳಿಯ ದುರ್ಗದಬೈಲ್ ಸರ್ಕಲ್‌ನ ಇಡ್ಲಿ ಮಾರಾಟಗಾರ ಭಾಸ್ಕರ್ ಡೋಂಗ್ರೆ ಅವರು ಮೇ 7 ರಂದು ಮತ ಚಲಾಯಿಸುವವರಿಗೆ ಕೇವಲ 5 ರೂಪಾಯಿಗೆ ಇಡ್ಲಿ ನೀಡುವುದಾಗಿ ಘೋಷಿಸಿದ್ದಾರೆ.

ರಿಯಾಯಿತಿ ದರದಲ್ಲಿ ಉಪಹಾರ ಸೇವಿಸಬೇಕಿದ್ದರೇ ಗ್ರಾಹಕರು ತಮ್ಮ ಶಾಯಿ ಹಚ್ಚಿದ ಬೆರಳನ್ನು ತೋರಿಸಬೇಕು. ರಿಯಾಯಿತಿ ದರದಲ್ಲಿ ಇಡ್ಲಿ ನೀಡುವ ಮೂಲಕ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಜಾಪ್ರಭುತ್ವ ಹಬ್ಬದಲ್ಲಿ ಪಾಲ್ಗೊಳ್ಳುವುದು ಭಾಸ್ಕರ್ ಡೋಂಗ್ರೆ ಅವರ ಉದ್ದೇಶವಾಗಿದೆ.

ಅರ್ಧ ಬೆಲೆಗೆ ಇಡ್ಲಿ ಮಾರಾಟ: ವ್ಯಾಪಾರಿ

ಈ ಕುರಿತು ಪ್ರತಿಕ್ರಿಯಿಸಿರುವ ಹೊಟೇಲ್​ ಮಾಲಿಕ ಭಾಸ್ಕರ್ ಡೋಂಗ್ರೆ ಮಾತನಾಡಿ, ನಗರ ಪ್ರದೇಶಗಳಲ್ಲಿನ ಕಳಪೆ ಮತದಾವನ್ನು ನೋಡಿದಾಗ, ನಾನು ಒಂದು ಇಡ್ಲಿಯನ್ನು 5 ರೂ.ಗೆ ಮಾರಾಟ ಮಾಡಲು ಯೋಜಿಸಿದೆ. ಇದು ಸಾಮಾನ್ಯ ಬೆಲೆಗಿಂತ ಅರ್ಧದಷ್ಟಾಗಿದೆ ಎಂದರು.

Discount Price Idli Breakfast in Hubballi for Voters After Casting Vote

500 ಸಂಖ್ಯೆ ಮೀರಿದರೆ ಇಡ್ಲಿ ನೀಡಲು ಸಿದ್ಧ

ಪ್ರಸ್ತುತ, ನಾನು ಸುಮಾರು 500 ಮತದಾರರಿಗೆ ರಿಯಾಯಿತಿ ದರದಲ್ಲಿ ಇಡ್ಲಿ ನೀಡಲು ನಿರ್ಧರಿಸಿದ್ದೇನೆ. ಈ ಸಂಖ್ಯೆ ಮೀರಿದರೂ ನಾನು ಸಿದ್ಧನಿದ್ದೇನೆ. ನಾನು ಇದನ್ನು ಮೊದಲ ಬಾರಿಗೆ ಮಾಡುತ್ತಿರುವುದರಿಂದ, ಮತ ಚಲಾಯಿಸಿದ ನಂತರ ಎಷ್ಟು ಜನರು ನನ್ನ ಹೊಟೇಲ್​ ಭೇಟಿ ನೀಡುತ್ತಾರೆ ಎಂಬುದು ನನಗೆ ತಿಳಿದಿಲ್ಲ ಎಂದು ಹೇಳಿದರು.

ಪಾರ್ಸೆಲ್ ಸೇವೆ ಇಲ್ಲ: ಸಹಕರಿಸಿ

ನಾನು​ ಬೆಳಗ್ಗೆ 7 ಗಂಟೆಗೆ ಹೋಟೆಲ್ ತೆರೆಯುತ್ತೇನೆ. ನಾನು ಇಡ್ಲಿಗಳನ್ನು ಬೆಳಗ್ಗೆ 9 ಗಂಟೆಯವರೆಗೆ ಮಾರಾಟ ಮಾಡಲು ಯೋಜಿಸಿದೆ. ಅಗತ್ಯವಿದ್ದರೆ, ನಾನು ಸಮಯವನ್ನು ವಿಸ್ತರಿಸುತ್ತೇನೆ. ರಿಯಾತಿ ದರದಲ್ಲಿ ಇಡ್ಲಿ ಪಡೆಯಲು ಮತದಾರರು ತಮ್ಮ ಶಾಯಿಯ ಬೆರಳನ್ನು ತೋರಿಸಬೇಕು. ಯಾವುದೇ ಪಾರ್ಸೆಲ್ ಸೇವೆಯನ್ನು ಒದಗಿಸುವುದಿಲ್ಲ ಎಂದು ತಿಳಿಸಿದರು.

ವ್ಯಾಪಾರಿ ಗುಣಕ್ಕೆ ಸ್ಥಳೀಯರ ಪ್ರಶಂಸೆ

ಇದೊಂದು ಉತ್ತಮ ಕೆಲಸ ಆಗಿದ್ದು ಜನರು ಮತದಾನಕ್ಕಾಗಿ ಮನೆಯಿ ಹೊರಬಂದು ತಮ್ಮ ಹಕ್ಕು ಚಲಾಯಿಸಬೇಕು ಎಂದು ಮೊದಲೇ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ‌ಏರಿದೆ ಇಂತಹ ಸಂದರ್ಭದಲ್ಲಿ ಕಡಿಮೆ ದರದಲ್ಲಿ ಉಪಹಾರ ಕೊಡುವ ಮೂಲಕ ಮತದಾನ ಹೆಚ್ಚಳ‌ ಆಗುವಂತೆ ನೋಡಿಕೊಳ್ಳುವುದು ಸ್ವಾಗತಾರ್ಹ ಎನ್ನುತ್ತಾರೆ ಸ್ಥಳೀಯರು ವ್ಯಾಪಾರಿಯ ಸೇವಾ ಗುಣ ಪ್ರಶಂಸಿಸಿದರು.

ಇನ್ನು ಲೋಕಸಭೆ ಚುನಾವಣೆಗೆ (ರಾಜ್ಯದ ಮೊದಲ ಹಂತದ ಮತದಾನದಿನ ಬೆಂಗಳೂರಿನ (ಹೊಟೇಲ್​​ಗಳು ಮತದಾನ ಮಾಡಿದವರಿಗೆ ಉಚಿತ ಆಹಾರ ನೀಡಿದ್ದವು. ಇದೀಗ ಉತ್ತರ ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಿಗೆ ಮೇ 7 ರಂದು ಮತದಾನ ನಡೆಯಲಿದೆ.

ಹುಬ್ಬಳ್ಳಿಯಲ್ಲಿ ಮತದಾನದ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಹುಬ್ಬಳ್ಳಿಯ ಬೀದಿ ಬದಿ ಹೊಟೇಲ್​ ವ್ಯಾಪಾರಿಯು ಈ ರಿಯಾಯಿತಿ ದರದಲ್ಲಿ ತಿಂಡಿ ನೀಡುತ್ತಿದ್ದಾರೆ. ಇಂತಹ ಕೊಡುಗೆ, ರಿಯಾಯಿಗಳಿಂದಾದರೂ ಮತದಾನ ಹೆಚ್ಚಾಗಬೇಕು ಎಂಬುದು ಚುನಾವಣಾ ಆಯೋಗದ ಆಶಯವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+