ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುಬ್ಬಳ್ಳಿ-ಅಹಮದಾಬಾದ್ ವಿಮಾನ ಸೇವೆ ಆರಂಭಿಸಲು ಬೇಡಿಕೆ

|
Google Oneindia Kannada News

ಹುಬ್ಬಳ್ಳಿ, ಜೂನ್ 08; ಹುಬ್ಬಳ್ಳಿ ಮತ್ತು ಅಹಮದಾಬಾದ್ ನಗರಗಳ ನಡುವಿನ ವಿಮಾನ ಸೇವೆಯನ್ನು ಪುನಃ ಆರಂಭಿಸಬೇಕು ಎಂಬ ಬೇಡಿಕೆ ಕೇಳಿ ಬಂದಿದೆ. ಈ ಮಾರ್ಗದಲ್ಲಿ ಪ್ರತಿದಿನ ವಿಮಾನ ಸಂಚಾರ ನಡೆಸುತ್ತಿತ್ತು, ಬಳಿಕ ಸ್ಥಗಿತವಾಗಿತ್ತು.

ಹುಬ್ಬಳ್ಳಿ ನಗರದ ವರ್ತಕರು ಮತ್ತು ಇತರರು ಹುಬ್ಬಳ್ಳಿ-ಅಹಮದಾಬಾದ್ ನಡುವಿನ ವಿಮಾನ ಸೇವೆ ಆರಂಭಿಸಬೇಕು ಎಂದು ಒತ್ತಾಯಿಸಿದ್ದಾರೆ. ಆದ್ಯತೆಯಲ್ಲಿ ಇದನ್ನು ಜಾರಿಗೆ ತರಬೇಕು ಎಂದು ಕೇಂದ್ರ ಸಚಿವ, ಧಾರವಾಡದ ಬಿಜೆಪಿ ಸಂಸದ ಪ್ರಹ್ಲಾದ್ ಜೋಶಿಗೆ ಮನವಿ ಮಾಡಿದ್ದಾರೆ.

Breaking; ದಾವಣಗೆರೆ ವಿಮಾನ ನಿಲ್ದಾಣ, 3 ವಾರದಲ್ಲಿ ವರದಿBreaking; ದಾವಣಗೆರೆ ವಿಮಾನ ನಿಲ್ದಾಣ, 3 ವಾರದಲ್ಲಿ ವರದಿ

ಇಂಡಿಗೋ ವಿಮಾನಯಾನ ಸಂಸ್ಥೆ ಕೋವಿಡ್ ಪರಿಸ್ಥಿತಿಗೂ ಮೊದಲಿನಿಂದಲೂ ಹುಬ್ಬಳ್ಳಿ-ಅಹಮದಾಬಾದ್ ನಡುವೆ ಪ್ರತಿದಿನದ ವಿಮಾನ ಸಂಚಾರ ನಡೆಸುತ್ತಿತ್ತು. ಬಳಿಕ ವಿಮಾನ ಸೇವೆ ರದ್ದುಗೊಂಡಿತ್ತು.

 ಟಾಟಾ ಗ್ರೂಪ್‌ ನಿಂದ ಭಾರತದ ಅತಿದೊಡ್ಡ ವಿಮಾನ ನಿಲ್ದಾಣ ನಿರ್ಮಾಣ ಟಾಟಾ ಗ್ರೂಪ್‌ ನಿಂದ ಭಾರತದ ಅತಿದೊಡ್ಡ ವಿಮಾನ ನಿಲ್ದಾಣ ನಿರ್ಮಾಣ

Demand To Resume Hubballi Ahmedabad Flight Service

ಕೋವಿಡ್ ಪರಿಸ್ಥಿತಿ ಬಳಿಕ ಮತ್ತೆ ವಿಮಾನ ಸೇವೆ ಆರಂಭವಾಗಿತ್ತು. ಆದರೆ ಅಹಮದಾಬಾದ್ ವಿಮಾನ ನಿಲ್ದಾಣದ ರನ್‌ ವೇ ಕಾರ್ಯದ ಹಿನ್ನಲೆಯಲ್ಲಿ ಮತ್ತೆ ವಿಮಾನ ಸಂಚಾರ ರದ್ದಾಗಿತ್ತು. ಈಗ ಪುನಃ ವಿಮಾನ ಸೇವೆ ಆರಂಭಿಸುವಂತೆ ಒತ್ತಾಯ ಕೇಳಿ ಬಂದಿದೆ.

ವಿಮಾನ ಇಂಧನ ದರ ಇಳಿಕೆ ಮಾಡಿದ ಇಂಡಿಯನ್ ಆಯಿಲ್ವಿಮಾನ ಇಂಧನ ದರ ಇಳಿಕೆ ಮಾಡಿದ ಇಂಡಿಯನ್ ಆಯಿಲ್

ವಾಣಿಜ್ಯೋದ್ಯಮಕ್ಕೆ ಅನುಕೂಲ; ಹುಬ್ಬಳ್ಳಿಯಿಂದ ರಾಜಸ್ಥಾನ ಮತ್ತು ಅಹಮದಾಬಾದ್‌ ವಿಮಾನ ಸೇವೆಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಉಭಯ ರಾಜ್ಯಗಳ ಹಲವಾರು ಜನರು ಹುಬ್ಬಳ್ಳಿಯಲ್ಲಿ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ಬಟ್ಟೆ, ಮಾರ್ಬಲ್ ಸೇರಿದಂತೆ ಉಭಯ ರಾಜ್ಯಗಳ ನಗರಗಳ ನಡುವೆ ವಾಣಿಜ್ಯ ವಹಿವಾಟು ಉತ್ತಮವಾಗಿದೆ.

ಇಂಡಿಗೋ ವಿಮಾನಯಾನ ಸಂಸ್ಥೆ ಹುಬ್ಬಳ್ಳಿ-ಅಹಮದಾಬಾದ್ ನಡುವೆ ಪ್ರತಿದಿನ ಏರ್‌ಬಸ್ ಸೇವೆ ನೀಡುತ್ತಿತ್ತು. ಈ ವಿಮಾನ ಪೂರ್ಣ ಪ್ರಮಾಣದಲ್ಲಿ ಭರ್ತಿ ಆಗಿರುತ್ತಿತ್ತು. ಅಹಮದಾಬಾದ್ ವಿಮಾನ ನಿಲ್ದಾಣದ ರನ್ ವೇ ಕಾಮಗಾರಿ ಕೆಲವು ದಿನಗಳ ಹಿಂದೆ ಪೂರ್ಣಗೊಂಡಿದೆ. ವಿಮಾನ ನಿಲ್ದಾಣದಿಂದ ಎಲ್ಲಾ ವಿಮಾನಗಳ ಹಾರಾಟ ಮತ್ತೆ ಆರಂಭವಾಗಿದೆ. ಆದ್ದರಿಂದ ಹುಬ್ಬಳ್ಳಿಯಿಂದಲೂ ಸೇವೆ ಪುನಃ ಆರಂಭಿಸಬೇಕು ಎಂಬುದು ಬೇಡಿಕೆ.

Demand To Resume Hubballi Ahmedabad Flight Service

ಹುಬ್ಬಳ್ಳಿ, ಧಾರವಾಡ ಮತ್ತು ಸುತ್ತಮುತ್ತಲಿನ ಜಿಲ್ಲೆಗಳ ಜನರು, ಉದ್ಯಮಿಗಳು ಅಹಮದಾಬಾದ್‌ಗೆ ಮತ್ತೆ ವಿಮಾನ ಸಂಚಾರ ಆರಂಭಿಸುವಂತೆ ಒತ್ತಾಯಿಸುತ್ತಿದ್ದಾರೆ. ವಿಮಾನ ಸಂಚಾರ ಮತ್ತೆ ಆರಂಭಿಸಬೇಕು ಎಂದು ಇಂಡಿಗೋ ಸಂಸ್ಥೆಯನ್ನು ಸಾಮಾಜಿಕ ಜಾಲತಾಣಗಳ ಮೂಲಕವೂ ಒತ್ತಾಯಿಸಲಾಗುತ್ತಿದೆ.

ಈ ವಿಮಾನ ಸೇವೆ ಆರಂಭಿಸುವ ಕುರಿತು ಇಂಡಿಗೋ ಮತ್ತು ಕೇಂದ್ರ ವಿಮಾನಯಾನ ಸಚಿವಾಲಯದ ಜೊತೆ ಚರ್ಚೆ ನಡೆಸಬೇಕು ಎಂದು ಧಾರವಾಡ ಸಂಸದ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯನ್ನು ಸಹ ಜನರು ಒತ್ತಾಯಿಸುತ್ತಿದ್ದಾರೆ.

ಇಂಡಿಗೋ ತಯಾರಿ; ಏರೋಡ್ರೋಮ್ ಸಲಹಾ ಸಮತಿ ಸದಸ್ಯರು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯನ್ನು ಭೇಟಿ ಮಾಡಿದ್ದರು. ಹುಬ್ಬಳ್ಳಿ-ಅಹಮದಾಬಾದ್, ಹುಬ್ಬಳ್ಳಿ-ನವದೆಹಲಿ ನಡುವೆ ವಿಮಾನ ಸೇವೆಯನ್ನು ಆರಂಭಿಸುವಂತೆ ಮನವಿ ಮಾಡಿದ್ದಾರೆ. ಈ ಪ್ರಸ್ತಾವನೆಗೆ ಕೇಂದ್ರ ವಿಮಾನಯಾನ ಸಚಿವಾಲಯ ಒಪ್ಪಿಗೆ ನೀಡಲಿದೆಯೇ? ಎಂದು ಕಾದು ನೋಡಬೇಕಿದೆ.

ಇಂಡಿಗೋ ವಿಮಾನಯಾನ ಸಂಸ್ಥೆಯ ಅಧಿಕಾರಿಗಳ ಪ್ರಕಾರ ಹುಬ್ಬಳ್ಳಿ-ಅಹಮದಾಬಾದ್ ವಿಮಾನ ಸೇವೆಗೆ ಜನರಿಂದ ಬೇಡಿಕೆ ಬರುತ್ತಿದೆ. ವಿಮಾನ ಸೇವೆಯನ್ನು ಮತ್ತೆ ಆರಂಭಿಸಲಾಗುತ್ತದೆಯೇ? ಎಂದು ಜನರು ಮಾಹಿತಿ ಪಡೆಯುತ್ತಿದ್ದಾರೆ. ಒಪ್ಪಿಗೆ ಸಿಕ್ಕರೆ ವಿಮಾನ ಸೇವೆ ಆರಂಭಿಸಲು ಸಂಸ್ಥೆ ಸಿದ್ಧವಾಗಿದೆ.

ವಿವಿಧ ಇಲಾಖೆಗಳಿಂದ ಒಪ್ಪಿಗೆ ಪಡೆಯಲು ಕಾಯಲಾಗುತ್ತಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಜೂನ್ ಅಂತ್ಯ ಅಥವ ಜುಲೈ ಮೊದಲ ವಾರದಲ್ಲಿ ಹುಬ್ಬಳ್ಳಿ-ಅಹಮದಾಬಾದ್ ನಡುವೆ ವಿಮಾನ ಸೇವೆ ಮತ್ತೆ ಆರಂಭವಾಗುವ ನಿರೀಕ್ಷೆಇದೆ.

ಹುಬ್ಬಳ್ಳಿ ವಿಮಾನ ನಿಲ್ದಾಣ ಆಯ್ಕೆ; ಕೇಂದ್ರ ಸರ್ಕಾರ ಮೂಲ ಸೌಕರ್ಯ ಕ್ಷೇತ್ರಕ್ಕೆ ಆರ್ಥಿಕ ಸಂಪನ್ಮೂಲ ಹೊಂದಿಸಲು ರಾಷ್ಟ್ರೀಯ ನಗದೀಕರಣ (ಎನ್‌ಎಂಪಿ) ಯೋಜನೆ ರೂಪಿಸಿದೆ. ಈ ಯೋಜನೆಯಡಿ ಹುಬ್ಬಳ್ಳಿ ವಿಮಾನ ನಿಲ್ದಾಣವನ್ನು ಖಾಸಗಿಗೆ ವಹಿಸಲು ಈಗಾಗಲೇ ತೀರ್ಮಾನ ಮಾಡಲಾಗಿದೆ.

ದೇಶದ 25 ವಿಮಾನ ನಿಲ್ದಾಣಗಳನ್ನು ಎನ್‌ಎಂಪಿ ಯೋಜನೆಗೆ ಆಯ್ಕೆ ಮಾಡಲಾಗಿದೆ. ಇವುಗಳಲ್ಲಿ ಕರ್ನಾಟಕದಿಂದ ಆಯ್ಕೆಯಾದ ವಿಮಾನ ನಿಲ್ದಾಣ ಹುಬ್ಬಳ್ಳಿಯಾಗಿದೆ. 2023-24ನೇ ಸಾಲಿನಲ್ಲಿ ನಿಲ್ದಾಣ ಖಾಸಗೀಕರಣಗೊಳ್ಳಲಿದೆ.

25 ವಿಮಾನ ನಿಲ್ದಾಣಗಳನ್ನು ನಾಲ್ಕು ಹಂತಗಳಲ್ಲಿ ಖಾಸಗೀಕರಣ ಮಾಡಲಾಗುತ್ತಿದೆ. 2023-24ನೇ ಸಾಲಿನಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣವನ್ನು 130 ಕೋಟಿ ರೂ.ಗಳಿಗೆ ಖಾಸಗಿಯವರಿಗೆ ವಹಿಸಲಾಗುತ್ತದೆ. ಕರ್ನಾಟಕದ ವಿಮಾನ ನಿಲ್ದಾಣಗಳ ಪೈಕಿ ಹುಬ್ಬಳ್ಳಿಯದ್ದು 3ನೇ ಅತಿದೊಡ್ಡ ವಿಮಾನ ನಿಲ್ದಾಣವಾಗಿದೆ.

150 ಕೋಟಿ ರೂ.ಗಳ ವೆಚ್ಚದಲ್ಲಿ ವಿಮಾನ ನಿಲ್ದಾಣ ಅಭಿವೃದ್ಧಿಗೊಳಿಸಿ ಉಡಾನ್ ಯೋಜನೆಗೆ ಸೇರಿಸಲಾಗಿದೆ. ಬಳಿಕ ದೇಶದ ವಿವಿಧ ನಗರಗಳಿಗೆ ಹುಬ್ಬಳ್ಳಿ ವಿಮಾನ ಸಂಪರ್ಕ ಕಲ್ಪಿಸುತ್ತಿದೆ. ಕರ್ನಾಟಕದಲ್ಲಿ ಅತಿ ಹೆಚ್ಚು ಪ್ರಯಾಣಿಕರ ದಟ್ಟಣೆ ಹೊಂದಿರುವ ವಿಮಾನ ನಿಲ್ದಾಣಗಳಲ್ಲಿ ಹುಬ್ಬಳ್ಳಿ ಸಹ ಒಂದು.

ಹುಬ್ಬಳ್ಳಿ ವಿಮಾನ ನಿಲ್ದಾಣ ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗುವ ಹೆಜ್ಜೆಯನ್ನೂ ಇಟ್ಟಿದೆ. ಸೌರಶಕ್ತಿ ಬಳಕೆ ಮಾಡಿಕೊಂಡು 8 ಮೆಗಾವಾಟ್ ಸಾಮರ್ಥ್ಯದ ವಿದ್ಯುತ್ ಉತ್ಪಾದನೆ ಮಾಡಲು ಯೋಜನೆ ರೂಪಿಸಲಾಗಿದೆ. ಈ ಮೂಲಕ ವಿಮಾನ ನಿಲ್ದಾಣ ರಾಜ್ಯದ ಇತರ ನಿಲ್ದಾಣಗಳಿಗೆ ಮಾದರಿಯಾಗಲಿದೆ.

English summary
Hubballi and Dharwad people demand to resume Hubballi- Ahmedabad flight service. Flight cancelled due to runway work at Ahmedabad airport.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X