• search
  • Live TV
ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಾಜ್ಯದಲ್ಲಿ 25 ಸಾವಿರ ಪೊಲೀಸರ ಹುದ್ದೆ ಖಾಲಿ ಇವೆ: ಡಿಸಿಎಂ

|

ಹುಬ್ಬಳ್ಳಿ,ಅಕ್ಟೋಬರ್ 1: ರಾಜ್ಯದಲ್ಲಿ 25 ಸಾವಿರ ಪೊಲೀಸರ ಹುದ್ದೆ ಖಾಲಿ ಇವೆ, ನೇಮಕಾತಿ ಪ್ರಕ್ರಿಯೆಯು ನಡೆಯುತ್ತಿದೆ ಎಂದು ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ ಹೇಳಿದರು.

ಹುಬ್ಬಳ್ಳಿಯಲ್ಲಿ ಪೊಲೀಸ್ ವಸತಿಗೃಹ ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿಯೇ ರಾಜ್ಯದ ಪೊಲೀಸರು ಮಾದರಿಯಾಗಿದ್ದಾರೆ. ಇಲಾಖೆಯ 1 ಲಕ್ಷ 16 ಸಾವಿರ ಹುದ್ದೆಗಳಲ್ಲಿ ಸುಮಾರು 25 ಸಾವಿರ ಹುದ್ದೆಗಳು ಖಾಲಿ ಇವೆ. ಪೊಲೀಸ್ ಸಿಬ್ಬಂದಿಗೆ ಒಟ್ಟು 11 ಸಾವಿರ ವಸತಿಗೃಹಗಳನ್ನು 1818ಕೋಟಿ ರೂ‌.ವೆಚ್ಚದಲ್ಲಿ ನಿರ್ಮಿಸುವ ಯೋಜನೆ ಜಾರಿಯಲ್ಲಿದೆ .ಈಗಾಗಲೇ 7 ರಿಂದ 8 ಸಾವಿರ ಮನೆಗಳನ್ನು ನಿರ್ಮಿಸಲಾಗಿದೆ. ಯೋಜನೆ ಮುಂದುವರೆಯಲಿದೆ.

ಕಡಬದಲ್ಲಿ ಪಾನಮತ್ತರಾದ ಸೈನಿಕರಿಂದ ಪೊಲೀಸರ ಮೇಲೆ ದಾಳಿ

ದೇಶದ ಯಾವ ರಾಜ್ಯದಲ್ಲಿ ಪೊಲೀಸರಿಗೆ ಹೆಚ್ಚು ವೇತನ,ಸೌಲಭ್ಯಗಳನ್ನು ನೀಡಲಾಗುತ್ತಿದೆಯೋ ಅದನ್ನೇ ಈ ರಾಜ್ಯದಲ್ಲಿ ಅಳವಡಿಸಿಕೊಳ್ಳಲಾಗುತ್ತಿದೆ. ಕಂದಾಯ ನಿರೀಕ್ಷಕರ ಹುದ್ದೆಗೆ ಸಮಾನವಾಗಿ ಪೊಲೀಸ್ ಪೇದೆಗಳಿಗೆ ವೇತನ ಸೌಲಭ್ಯ ನೀಡಲು ಪರಿಷ್ಕರಣೆ ಮಾಡಲಾಗುತ್ತದೆ.ಪೊಲೀಸರಿಗೆ ಪಡಿತರ ಸ್ಥಗಿತಗೊಳಿಸಿಲ್ಲ ಎಂದರು.

ಬೆಂಗಳೂರಿನ ಕ್ರೈಂ ಇತಿಹಾಸದಲ್ಲೇ ಸಿಸಿಬಿಯಿಂದ ಬೃಹತ್ ದಾಳಿ

ಅವರ ಕೋರಿಕೆಯಂತೆ ಎಲ್ಲರಿಗೂ 400 ರೂ.ಮಾಸಿಕ ಭತ್ಯೆ ನೀಡಲಾಗುತ್ತಿದೆ. ಸಿಬ್ಬಂದಿ ಬಯಸಿದರೆ ಮರಳಿ ಹಳೆಯ ಪದ್ಧತಿಯಂತೆ ಪಡಿತರ ವಿತರಣೆ ಮುಂದುವರೆಸಲಾಗುವುದು.

ಕರ್ನಾಟಕವೇ ಉಗ್ರರ ಸ್ಲೀಪರ್ ಸೆಲ್: ಡಿಜಿಪಿ ಸ್ಫೋಟಕ ಹೇಳಿಕೆ

ಅವಳಿ ನಗರದಲ್ಲಿ ಈಗಾಗಲೇ 4 ಆಸ್ಪತ್ರೆಗಳು ಪೊಲೀಸ್ ಆರೋಗ್ಯ ಭಾಗ್ಯ ಯೋಜನೆ ವ್ಯಾಪ್ತಿಯಲ್ಲಿ ಇವೆ.ಇನ್ನೂ ಉತ್ತಮ ಆಸ್ಪತ್ರೆಗಳು ಇದ್ದರೆ ಅವುಗಳನ್ನು ಸೇರಿಸಲಾಗುವದು. ಗಾಂಜಾ,ಡ್ರಗ್ಸ್ ನಿಯಂತ್ರಣಕ್ಕೆ ಸಾಕಷ್ಟು ಕಾರ್ಯಕ್ರಮಗಳನ್ನು ಅನುಷ್ಠಾನ ಗೊಳಿಸಲಾಗುತ್ತಿದೆ ಎಂದರು.

English summary
Deputy chief minister Dr.G.Parameshwara has revealed that there were more than 25,000 vacancies in police department as of now and recruitment will be done in phased manner.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X