ದಾವಣಗೆರೆಯಲ್ಲಿ ಕಿಡ್ನಾಪ್ ಆದ ಬಾಲಕ ಬಚಾವ್

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ, ಆಗಸ್ಟ್, 31: ದಾವಣಗೆರೆಯಲ್ಲಿ ಐದನೇ ತರಗತಿ ಓದುತ್ತಿದ್ದ 10 ವರ್ಷದ ಬಾಲಕ ಆಕಾಶ್ ಅಪಹರಣಕಾರರಿಂದ ತಪ್ಪಿಸಿಕೊಂಡು ಹುಬ್ಳಳ್ಳಿಯ ರೈಲ್ವೆ ಪೊಲೀಸರಿಗೆ ಸಿಕ್ಕಿದ್ದಾನೆ.

ದಾವಣಗೆರೆಯ ಮಾಡರ್ನ್ ಹೈಸ್ಕೂಲ್ ನಲ್ಲಿ ಓದುತ್ತಿದ್ದ ಕೆ.ಸಿ.ಆಕಾಶ ಎಂಬ ಬಾಲಕನು ತನ್ನ ಅಜ್ಜಿಯೊಂದಿಗೆ ಖಾಸಗಿ ಆಸ್ಪತ್ರೆಗೆ ಬಂದಾಗ ನಾಲ್ವರು ದುಷ್ಕರ್ಮಿಗಳು ಮತ್ತು ಬರಿಸುವ ಔಷಧ ನೀಡಿ ಕ್ರೂಸರ್ ನಲ್ಲಿ ಅಪಹರಿಸಿದ್ದರು.[ಪೊಲೀಸನ ವೇಷ ಧರಸಿ ಬಂದ ಅಸಲಿ ಕಾರು ಕಳ್ಳ!]

kidnapped school boy

ದಾವಣಗೆರೆಯಿಂದ ಹುಬ್ಬಳ್ಳಿ ಕಡೆಗೆ ಕ್ರೂಸರ್ ವಾಹನದಲ್ಲಿ ಬರುತ್ತಿದ್ದಾಗ ದಾರಿ ಮಧ್ಯೆ ವಾಹನ ನಿಲ್ಲಿಸಲಾಗಿದೆ. ಈ ಸಮಯದಲ್ಲಿ ಎಚ್ಚರಗೊಂಡ ಆಕಾಶ್ ಕೂಡಲೇ ವಾಹನದಿಂದ ಜಿಗಿದು ತಪ್ಪಿಸಿಕೊಂಡಿದ್ದಾನೆ. ನಂತರ ಅಲ್ಲಿಂದ ಹುಬ್ಬಳ್ಳಿಗೆ ಬಂದು ದಾವಣಗೆರೆಗೆ ಹೋಗಲು ರೈಲಿಗಾಗಿ ಕಾಯುತ್ತಿರುವಾಗ ಹುಬ್ಬಳ್ಳಿ ರೈಲ್ವೆ ಪೊಲೀಸರ ಕೈಗೆ ಸಿಕ್ಕಿದ್ದಾನೆ.[ನಾಪತ್ತೆಯಾಗಿದ್ದ ಪೂಜಿತಾ ಹುಬ್ಬಳ್ಳಿಯಲ್ಲಿ ಪತ್ತೆಯಾಗಿದ್ದು ಹೇಗೆ?]

ಆತನನ್ನು ವಿಚಾರಿಸಿದಾಗ ಅಪಹರಣದ ಪ್ರಕರಣ ಬಯಲಿಗೆ ಬಂದಿದೆ. ಕ್ರೂಸರ್ ನಲ್ಲಿ ಇನ್ನೂ 6 ಮಕ್ಕಳಿದ್ದಾರೆ ಎಂದು ಹೇಳಿದ ಆಕಾಶ್, ಅಪಹರಿಸಿದ ಕೂಡಲೇ ಶಾಲಾ ಸಮವಸ್ತ್ರ ತೆಗೆಸಿ, ಬೇರೆ ಬಟ್ಟೆ ಹಾಕಿಸಿದ್ದಾರೆ ಎಂದು ಹೇಳಿದ್ದಾನೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A school boy kidnapped in Davanagere escaped from Kidnappers. He reached Hubballi railway station, enquired by railway police. K.C.Akash is a student of Davanagere modern high school.
Please Wait while comments are loading...