ಜಯಮೃತ್ಯುಂಜಯ ಶ್ರೀಗಳಿಗೆ ಸಂಕಷ್ಟ, ಖುದ್ದು ಹಾಜರಿಗೆ ನ್ಯಾಯಾಲಯ ಸೂಚನೆ

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ, ನವೆಂಬರ್ 25: ವೀರಶೈವರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಕೂಡಲ ಸಂಗಮ ಜಯಮೃತ್ಯುಂಜಯ ಶ್ರೀಗಳಿಗೆ ಮತ್ತೆ ಸಂಕಷ್ಟ ಎದುರಾಗಿದೆ.

ಲಿಂಗಾಯತ ಧರ್ಮೀಯರ ರಾಷ್ಟ್ರೀಯ ಸಮಾವೇಶ, 5ನಿರ್ಣಯಗಳು

ನವೆಂಬರ್ 5 ರಂದು ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ನಡೆದ ಲಿಂಗಾಯತ ಸಮಾವೇಶದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದ ಜಯಮೃತ್ಯುಂಜಯ ಶ್ರೀಗಳ ಖುದ್ದು ಹಾಜರಿಗೆ ನ್ಯಾಯಾಲಯ ಆದೇಶ ನೀಡಿದೆ.

ಸಚಿವರು ಹೇಳಿದ ಮಾತ್ರಕ್ಕೆ ಲಿಂಗಾಯತ ಪ್ರತ್ಯೇಕ ಧರ್ಮವಾಗುವುದಿಲ್ಲ!

Court notice to Jayamruthyunjaya Swamiji's to attend hearing

ನವೆಂಬರ್ 5 ರಂದು ಹುಬ್ಬಳ್ಳಿಯಲ್ಲಿ ನಡೆದ ಲಿಂಗಾಯತ ಸಮಾವೇಶದಲ್ಲಿ, ಕೂಡಲ ಸಂಗಮ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಶ್ರೀಗಳು, ಒಬ್ಬ ತಂದೆಗೆ ಹುಟ್ಟಿದವರು ಲಿಂಗಾಯತರು, ಐದು ಜನ ತಂದೆಗೆ ಹುಟ್ಟಿದವರು ವೀರಶೈವರು ಎಂಬ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದರು.

ಲಿಂಗಾಯತ 'ಧರ್ಮ' ಇದು ಕೈ ಪಕ್ಷದ ಚುನಾವಣೆ 'ಮರ್ಮ'

ಹಾಗಾಗಿ ವೀರಶೈವ ಮುಖಂಡರು, ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಎಮ್. ಎನ್. ನಾಗರಾಜ್ ಅವರಿಗೆ, ಶ್ರೀಗಳ ವಿರುದ್ಧ ದೂರು ನೀಡಿದ್ದರು. ಆದರೆ ಪೊಲೀಸ್ ಕಮೀಷನರ್ ಸೂಕ್ತ ಕ್ರಮ ಕೈಗೊಳದಿದ್ದಕ್ಕೆ ಶುಕ್ರವಾರ, ಕೋರ್ಟ್ ನಲ್ಲಿ ವಕೀಲರಾದ ಬಸವನಗೌಡ ಪಾಟೀಲ್ ಖಾಸಗಿ ದೂರು ದಾಖಲಿಸಿದ್ದಾರೆ.

ಹೀಗಾಗಿ ಶುಕ್ರವಾರ ವಿಚಾರಣೆ ನಡೆಸಿದ ಹುಬ್ಬಳ್ಳಿಯ ಒಂದನೇ ಜೆಎಮ್ಎಫ್'ಸಿ ನ್ಯಾಯಾಲಯ ಡಿಸೆಂಬರ್ 20 ಕ್ಕೆ ದೂರಿನ ವಿಚಾರಣೆ ಮುಂದೂಡಿದೆ. ಅಲ್ಲದೆ ವಿಚಾರಣೆ ವೇಳೆ ಜಯಮೃತ್ಯುಂಜಯ ಶ್ರೀಗಳು ಖುದ್ದು ಹಾಜರಾಗುವಂತೆ ಆದೇಶ ನೀಡಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Kudala Sangama Jayamruthyunjaya Swamiji, who had given the controversial statement, has suffered a lot of trouble again. Court orders Jayamruthyunjaya Swamiji to attend hearing on December 20.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ