ಬೈ ಎಲೆಕ್ಷನ್ ಕ್ಯಾಂಪೇನ್: ಶಾಸಕರ ಮನೆಯಲ್ಲಿ ಸಿಎಂ ಸಿದ್ದರಾಮಯ್ಯ ಭರ್ಜರಿ ನಾನ್‌ವೆಜ್ ಬ್ಯಾಟಿಂಗ್
ಹುಬ್ಬಳ್ಳಿ, ನವೆಂಬರ್ 05: ಚನ್ನಪಟ್ಟಣ ಬಳಿಕ ಹಾವೇರಿ ಜಿಲ್ಲೆಯ ಶಿಗ್ಗಾವಿ ಉಪಚುನಾವಣೆ ಆಡಳಿತ ಪಕ್ಷಕ್ಕೆ ಪ್ರತಿಷ್ಠೆಯ ಕಣವಾಗಿದೆ. ಶಿಗ್ಗಾವಿಯಲ್ಲಿ ಪಕ್ಷದ ಅಭ್ಯರ್ಥಿ ಯಾಸೀರ್ ಖಾನ್ ಪಠಾಣ್ ಅವರ ಪರ ಪ್ರಚಾರದಲ್ಲಿ ಸಿದ್ದರಾಮಯ್ಯ ಅವರು ತೊಡಗಿದ್ದಾರೆ. ಪ್ರಚಾರ ಕಾರ್ಯದ ಮಧ್ಯೆ ಹುಬ್ಬಳ್ಳಿಗೆ ಆಗಮಿಸಿದ ಸಿಎಂ ತಮ್ಮ ನಾಯಕರ ಮನೆಯಲ್ಲಿ ಭರ್ಜರಿ ನಾಟಿ ಕೋಳಿ ಸವಿದಿದ್ದಾರೆ. ಹುಟ್ಟು ಹಬ್ಬದ ಶುಭಾಶಯ ಕೋರಿದ್ದಾರೆ.
ಶಿಗ್ಗಾವಿ ಉಪಚುನಾವಣೆ ಪ್ರಯುಕ್ತ ಹಾವೇರಿ ಆಗಮಿಸಿದ್ದ ಸಿಎಂ ಸಿದ್ದರಾಮಯ್ಯ ಅವರು ಸೋಮವಾರದಿಂದ ಮೂರು ದಿನ ಪಕ್ಷದ ಅಭ್ಯರ್ಥಿಪರ ಪ್ರಚಾರದಲ್ಲಿ ತೊಡಗಿದ್ದಾರೆ. ಬುಧವಾರವರೆಗೂ ಅವರು ಕ್ಷೇತ್ರದಲ್ಲಿರಲಿದ್ದಾರೆ. ಈ ನಡುವೆ ಸೋಮವಾರ ಪ್ರಚಾರ ಕಾರ್ಯ ಮುಗಿಸಿ ರಾತ್ರಿ ಬಿಡುವು ಮಾಡಿಕೊಂಡು ಹುಬ್ಬಳ್ಳಿಗೆ ತೆರಳಿದ್ದ ಅವರು ನಾಟಿ ಕೋಳಿ, ಮಟನ್ ಬಿರಿಯಾನಿ, ಉತ್ತರ ಖರ್ನಾಟಕದ ಖಡಕ್ ರೊಟ್ಟಿ ಊಟ ಸವಿದಿದ್ದಾರೆ.

ಹುಬ್ಬಳ್ಳಿಯಲ್ಲಿರುವ ಶಾಸಕ ಮತ್ತು ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ ಅಪ್ರಸಾದ ಅಬ್ಬಯ್ಯ ಅವರ ಮನೆಗೆ ತೆರಳಿದ ಸಿಎಂ ಸಿದ್ದರಾಮಯ್ಯ ಅವರು ತೆರಳಿಸಿದ್ದಾರೆ. ಸಂತೋಷ ನಗರದ ಮಧುರಾ ಪಾರ್ಕ್ ನಲ್ಲಿರುವ ತಮ್ಮ ಮನೆಗೆ ಆಗಮಿಸುತ್ತಿದ್ದಂತೆ ಸಿದ್ದರಾಮಯ್ಯ ಅವರನ್ನು ಅಬ್ಬಯ್ಯ ಹಾಗೂ ಅವರ ಪತ್ನಿ, ಮಕ್ಕಳು, ಕುಟುಂಬದ ಸದಸ್ಯರು ಸ್ವಾಗತಿಸಿದರು.
ಹುಟ್ಟುಹಬ್ಬ ಹಿನ್ನೆಲೆಯ ಸಿಎಂಗೆ ಆಹ್ವಾನ
ಶಾಸಕ ಪ್ರಸಾದ ಅಬ್ಬಯ್ಯ ನಾಟಿ ಕೋಳಿ ಮತ್ತು ಮಟನ್ ಬಿರಿಯಾನಿ ಊಟ ಮಾಡಿಸಿದರು. ಅಬ್ಬಯ್ಯ ಪುತ್ರ ವಿಶಾಲ್ ಅಬ್ಬಯ್ಯ ಹುಟ್ಟುಹಬ್ಬದ ಹಿನ್ನೆಲೆ ಅವರ ಮನೆಗೆ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಲಾಗಿತ್ತು ಎನ್ನಲಾಗಿದೆ.
ಸಸ್ಯಹಾರಿ ಜೊತೆಗೆ ಮಾಂಸಹಾರಿ ಪ್ರಿಯ ಸಿಎಂ ಸಿದ್ದರಾಮಯ್ಯ ಅವರಿಗೆ ನಾಟಿ ಕೋಟಿ, ಮುದ್ದೆ, ಮಟನ್ ಎಂದರೆ ಅಚ್ಚುಮೆಚ್ಚು. ಹೀಗಾಗಿ ಅವರ ಆಗಮನ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕ ಶೈಲಿಯಲ್ಲಿ ಮಾಂಸದೂಟ, ವೆಜ್ ನಾನ್‌ವೆಜ್ ಸೇರಿದಂತೆ ಬಗೆ ಬಗೆಯ ಅಡುಗೆ ಮಾಡಿಸಲಾಗಿತ್ತು. ಮನೆ ಸದಸ್ಯರ ಕುಶಲೋಪರಿಯನ್ನು ವಿಚಾರಿಸುತ್ತ ಸಿಎಂ ಸಿದ್ದರಾಮಯ್ಯ ಅವರು ಊಟ ಸವಿದರು.
ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯರ ಬಸವರಾಜ ಹೊರಟ್ಟಿ, ಮಾಜಿ ಸಚಿವ ಪಿ.ಸಿ ಸಿದ್ಧನಗೌಡರ, ಶಾಸಕ ಎನ್ ಎಚ್ ಕೋನರೆಡ್ಡಿ ಮುಖಂಡ ರಾಜಶೇಖರ ಮೆಣಸಿನಕಾಯಿ ಹಾಗೂ ವಿಶಾಲ ಅಬ್ಬಯ್ಯ, ಸಚಿವ ಎಚ್. ಕೆ. ಪಾಟೀಲ್, ಎಂಎಲ್ ಸಿ ನಜೀರ್ ಅಹ್ಮದ್, ಸಿಎಂ ಮಾಧ್ಯಮ ಸಲಹೆಗಾರ ಪ್ರಭಾಕರ್ ಇದ್ದರು. ಸೇರಿದಂತೆ ಹಲವು ಮುಖಂಡರು ಸಿಎಂ ಜೊತೆ ನಾಟಿ ಕೋಳಿ ರುಚಿ ಸವಿದರು.
ಮುಖ್ಯಮಂತ್ರಿಗಳು ಹುಬ್ಬಳ್ಳಿಗೆ ಆಗಮಿಸುವ ಹಿನ್ನೆಲೆಯಲ್ಲಿ ಶಾಸಕ ಪ್ರಸಾದ್ ಅಬ್ಬಯ್ಯ ಅವರ ಮನೆ, ಬಡಾವಣೆ ಸುತ್ತಮುತ್ತ ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿತ್ತು.
ರಂಗೇರಿದ ಶಿಗ್ಗಾವಿ ಚುನಾವಣೆ ಕಣ
ಶಿಗ್ಗಾವಿಯಲ್ಲಿ ಕಾಂಗ್ರೆಸ್ ಗೆಲ್ಲಿಸಿಕೊಂಡು ಬರಲು ಸಿಎಂ ಸಿದ್ದರಾಮಯ್ಯ ಪಣತೊಟ್ಟಿದ್ದಾರೆ. ಕಣದಲ್ಲಿ ಹಾಲಿ ಸಿಎಂ, ಮಾಜಿ ಸಿಎಂ ಮುಖಾಮುಖಿ ಆಗಿದ್ದಾರೆ. ರಾಜ್ಯ ಸರ್ಕಾರ, ವಕ್ಫ್ ಭೂಕಬಳಿಕೆ ಮುಂದಿಟ್ಟುಕೊಂಡು ಬಿಜೆಪಿ ಪ್ರಚಾರ ಮಾಡಿ ಮತಯಾಚಿಸಿದರೆ, ಇತ್ತ ಕಾಂಗ್ರೆಸ್ ನಾಯಕರು, ಸಿಎಂ ಸಿದ್ದರಾಮಯ್ಯ ಅವರು, ವಕ್ಪ್ ವಿಚಾರದಲ್ಲಿ ಬಿಜೆಪಿ ನಾಯಕರು, ಮಾಜಿ ಸಿಎಂ ಸುಳ್ಳು ಹೇಳುತ್ತಿದ್ದಾರೆ ಎಂದು ಪ್ರತಿ ದಾಳಿ ಮೂಲಕ ಮತಯಾಚನೆ ಮಾಡುತ್ತಿದ್ದಾರೆ. ಒಟ್ಟಾರೆ ಶಿಗ್ಗಾವಿ ಚುನಾವಣೆ ಕಣ ರಂಗೇರಿದೆ.












Click it and Unblock the Notifications