Breaking; ಹುಬ್ಬಳ್ಳಿ ಗಲಭೆ, ಬಂಧಿತರ ಸಂಖ್ಯೆ 134ಕ್ಕೆ ಏರಿಕೆ

ಹುಬ್ಬಳ್ಳಿ, ಏಪ್ರಿಲ್ 22; ಹುಬ್ಬಳ್ಳಿಯ ಹಳೇ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ 134 ಆರೋಪಿಗಳನ್ನು ಬಂಧಿಸಲಾಗಿದೆ. ಗುರುವಾರ ಪೊಲೀಸರು ಮೌಲ್ವಿ ವಾಸಿಂ ಪಠಾಣ್ ಸಹ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಮೌಲ್ವಿ ವಾಸಿಂ ಪಠಾಣ್, ರೌಡಿ ಶೀಟರ್ ತುಫೈಲ್ ಮುಲ್ಲಾ ಸೇರಿದಂತೆ 8 ಆರೋಪಿಗಳನ್ನು ಗುರುವಾರ ಪೊಲೀಸರು ಬಂಧಿಸಿದ್ದಾರೆ. ಮೌಲ್ವಿ ವಾಸಿಂ ಪಠಾಣ ಗಲಭೆಯ ಮಾಸ್ಟರ್ ಮೈಂಡ್ ಎಂದು ಶಂಕಿಸಲಾಗಿದೆ.

ಗಲಭೆ ನಡೆದ ದಿನ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯ ಮುಂದೆ ವಾಹನದ ಮೇಲೆ ಹತ್ತಿ ಮೌಲ್ಪಿ ಗಲಭೆಗೆ ಪ್ರಚೋದನೆ ನೀಡಿದ್ದಾನೆ ಎಂದು ಶಂಕಿಸಲಾಗಿದೆ. ಈ ಕುರಿತು ವಿಡಿಯೋಗಳು ಹರಿದಾಡುತ್ತಿದ್ದು, ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.

Clash In Hubballi Police Arrested 134 Accused

ಗಲಭೆ ಬಳಿಕ ಹುಬ್ಬಳ್ಳಿಯಿಂದ ಪರಾರಿಯಾಗಿದ್ದ ಮೌಲ್ವಿ ವಾಸಿಂ ಪಠಾಣ್ ತನ್ನ ಸಹಚರರಿಗೆ ಪದೇ ಪದೇ ಕರೆ ಮಾಡಿ ಹುಬ್ಬಳ್ಳಿಯ ಬೆಳವಣಿಗೆ ಬಗ್ಗೆ ಮಾಹಿತಿ ಪಡೆಯುತ್ತಿದ್ದ. ಮೊಬೈಲ್ ಲೋಕೇಷನ್ ಆಧಾರದ ಮೇಲೆ ಮೌಲ್ವಿ ವಾಸಿಂ ಪಠಾಣ್ ವಶಕ್ಕೆ ಪಡೆಯಲಾಗಿತ್ತು, ಬಳಿಕ ಬಂಧಿಸಲಾಗಿದೆ.

ಗುರುವಾರ ಬೆಳಗ್ಗೆ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದ ಮೌಲ್ವಿ ವಾಸಿಂ ಪಠಾಣ್, "ಗಲಭೆ ಸಂದರ್ಭದಲ್ಲಿ ನಾನು ಉದ್ರಿಕ್ತರನ್ನು ಸಮಾಧಾನ ಪಡಿಸುತ್ತಿದ್ದೆ. ನಾನು ತಪ್ಪಿತಸ್ಥನಾಗಿದ್ದರೆ ಕ್ರಮ ಕೈಗೊಳ್ಳಲಿ" ಎಂದು ಹೇಳಿದ್ದ. ಈ ವಿಡಿಯೋ ಬಹಿರಂಗವಾದ ಕೆಲವೇ ಗಂಟೆಗಳಲ್ಲಿ ಪೊಲೀಸರು ಮೌಲ್ವಿ ಬಂಧಿಸಿದ್ದಾರೆ.

ಮೌಲ್ವಿ ವಾಸಿಂ ಪಠಾಣ್, ರೌಶಿ ಶೀಟರ್ ತುಫೈಲ್ ಮುಲ್ಲಾ, ವಸಿಂ ಸಹಚರ ಅಬ್ದುಲ್ ಮಲಿಕ್ ಗುರುವಾರ ಬಂಧಿತರಾದ ಆರೋಪಿಗಳು. ಎಐಎಂಐಎಂ ಮುಖಂಡರ ಜೊತೆ ಗುರುತಿಸಿಕೊಂಡಿದ್ದ ಮೊಹಮ್ಮದ್ ಆರೀಫ್‌ ಎಂಬುವವನನ್ನು ಸಹ ಪೊಲೀಸರು ಬಂಧಿಸಿ ವಿಚಾರಣೆ ಮಾಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+