Jagadish Shettar: ಕಾಂಗ್ರೆಸ್‌ಗೆ ಕೈಕೊಟ್ಟು, ಬಿಜೆಪಿಗೆ ಮರಳಿದ ಶೆಟ್ಟರ್‌, ಹುಬ್ಬಳ್ಳಿಯಲ್ಲಿ ಸಂಭ್ರಮಾಚಣೆ ಜೋರೋ.. ಜೋರು

ಹುಬ್ಬಳ್ಳಿ, ಜನವರಿ, 25: ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಕಾಂಗ್ರೆಸ್‌ ತೊರೆದು ಬಿಜೆಪಿಗೆ ವಾಪಸಾಗುತ್ತಿದ್ದಂತೆ ಪಕ್ಷದ ಕಾರ್ಯಕರ್ತರಲ್ಲಿ ಸಂಭ್ರಮ ಮನೆ ಮಾಡಿದೆ. ನಗರದ ಮಧುರಾ ಕಾಲೋನಿಯಲ್ಲಿರುವ ಶೆಟ್ಟರ್‌ ನಿವಾಸದಲ್ಲಿ ಜಮಾಯಿಸಿದ ನೂರಾರು ಬಿಜೆಪಿ ಕಾರ್ಯಕರ್ತರು ಮತ್ತು ಪಾಲಿಕೆ ಸದಸ್ಯರು ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು.

ಶೆಟ್ಟರ್‌ ನಿವಾಸದಲ್ಲೇ ಕುಳಿತು ಘರ್ ಪಾಪ್ಸಿಯ ದೃಶ್ಯವನ್ನು ಟಿವಿಯಲ್ಲಿ ನೋಡುತ್ತಾ ಪ್ರಧಾನಿ ನರೇಂದ್ರ ಮೋದಿ, ಪ್ರಹ್ಲಾದ್‌ ಜೋಶಿ ಹಾಗೂ ಜಗದೀಶ್‌ ಶೆಟ್ಟರ್‌ಗೆ ಜೈಕಾರ ಹಾಕುತ್ತಾ ಸಂಭ್ರಮಿಸಿದರು. ಅಲ್ಲದೆ, ಶೆಟ್ಟರ್ ಭಾವಚಿತ್ರ ಹಾಗೂ ಬಿಜೆಪಿ ಧ್ವಜ ಹಿಡಿದು ಘೋಷಣೆ ಕೂಗಿ ಕುಣಿದು ಕುಪ್ಪಳಿಸಿದರು.

 Jagadish Shettar joins BJP, celebration in Hubballi

ಬಳಿಕ ಮಾತನಾಡಿದ ಹುಡಾ ಮಾಜಿ ಅಧ್ಯಕ್ಷ ನಾಗೇಶ ಕಲಬುರ್ಗಿ, ಜಗದೀರ್‌ ಶೆಟ್ಟರ ಕಾಂಗ್ರೆಸ್ ಪಕ್ಷ ಸೇರಿದಾಗ ಬಹುತೇಕ ಅವರ ಜೊತೆಗಿದ್ದವರು ಕಾಂಗ್ರೆಸ್ ಸೇರಿದ್ದರು. ಆದರೆ, ಜಗದೀಶ್‌ ಶೆಟ್ಟರ್‌ ಪ್ರಭಾವವನ್ನು ಅರಿತ ಬಿಜೆಪಿ ಹಿರಿಯ ನಾಯಕರು ಅವರನ್ನು ಮತ್ತೆ ಬಿಜೆಪಿಗೆ ಕರೆಸಿಕೊಂಡಿದ್ದಾರೆ. ಶೆಟ್ಟರ್‌ ಜೊತೆಗೆ ಯಾರೆಲ್ಲ ಕಾರ್ಯಕರ್ತರು ಕಾಂಗ್ರೆಸ್ ಸೇರಿದ್ರೋ ಅವರೆಲ್ಲ ಬಿಜೆಪಿಗೆ ವಾಪಸಾಗಲಿದ್ದಾರೆ. ಅಲ್ಲದೆ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಜೆ.ಪಿ.ನಡ್ಡಾ, ಅಮಿತ್ ಶಾ ತೋರಿದ ಮರ್ಗದಲ್ಲಿ ಮುನ್ನಡೆಯುತ್ತೇವೆ ಎಂದು ಹೇಳಿದ್ದಾರೆ.

ಡಿಕೆಶಿ ಆಪ್ತರಿಗೆ ಗಾಳ ಹಾಕಲು ಮುಂದಾದ್ರಾ ವಿಜಯೇಂದ್ರ?

ಅತ್ತ ಶೆಟ್ಟರ್ ಬಿಜೆಪಿ ಸೇರ್ಪಡೆ ಆಗುತ್ತಲೇ, ಇತ್ತ ಡಿ.ಕೆ.ಶಿವಕುಮಾರ್‌ ಆಪ್ತರಿಗೆ ಗಾಳ ಹಾಕಲು ಬಿ.ವೈ.ವಿಜಯೇಂದ್ರ ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಧಾರವಾಡ ಜಿಲ್ಲೆಯಲ್ಲಿ ರಾಜೀನಾಮೆ ಪರ್ವ ಆರಂಭ ಆಗಿದೆ.

ಶೆಟ್ಟರ್ ಮತ್ತೆ ಬಿಜೆಪಿ ಸೇರ್ಪಡೆಯಿಂದ ಮರ್ಮಘಾತಕ್ಕೊಳ್ಳಗಾಗಿರುವ ಕಾಂಗ್ರೆಸ್ ಧಾರವಾಡ ಪಾಳೆಯದಲ್ಲಿ ಅಲ್ಲೋಲ ಕಲ್ಲೋಲವಾಗಿದೆ. ಮಾಜಿ ಸಿಎಂ ಜಗದೀಶ್‌ ಶೆಟ್ಟರ್ ಘರ್ ವಾಪಸ್ಸಿ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ರಾಜೀನಾಮೆ ಪರ್ವ ಆರಂಭವಾಗಿದ್ದು, ಧಾರವಾಡ ಜಿಲ್ಲೆಯ ಪಂಚಮಸಾಲಿ ಸಮಾಜದ ಜಿಲ್ಲಾ ಯುವ ಘಟಕದ ಅಧ್ಯಕ್ಷ ವಿರೇಶ ಉಂಡಿ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದಾರೆ.

ಇನ್ನೂ ಅಪಾರ ಬೆಂಬಲಿಗರೊಂದಿಗೆ ನಾಳೆ ಕಾಂಗ್ರೆಸ್ ಮುಖಂಡ ವೀರೇಶ ಉಂಡಿ ಅವರಯ ಬಿಜೆಪಿ ಸೇರ್ಪಡೆ ಆಗಲಿದ್ದು, ಈ ಮೂಲಕ ಕಾಂಗ್ರೆಸ್ ಒಡನಾಟಕ್ಕೆ ಬ್ರೇಕ್ ಹಾಕಲಿದ್ದಾರೆ ಎಂದು ತಿಳಿದುಬಂದಿದೆ.

ಮಂಗಲಾ ಅಂಗಡಿ ಹೇಳಿದ್ದೇನು?: ಇನ್ನು ಜಗದೀಶ್ ಶೆಟ್ಟರ್ ಬಿಜೆಪಿ ಸೇರ್ಪಡೆ ಬಗ್ಗೆ ಬೆಳಗಾವಿಯಲ್ಲಿ ಬಿಜೆಪಿ ಸಂಸದೆ ಮಂಗಲಾ ಅಂಗಡಿ ಪ್ರತಿಕ್ರಿಯಿಸಿದ್ದು, ಇವತ್ತು ಜಗದೀಶ್ ಶೆಟ್ಟರ್ ಅವರು ಬಿಜೆಪಿಗೆ ವಾಪಸ್ ಬಂದಿದ್ದು, ಇದರಿಂದ ನಮಗೆ ತುಂಬಾ ಶಕ್ತಿ ಬಂದಿದೆ. ರಾಜಕೀಯವಾಗಿ ಏನು ಆಗುತ್ತದೆ ನೋಡೋಣ. ಅಂಗಡಿ ಕುಟುಂಬಕ್ಕೆ ಟಿಕೆಟ್ ಕೊಡುವುದು ಫಿಕ್ಸ್ ಎಂದರು.

ಇನ್ನು ಶೆಟ್ಟರ್‌ ಅವರು ಬಿಜೆಪಿ ಸೇರ್ಪಡೆ ಬಗ್ಗೆ ಮಾಹಿತಿ ಇತ್ತು. ಅವರು ಮತ್ತೆ ತಮ್ಮ ಮನೆಗೆ ವಾಪಸ್ ಆಗಿದ್ದಾರೆ. ಜಗದೀಶ್ ಶೆಟ್ಟರ್ ಬಂದಿರೋದು ಬಿಜೆಪಿ ಪಕ್ಷಕ್ಕೆ ಪ್ಲಸ್ ಆಗಿದೆ. ಲೋಕಸಭೆ ಚುನಾವಣೆಯಲ್ಲಿ 28 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದ ಮಂಗಲಾ ಅಂಗಡಿ ಅವರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+