ಜಾತಿ ಗಣತಿ ವರದಿಗೆ ವಿರೋಧ: ನಿವೃತ್ತ IPS ಅಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚನೆ?

ಹುಬ್ಬಳ್ಳಿ, ಏಪ್ರಿಲ್ 13: ಹತ್ತು ವರ್ಷಗಳಷ್ಟು ಹಳೆಯದಾದ ಕರ್ನಾಟಕ ಜಾತಿ ಗಣತಿ ವರದಿ ಜಾರಿಗೆ ವಿರೋಧ ಕೇಳಿ ಬರುತ್ತಿದೆ. ಶತಾಯಗತಾಯ ಒತ್ತಡ, ಚರ್ಚೆ ಬಳಿಕ ಸಿಎಂ ಸಿದ್ದರಾಮಯ್ಯ ನೇತತ್ವದ ರಾಜ್ಯ ಸರ್ಕಾರ ಜಾತಿ ಗಣತಿ ವರದಿ ಬಿಡುಗಡೆ ತೀರ್ಮಾನಿಸಿದೆ. ಈ ಸಂಬಂಧ ನಡೆದ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿದ್ದು, ಏಪ್ರಿಲ್ 17ರಂದು ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದೆ. ಈ ಮಧ್ಯೆ ವರದಿಯನ್ನು ನಾವು ಒಪ್ಪಲ್ಲ ಎಲ್ಲಾ ಪಕ್ಷಗಳ ನಾಯಕರ ಜೊತೆಗೆ ಚರ್ಚೆ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಒತ್ತಾಯಿಸಿದ್ದಾರೆ.

ಭಾನುವಾರ ನಗರದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಜಾತಿ ಗಣತಿಯನ್ನು ಕರ್ನಾಟಕ ವೀರಶೈವ ಮಹಾಸಭಾ ವಿರೋಧಿಸಿದೆ. ವರದಿ ಸತ್ಯಾಸತ್ಯತೆಗೆ ನಿವೃತ್ತ ಐಎಎಸ್ ಅಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚನೆಗೆ ಚಿಂತಿಸಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದರು.

BJP Veerashaiva Mahasabha Oppose Caste Census May be Committee Form led Retire IPS Officers

ಜಾತಿ ಗಣತಿ ಯಾರೆಲ್ಲ ವಿರೋಧಿಸುತ್ತಿದ್ದಾರೆ?

ಇದೊಂದು ಹಳೆ ಜಾತಿ ಗಣತಿ ವರದಿ. ದಶಕದ ಬಳಿಕ ಇದನ್ನು ಈಗ ಜಾರಿ ಮಾಡುವುದು ಸರಿಯಾಗಿ ಕ್ರಮವಲ್ಲ.

ಯಾವುದೇ ರೀತಿಯ ಸರಿಯಾಗಿ ಜಾತಿ ಗಣತಿ ಮಾಡಿಲ್ಲ. ಒಂದು ಕಡೆ ಲಿಂಗಾಯತರು, ಇನ್ನೊಂದು ಕಡೆ ಒಕ್ಕಲಿಗರು ಇದಕ್ಕೆ ವಿರೋಧ ಮಾಡಿದ್ದಾರೆ ಎಂದು ತಿಳಿಸಿದರು.

ವ್ಯಾಪಕ ವಿರೋಧದ ನಡುವೆಯು ಜಾತಿ ಗಣಿತಿ ಜಾರಿಗೊಳಿಸುವ ಮೊದಲು ಎಲ್ಲ ಪಕ್ಷಗಳ ಸಭೆ ಮಾಡಬೇಕು. ಎಲ್ಲ ಸಲಹೆಗಳನ್ನು ಪಡೆಯಬೇಕು. ಅದರ ಹೊರತಾಗಿ ಜಾರಿಗೆ ಮುಂದಾಗುವುದನ್ನು ಬಿಡಬೇಕು. ಇದಕ್ಕೆ ಬಿಜೆಪಿಗೆ ಸಹ ಮತ ಇಲ್ಲ ಎಂದು ತಿಳಿಸಿದರು. ಈ ಸಂಬಂಧ ನಿವೃತ್ತ ಐಎಎಸ್ ಅಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚನೆ ಚಿಂತನೆ ಇದೆ ಎಂದು ಅವರು ಹೇಳಿದರು.

BJP Veerashaiva Mahasabha Oppose Caste Census May be Committee Form led Retire IPS Officers

ರಾಜ್ಯದಲ್ಲಿ 48 ವಸ್ತು, ಯೋಜನೆ ದರ ಹೆಚ್ಚಳ

ಕೇಂದ್ರ ಸರ್ಕಾರವು ಕಚ್ಚಾ ತೈಲ, ಸಿಲಿಂಡರ್, ಪೆಟ್ರೋಲ್ ಬೆಲೆ ಏರಿಕೆ ಮಾಡಿದೆ ಎಂದು ಕಾಂಗ್ರೆಸ್ ನವರ ಆರೋಪವಾಗಿದೆ. ಹಾಗಾದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಏನು ಮಾಡಿದೆ? ಅದು ಎಲ್ಲರಿಗೂ ಗೊತ್ತಿದೆ. ಬೆಲೆ‌ ಏರಿಕೆಯಿಂದ ಜನಸಾಮಾನ್ಯರ ತತ್ತವರಿಸುವಂತೆ ಮಾಡಿದೆ.

ರಾಜ್ಯದಲ್ಲಿ ಒಟ್ಟು 48 ವಸ್ತುಗಳ ಹಾಗೂ ಯೋಜನೆ ಮೇಲೆ ದರ ಹೆಚ್ಚಳ ಮಾಡಲಾಗಿದೆ. ನೀರು, ಹಾಲು, ವಿದ್ಯುತ್, ರೈತರ ಟಿಸಿ ಕಸದ ಮೇಲೋ ಸಹ ಏರಿಕೆ ಮಾಡಲಾಗಿದೆ. ಪಹಣಿ, ಜನನ ಮರಣ ಪತ್ರಗಳ ಮೇಲೆ ಸಹ ದರ‌ ಏರಿಕೆ ‌ಮಾಡಲಾಗಿದೆ ಎಂದು ಅವರು ಆಕ್ರೋಶ ಹೊರ ಹಾಕಿದರು.

Take a Poll

ಕಾಂಗ್ರೆಸ್ ಜನಾಕ್ರೋಶ ಯಾತ್ರೆ..ಬರಲಿ ಜನರ ಮುಂದೆ..

ಬಿಜೆಪಿಯ ಜನಾಕ್ರೋಶ ಯಾತ್ರೆಗೆ ವಿರೋಧಿರುವ ಕಾಂಗ್ರೆಸ್ ಸಹ ಕೇಂದ್ರ ಹೆಚ್ಚಿಸಿದ ಬೆಲೆ ಏರಿಕೆ ವಿರುದ್ಧ, ರಾಜ್ಯಕ್ಕೆ ಆದ ಅನ್ಯಾಯದ ವಿರುದ್ಧ ತಾವು ಜನಾಕ್ರೋಶ ಯಾತ್ರೆ ಮಾಡುವುದಾಗಿ ತಿಳಿಸಿದ್ದಾರೆ. ಈ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್ ನವರು ಜನಾಕ್ರೋಶ ಯಾತ್ರೆ ಮಾಡಲಿ? ನಾವು ಸಹ ಜನರ ಮುಂದೆ ಹೋಗುತ್ತವೆ ಕಾಂಗ್ರೆಸ್ ನವರು ಬರಲಿ..ಯಾರ ಕಾಲದಲ್ಲಿ ಎಷ್ಟು ಬೆಲೆ ಏರಿಕೆ ಆಗಿದೆ ಎಂದು ಜನರ ಮುಂದೆ ತೆರೆದಿಡೋಣ. ಯಾರ ಆಡಳಿತದಲ್ಲಿ ದುರಾಡಳಿತ ಆಗಿದೆ ಇದು ಚರ್ಚೆ ಆಗಲಿಲ್ಲ. ಜನರ ಮುಂದೆ ಬರಲಿ ಜನರಿಗೆ ನಾವು ಹೇಳುತ್ತೇವೆ ಎಂದು ಸವಾಲೆಸೆದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+