BJP Manifesto 2024: ಅಧಿಕಾರಕ್ಕೆ ಬಾರದವರಿಂದ ಬೇಜವಾಬ್ದಾರಿ ಪ್ರಣಾಳಿಕೆ: ಮಾಜಿ ಸಿಎಂ ಹೇಳಿದ್ದೇನು?
ಹುಬ್ಬಳ್ಳಿ, ಏಪ್ರಿಲ್ 14: ಕಾಂಗ್ರೆಸ್ ಗ್ಯಾರೆಂಟಿಗಳಿಗೆ ಠಕ್ಕರ್ ಕೊಡಲು ಡಾ.ಬಿ.ಆರ್.ಅಂಬೇಡ್ಕರ್ ದಿನದಂತೆ ಬಿಜೆಪಿಯು 20x7 for 2047 ಘೋಷವಾಕ್ಯದಡಿ ಬಿಜೆಪಿಯು ಸಂಕಲ್ಪ ಪತ್ರ ಹೆಸರಿನಡಿ ತನ್ನ 'ಪ್ರಣಾಳಿಕೆ ಬಿಡುಗಡೆ' ಮಾಡಿದೆ. ಇದು ಸದೃಢ ಭಾರತದ ಕಟ್ಟುವ ಪ್ರಣಾಳಿಕೆ ಆಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೊಂಡಾಡಿದ್ದಾರೆ.
ಹುಬ್ಬಳ್ಳಿಯಲ್ಲಿ ಭಾನುವಾರ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿ ಅಂಗವಾಗಿ ಎಸ್ SSS ರೈಲ್ವೆ ನಿಲ್ದಾಣದ ಹತ್ತಿರದ ಡಾ.ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ನಂತರ ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು.

ಅಧಿಕಾರಕ್ಕೆ ಬಾರದವರಿಂದ ಬೇಜವಾಬ್ದಾರಿ ಪ್ರಣಾಳಿಕೆ
ಬಿಜೆಪಿಯು ಜನರಿಂದ ಅಭಿಪ್ರಾಯ ಸಂಗ್ರಹಣೆ ಮಾಡಿಯೇ ಪ್ರಣಾಳಿಕೆ ತಯಾರಿಸಲಾಗಿದೆ. ಜವಾಬ್ದಾರಿಯಿಂದ ಪ್ರಣಾಳಿಕೆ ತಯಾರು ಮಾಡಿದ್ದೇವೆ. ದೇಶದಲ್ಲಿ ಯಾರು ಅಧಿಕಾರಕ್ಕೆ ಬರುವುದಿಲ್ಲವೋ ಅವರು ಅವರು ಬಹಳ ಬೇಜವಾಬ್ದಾರಿಯಿಂದ ಪ್ರಣಾಳಿಕೆ ಸಿದ್ಧಪಡಿಸಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಸಮಸ್ಯೆಗಳಿಗೆ ಪರಿಪೂರ್ಣ ಪರಿಹಾರ
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರವು 2047ಕ್ಕೆ ಭದ್ರ ಬುನಾದಿ ಹಾಕುವ, ಸದೃಢ ಭಾರತ ಕಟ್ಟುವ ನಿಟ್ಟಿನಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಈ ಪ್ರಣಾಳಿಕೆಯು ದೇಶಲ ಹಲವು ಸಮಸ್ಯೆಗಳಿಗೆ ಪರಿಪೂರ್ಣ ಪರಿಹಾರದ ಒದಗಿಸಲಿವೆ ಎಂದು ಅವರು ಅಭಿಪ್ರಾಯಪಟ್ಟರು.
ದೇಶದಲ್ಲಿನ ಶಾಶ್ವತ ಬಡತನ ನಿರ್ಮೂಲನೆ, ಸಮಾಜಿಕ ನ್ಯಾಯ, ಕೃಷಿಗೆ ಬೆಂಬಲ ನೀಡಲಾಗಿದ್ದು ಎಲ್ಲಾ ವರ್ಗದ ಅಭಿವೃದ್ಧಿ ಒಳಗೊಂಡಿರುವ ಪರಿಪೂರ್ಣ ಪ್ರಣಾಳಿಕೆಯನ್ನು ನಾವು ಬಿಡುಗಡೆ ಮಾಡಿದ್ದೇವೆ ಎಂದರು.

ದೇಶ-ಬದುಕು ಕಟ್ಟುವ ಗ್ಯಾರೆಂಟಿ
ದೇಶದ ಅಭಿವೃದ್ಧಿ ಪರವಾದ ಬಿಜೆಪಿ ಪ್ರಣಾಳಿಕೆಯನ್ನು ಬೇರೆಯವರ ಪ್ರಣಾಳಿಕೆಗೆ ಹೋಲಿಕೆ ಮಾಡುವುದು ಸರಿ ಅಲ್ಲಾ. ದಿನಗಳಲ್ಲಿ ಏನು ಸಾಧ್ಯತೆ ಇದೆ. ಅದರ ಆಧಾರದ ಮೇಲೆ ಪ್ರಣಾಳಿಕೆ ತಯಾರಿಸಿದ್ದೇವೆ. ಹೇಳಿದ್ದನ್ನು ಮಾಡೇಯೇ ತೀರುತ್ತೇವೆ. ಇದು ಪ್ರಧಾನಿ ನರೇಂದ್ರ ಮೋದಿವಯರ ಗ್ಯಾರೆಂಟಿ, ಶಾಶ್ವತ ಗ್ಯಾರೆಂಟಿ ನೀಡಿದ್ದು, ದೇಶ ಮತ್ತು ಬದುಕು ಕಟ್ಟುವ ಗ್ಯಾರೆಂಟಿ ಆಗಿದೆ ಅವರು ಬಿಜೆಪಿ ಪ್ರಣಾಳಿಕೆ ಬಗ್ಗೆ ಹರ್ಷ ವ್ಯಕ್ತಪಡಿಸಿದರು.
ಐದು ವರ್ಷಗಳ ಕಾಲ ಮುಕ್ತ ರೇಷನ್, ಆರೋಗ್ಯ, ನೀರು, ವಿದ್ಯುತ್ ಸೇರಿದಂತೆ ಜನರಿಗೆ ಬೇಕಾದ ಅತ್ಯಗತ್ಯ ಸೌಲಭ್ಯಗಳು ದೊರೆಯುವ, ಮೂಲಸೌಕರ್ಯ ಅಭಿವೃದ್ಧಿಯ ಹದಿನಾಲ್ಕು ಗ್ಯಾರೆಂಟಿಗಳನ್ನು ಜನರಿಗೆ ತಲುಪಿಸುತ್ತೇವೆ ಎಂದು ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದ ಪ್ರಧಾನಿ ಮೋದಿಯವರು ಬಿಜೆಪಿ ದೂರದೃಷ್ಟಿ ಕುರಿತು ಘೋಷಿಸಿದರು.












Click it and Unblock the Notifications