ರಣಜಿಯಲ್ಲಿ ಪ್ರಿಯಾಂಕ ಪಾಂಚಾಲ್ ದ್ವಿಶತಕ

By: ಶಂಭು, ಹುಬ್ಬಳ್ಳಿ
Subscribe to Oneindia Kannada

ಹುಬ್ಬಳ್ಳಿ, ನವೆಂಬರ್ 23: ಗುಜರಾತ್ ತಂಡವು ಆರಂಭಿಕ ಆಟಗಾರ ಪ್ರಿಯಾಂಕ ಪಾಂಚಾಲ್ ರ ದ್ವಿಶತಕದ ನೆರವಿನೊಂದಿಗೆ ಮುಂಬಯಿ ತಂಡದ ವಿರುದ್ಧ 437 ರನ್ ಗಳ ಬೃಹತ್ ಕಲೆ ಹಾಕಿತು.

ನಗರದ ರಾಜನಗರ ಕೆಎಎಸ್ಸಿಗೆ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ರಣಜಿ ಪಂದ್ಯದಲ್ಲಿ ಮಂಗಳವಾರ ಗುಜರಾತ್ ತಂಡದ ಪ್ರಿಯಾಂಕ 232 ರನ್ ಗಳಿಸಿ ತಮ್ಮ ಚೊಚ್ಚಲ ದ್ವಿಶತಕ ಪೂರೈಸಿದರು.

ಪಾಂಚಾಲ್ 623 ನಿಮಿಷ ಕ್ರೀಸ್ ನಲ್ಲಿದ್ದು 434 ಎಸೆತಗಳಲ್ಲಿ 28 ಬೌಂಡರಿ, 2 ಸಿಕ್ಸರ್ ಗಳೊಂದಿಗೆ 232 ರನ್ ಗಳಿಸಿ ಧವಲ್ ಕುಲಕರ್ಣಿ ಅವರ ಬೌಲಿಂಗ್ ಗೆ ಕ್ಲೀನ್ ಬೌಲ್ಡ್ ಅಗಿ ತಮ್ಮ ವಿಕೆಟ್ ಒಪ್ಪಿಸಿದರು.[ಹುಬ್ಬಳ್ಳಿಯಲ್ಲಿ ನ.21 ರಿಂದ ರಣಜಿ ಕ್ರಿಕೆಟ್ ಪಂದ್ಯ]

Backs up Panchal’s fine double-century

ತಮ್ಮ ದ್ವಿಶತಕದೊಂದಿಗೆ ಪಾಂಚಾಲ್ ರಾಜನಗರದ ಮೈದಾನದಲ್ಲಿ ಕ್ರಿಕೆಟ್ ನ ಮೂರನೇ ದ್ವಿಶತಕ ಹಾಗೂ ಗರಿಷ್ಠ ರನ್ ಗಳಿಸಿದ ಆಟಗಾರನೆಂಬ ದಾಖಲೆ ನಿರ್ಮಿಸಿದರು. 2014-15 ರಲ್ಲಿ ಕರ್ನಾಟಕ ತಂಡದ ವಿರುದ್ಧ ಹರ್ಯಾಣದ ಜಯಂತ್ ಯಾದವ್ (211), ಅಮಿತ ಮಿಶ್ರಾ (ಅಜೇಯ 202) ಧ್ವಿಶತಕ ಗಳಿಸಿದ್ದರು.

ಗುಜರಾತ್ ತಂಡವು ಒಟ್ಟು 160.1 ಓವರ್ ಗಳಲ್ಲಿ 437 ರ ನ್ ಗಳಿಸಿ ಆಲೌಟ್ ಆಯಿತು. ಗುಜರಾತ್ ತಂಡವನ್ನು ಮಣಿಸಲು ಮುಂಬಯಿ ತಂಡದ 10 ಅಟಗಾರರು ಬೌಲಿಂಗ್ ಮಾಡಿದರೂ ಕೇವಲ ವಿಶಾಲ ದಾಬೋಲ್ಕರ 6 ವಿಕೆಟ್ ಪಡೆಯಲು ಯಶಸ್ವಿಯಾದರು. ಉಳಿದಂತೆ ಜಸ್ಪ್ರೀತ್ ಬೂಮ್ರ 2, ಕರಣ ಪಟೇಲ್ 1 ವಿಕೆಟ್ ಪಡೆದರು.

ಯಾದವ್ ಆಸ್ಪತ್ರೆಗೆ:
ಮುಂಬಯಿ ತಂಡದ ಆಟಗಾರ ಸೂರ್ಯಕಾಂತ ಯಾದವ್ ಅನಾರೋಗ್ಯದಿಂದಾಗಿ ನಗರದ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಹವಾಮಾಣ ಬದಲಾವಣೆಯಿಂದ ಸೋಮವಾರವೇ ವಾಂತಿ-ಭೇದಿ ಶುರುವಾಗಿತ್ತೆನ್ನಲಾಗಿದೆ. ಮಂಗಳವಾರ ಚೇತರಿಸಿಕೊಂಡು ಮೈದಾನಕ್ಕಿಳಿದ್ದ ಯಾದವ್, ಮತ್ತೆ ವಾಂತಿ-ಭೇದಿಯಿಂದಾಗಿ ಬಳಲಾರಂಭಿಸಿದರು. ಕೂಡಲೇ ಅಂಬ್ಯುಲೆನ್ಸ್ ಮೂಲಕ ನಗರದ ಕಿಮ್ಸ್ ಗೆ ದಾಖಲಾಯಿಸಲಾಯಿತು. ಇನ್ನಿಬ್ಬರು ಆಟಗಾರರಿಗೆ ಕೂಡ ವಾಂತಿ-ಭೇದಿ ಶುರವಾಗಿದ್ದು, ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.

ಸ್ಕೋರ್ ವಿವರ:
ಗುಜರಾತ್ ಪ್ರಥಮ ಇನ್ನಿಂಗ್ಸ್
160.1 ಓವರ್, 437 ರನ್.
ಮುಂಬಯಿ ಪ್ರಥಮ ಇನ್ನಿಂಗ್ಸ್
21 ಓವರ್ 3 ವಿಕೆಟ್ ಗೆ 58 ರನ್.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
making a first innings total of 437, aided mainly by Priyank Panchal’s fine double-century (232, 28x4, 2x6), it reduced Mumbai to 58 for three at stumps on the second day.
Please Wait while comments are loading...