ಏರ್‌ ಇಂಡಿಯಾದಿಂದ ಹುಬ್ಬಳ್ಳಿ-ಮುಂಬೈ ನಡುವೆ ವಿಮಾನ ಸೇವೆ

Posted By: Gururaj
Subscribe to Oneindia Kannada

ಹುಬ್ಬಳ್ಳಿ, ನವೆಂಬರ್ 29 : ಉತ್ತರ ಕರ್ನಾಟಕ ಭಾಗದ ಜನರ ಬಹುದಿನಗಳ ಕನಸು ನನಸಾಗುತ್ತಿದೆ. ಏರ್ ಇಂಡಿಯಾ ಹುಬ್ಬಳ್ಳಿ-ಮುಂಬೈ ನಡುವೆ ವಿಮಾನ ಸೇವೆಯನ್ನು ಆರಂಭಿಸಲಿದೆ.

ಏರ್ ಇಂಡಿಯಾದ ಮುಖ್ಯಸ್ಥರಾಗಿ ಪ್ರದೀಪ್ ಸಿಂಗ್ ಖರೋಲ ನೇಮಕ

ಹುಬ್ಬಳ್ಳಿ ವಿಮಾನ ನಿಲ್ದಾಣ ನವೀಕರಣಗೊಂಡು, ಹೊಸ ರನ್‌ ವೇ ನಿರ್ಮಾಣಗೊಂಡಿದೆ. ಏರ್ ಇಂಡಿಯಾ ಡಿಸೆಂಬರ್ 15ರಿಂದ ಹುಬ್ಬಳ್ಳಿ-ಮುಂಬೈ ವಿಮಾನ ಸೇವೆಯನ್ನು ಆರಂಭಿಸಲಿದೆ. ವಾರದಲ್ಲಿ ಮೂರು ದಿನ ವಿಮಾನ ಹಾರಾಟ ನಡೆಸಲಿದೆ.

Air India to connect Hubballi-Mumbai

ಏರ್ ಬಸ್ 319 ನಂಬರ್‌ ವಿಮಾನ ಬೆಂಗಳೂರು-ಹುಬ್ಬಳ್ಳಿ-ಮುಂಬೈ ನಡುವೆ ಸಂಚಾರ ನಡೆಸಲಿದೆ. ಸದ್ಯ, ಸಂಚಾರ ನಡೆಸುತ್ತಿರುವ ಬೆಂಗಳೂರು-ಹುಬ್ಬಳ್ಳಿ-ಬೆಂಗಳೂರು ಎಟಿಆರ್ -72 ವಿಮಾನದ ಸಂಚಾರ ಎಂದಿನಂತೆ ಮುಂದುವರೆಯಲಿದೆ.

ಹುಬ್ಬಳ್ಳಿ, ಬೆಳಗಾವಿ ವಿಮಾನ ನಿಲ್ದಾಣ ಅಭಿವೃದ್ಧಿ

ಡಿಸೆಂಬರ್ 15ರಿಂದ ವಾರದಲ್ಲಿ ಮೂರು ದಿನ 120 ಪ್ರಯಾಣಿಕರು ಸಂಚಾರ ನಡೆಸಬಹುದಾದ ವಿಮಾನ ಬೆಂಗಳೂರು-ಹುಬ್ಬಳ್ಳಿ-ಮುಂಬೈ ನಡುವೆ ಹಾರಾಟ ನಡೆಸಲಿದೆ. ಪ್ರಯಾಣಿಕರ ಪ್ರತಿಕ್ರಿಯೆ ನೋಡಿಕೊಂಡು ಪ್ರತಿದಿನ ಸಂಚಾರ ನಡೆಸಲು ತೀರ್ಮಾನ ಕೈಗೊಳ್ಳಲಾಗುತ್ತದೆ.

ಎರಡು ಮತ್ತು 3ನೇ ಹಂತದ ನಗರಗಳ ವಿಮಾನ ನಿಲ್ದಾಣಗಳನ್ನು ಕೇಂದ್ರ ಸರ್ಕಾರ ಅಭಿವೃದ್ಧಿ ಮಾಡುತ್ತಿದೆ. ಮೊದಲ ಹಂತದಲ್ಲಿ ಕರ್ನಾಟಕದ ಹುಬ್ಬಳ್ಳಿ ವಿಮಾನ ನಿಲ್ದಾಣವನ್ನು 141 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಮಾಡಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Air India Limited will connect Bengaluru to Mumbai via Hubballi soon. New flight service may start from December 15, 2017. ಏರ್‌ ಇಂಡಿಯಾದಿಂದ ಹುಬ್ಬಳ್ಳಿ-ಮುಂಬೈ ನಡುವೆ ವಿಮಾನ ಸೇವೆ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ