ಹುಬ್ಬಳ್ಳಿ: ಪೊಲೀಸ್ ಸಬ್‌ ಇನ್ಸ್ ಪೆಕ್ಟರ್ ಕಚೇರಿ ಮೇಲೆ ಎಸಿಬಿ ದಾಳಿ

Written By: Basavaraj
Subscribe to Oneindia Kannada

ಹುಬ್ಬಳ್ಳಿ, ಜುಲೈ 28 : ನಗರದ ರೈಲ್ವೆ ಪೊಲೀಸ್‌ ಠಾಣೆಯ ಕ್ರೈಂ ವಿಭಾಗದ ಪೊಲೀಸ್ ಸಬ್‌ ಇನ್ಸ್ ಪೆಕ್ಟರ್ ಕೆ.ಮಲ್ಲೇಶ್‌ ಕಚೇರಿ ಮೇಲೆ ಇಂದು (ಶುಕ್ರವಾರ) ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಸಿದ ಆರೋಪದ ಮೇರೆಗೆ ಎಸಿಬಿ ಅಧಿಕಾರಿಗಳು ಇಂದು ಏಕಕಾಲಕ್ಕೆ ಸಬ್‌ ಇನ್ಸ್ ಪೆಕ್ಟರ್ ಕೆ.ಮಲ್ಲೇಶ್‌ ಅವರ ಬೆಂಗಳೂರು ಮತ್ತು ಹುಬ್ಬಳ್ಳಿ ಕಚೇರಿ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿದರು.

ACB raid on Hubballi Railway police station sub inspector Office

ಎಸಿಬಿ ಇನ್ಸ್ ಪೆಕ್ಟರ್ ಪ್ರಮೋದ ಯಲಿಗಾರ ನೇತೃತ್ವ ತಂಡ ದಾಳಿ ಮಾಡಿ ದಾಖಲೆಗಳನ್ನು ಪರಿಶೀಲನೆ ನಡೆಸಿದರು. ಮೂಲತಃ ಬೆಂಗಳೂರಿನವರಾದ ಕೆ.ಮಲ್ಲೇಶ ಅವರು ಹುಬ್ಬಳ್ಳಿ ರೈಲ್ವೆ ಪೊಲೀಸ್‌ ಠಾಣೆಯ ಕ್ರೈಂ ವಿಭಾಗದ ಸಬ್‌ ಇನ್ಸ್ ಪೆಕ್ಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಈ ಮಧ್ಯೆ ಕೆ.ಮಲ್ಲೇಶ ನಿನ್ನೆಯೇ ಬೆಂಗಳೂರಿಗೆ ತೆರಳಿದ್ದಾರೆ ಎನ್ನಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Illegal property allegations Karnataka Anti Corruption Bureau (ACB) raid on Hubballi Railway police station sub inspector K. Mallesh's Office on July 28th.
Please Wait while comments are loading...