ಹುಬ್ಬಳ್ಳಿಯಲ್ಲಿ ಎಬಿವಿಪಿ ಕಾರ್ಯಕರ್ತರಿಂದ ರಸ್ತೆ ತಡೆದು ಪ್ರತಿಭಟನೆ

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ, ಆಗಸ್ಟ್, 20- ಬೆಂಗಳೂರಿನ ಅಮ್ನೆಸ್ಟಿ ಇಂಟರ್ ನ್ಯಾಷನಲ್ ಸಂಸ್ಥೆ ಆಯೋಜಿಸಿದ ಕಾರ್ಯಕ್ರಮದಲ್ಲಿ ಭಾರತೀಯ ಸೇನೆಯ ವಿರುದ್ಧ ಘೋಷಣೆ ಕೂಗಿರುವುದನ್ನು ಖಂಡಿಸಿ, ನಗರದ ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಶನಿವಾರ ರಸ್ತೆ ತಡೆ ನಡೆಸಿ, ಪ್ರತಿಭಟಿಸಿದರು.

abvp

ಇಲ್ಲಿನ ಹೊಸೂರಿನಲ್ಲಿರುವ ಮಹಿಳಾ ವಿದ್ಯಾಪೀಠದಿಂದ ಎಬಿವಿಪಿ ಕಾರ್ಯಕರ್ತರು ಮೆರವಣಿಗೆಯಲ್ಲಿ ಆಗಮಿಸಿ, ನಗರದ ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ ಸಂಘಟನೆಗೊಂಡರು. ದೇಶಪ್ರೇಮಿಗಳಿಗೆ ಲಾಠಿ ಏಟು: ಖಂಡನೆ ಎಂದು ಘೋಷಣೆ ಕೂಗುತ್ತ ಬಂದ ವಿದ್ಯಾರ್ಥಿಗಳು, ದೇಶದ್ರೋಹಿಗಳನ್ನು ವಿರೋಧಿಸುವವರಿಗೆ ಲಾಠಿ ಚಾರ್ಜ್ ಮಾಡುವುದು ಎಂಥ ಕೃತ್ಯ ಎಂದು ಪ್ರಶ್ನಿಸಿದರು.['ಕೆಲವೊಮ್ಮೆ ಪೊಲೀಸರು ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ']

ದೇಶವಿರೋಧಿ ಘೋಷಣೆ ಕೂಗಿ ಅಕ್ಷಮ್ಯ ಅಪರಾಧ ಎಸಗಿದ ತಪ್ಪಿತಸ್ಥರ ವಿರುದ್ಧ ಇನ್ನೂ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಕಾಂಗ್ರೆಸ್ ನ ಸಿದ್ಧರಾಮಯ್ಯ ಸರಕಾರ ಮೊದಲು ತೊಲಗಲಿ ಎಂದು ಆಗ್ರಹಿಸಿದರು. ಸಾವಿರಕ್ಕೂ ಹೆಚ್ಚು ಸಂಖ್ಯೆಯ ಪೊಲೀಸ್ ಸಿಬ್ಬಂದಿಯನ್ನು ಬಂದೋಬಸ್ತ್ ಗೆ ನೇಮಿಸಲಾಗಿತ್ತು. ಸಾಕಷ್ಟು ಸಂಖ್ಯೆಯಲ್ಲಿ ಮಹಿಳಾ ಸಿಬ್ಬಂದಿ ಭದ್ರತೆಯಲ್ಲಿದ್ದರು.

police

ಗೋಮಾತೆ ಕ್ಷಮೆ ಕೇಳಿ: ಪ್ರಧಾನಿ ನರೇಂದ್ರ ಮೋದಿ ಗೋರಕ್ಷಣೆ ಮಾಡುವವರಲ್ಲಿ ಶೇ. 80 ರಷ್ಟು ನಕಲಿ ಗೋರಕ್ಷಕರಿದ್ದಾರೆ ಎಂಬ ಹೇಳಿಕೆ ರಾಷ್ಟ್ರೀಯ ಹಿಂದೂ ಆಂದೋಲನ ಸಂಘಟನೆ ಖಂಡಿಸಿದೆ.[ಆಗಸ್ಟ್ 27ರಂದು ಕರ್ನಾಟಕದಲ್ಲಿ ರೈಲು ಸಂಚಾರವಿಲ್ಲ]

ಸಂಘಟನೆಯ ಸದಸ್ಯರು ಶನಿವಾರ ನಗರದ ತಹಶೀಲ್ದಾರ್ ಅವರಿಗೆ ಈ ಕುರಿತು ಮನವಿ ಸಲ್ಲಿಸಿದರು.

organisation

ಸಂಘಟನೆಯ ಮುಖ್ಯಸ್ಥ ಅಶೋಕ ಭೋಜ ಮಾತನಾಡಿ, ಹಲವಾರು ಹಿಂದೂ ಸಂಘಟನೆಗಳು ಸೇರಿಕೊಂಡು ಇಂದು ನಾವು ಹಿಂದೂ ಆಂದೋಲನವನ್ನು ಮಾಡುತ್ತಿದ್ದೇವೆ. ಗೋರಕ್ಷಣೆಯ ಹೆಸರಲ್ಲಿ ಕಚೇರಿ ಮತ್ತು ಅಂಗಡಿ ತೆಗೆದಿರುವ ಸಮಾಜಘಾತುಕರ ಜಾತಕವನ್ನು ಹೊರ ತೆಗೆಯಿರಿ ಎಂದು ಪ್ರಧಾನಿ ಮೋದಿ ಅಪಾಯ ಮತ್ತು ಆಘಾತಕಾರಿ ಹೇಳಿಕೆ ನೀಡಿರುವುದು ಗೋರಕ್ಷಕರಿಗೆ ಭಯ ಮತ್ತು ಅಸಮಾಧಾನ ಮೂಡಿಸಿದೆ ಎಂದರು.[ದೇಶದ್ರೋಹದ ಘೋಷಣೆ: ಹುಬ್ಬಳ್ಳಿಯಲ್ಲಿ ಕಟ್ಟೆಯೊಡೆದ ಆಕ್ರೋಶ]

ಬಹುಸಂಖ್ಯಾತ ಗೋರಕ್ಷಕರನ್ನು ಅಪರಾಧಿಗಳು ಎಂದು ಹೇಳಿ ಅಲ್ಪಸಂಖ್ಯಾತರ ಓಲೈಕೆಗೆ ಮೋದಿ ಪ್ರಯತ್ನಿಸುತ್ತಿದ್ದಾರೆ. ಗೋ ರಕ್ಷಿಸಲು ಹೋದ ಹಲವಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಗೋ ರಕ್ಷಣೆಯಾಗಬೇಕಿದ್ದರೆ ಗೋವುಗಳ ಕಳ್ಳ ಸಾಗಾಣಿಕೆಯನ್ನು ತಡೆಯಬೇಕು ಎಂದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
ABVP protest against amnesti international in Hubballi. Participants condemn lathi charge against students.
Please Wait while comments are loading...