99% ಎಕ್ಸಿಟ್ ಪೋಲ್ ಒಂದೇ ರೀತಿ ಹೇಳಿವೆ: ಕಾಂಗ್ರೆಸ್‌ಗೆ ಜಗದೀಶ್ ಶೆಟ್ಟರ್ ಹೇಳಿದ್ದೇನು?
ಜೂನ್ 02: ಲೋಕಸಭಾ ಚುನಾವಣೆಯ ಎಲ್ಲ ಹಂತಗಳ ಮತದಾನ ಬಳಿಕ ಚುನಾವಣೋತ್ತರ ಸಮೀಕ್ಷೆಗಳು (Exit Poll 2024) ಬಹಿರಂಗವಾಗಿವೆ. ಎಲ್ಲ ಸಮೀಕ್ಷೆಗಳು ಶೇ.99 ರಷ್ಟು ಒಂದೇ ರೀತಿಯಾಗಿ ಹೇಳಿವೆ. ಆದರೆ ಕಾಂಗ್ರೆಸ್ ಇದನ್ನು ಒಪ್ಪದೇ ಸಬೂಬು ಹೇಳುತ್ತಿದೆ ಎಂದು ಬಿಜೆಪಿ ಸೀಟುಗಳು ಗೆಲ್ಲುವ ಬಗ್ಗೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.
ಹುಬ್ಬಳ್ಳಿಯಲ್ಲಿ ಭಾನುವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಸಮೀಕ್ಷೆಗಳಲ್ಲಿ ಕಾಂಗ್ರೆಸ್‌ಗೆ ಹಿನ್ನಡೆ ಎಂದು ಹೇಳಿದ್ದು, ಬಿಜೆಪಿ ಹೆಚ್ಚು ಸ್ಥಾನ ಗೆಲ್ಲಲಿದೆ ಎಂದು ತಿಳಿಸಿವೆ. ಬಹುತೇಕ ಎಲ್ಲ ಸಮೀಕ್ಷೆಗಳೂ ಒಂದೇ ರೀತಿಯಾಗಿ ಹೇಳಿವೆ. ನಮಗೆ ಎಕ್ಸಿಟ್ ಪೋಲ್ ನಲ್ಲಿ ಸ್ಪಷ್ಟ ಬಹುಮತ ಸಿಕ್ಕಿದೆ.

ಪ್ರಧಾನಿ ನರೇಂದ್ರ ಮೋದಿಯವರು ಮೂರನೇ ಭಾರಿಗೆ ಪ್ರಧಾನಿ ಆಗಬೇಕು ಎನ್ನುವುದು ದೇಶದ ಜನರ ಆಶಯವಾಗಿತ್ತು. ಬಿಜೆಪಿಯು 375 ಸೀಟುಗಳು ಇಲ್ಲವೇ 400 ಕ್ಕೂ ಹೆಚ್ಚು ಸ್ಥಾನ ಗೆಲ್ಲಬಹುದು. ಕಳೆದ ಬಾರಿ ಎಕ್ಸಿಟ್ ಪೋಟ್ ಕಾಂಗ್ರೆಸ್ ಪರವಾಗಿ ಹೇಳಿತ್ತು. ಈ ಬಾರಿ ಬಿಜೆಪಿಗೆ ಸ್ಪಷ್ಟ ಬಹುಮತ ಎಂದಿದೆ.
ಸಮೀಕ್ಷೆ ಒಪ್ಪದೇ ಕಾಂಗ್ರೆಸ್ ಏನೆನೋ ಹೇಳುತ್ತಿದೆ. ಸಬೂಬು ಕೊಡುತ್ತಿದೆ ಎಂದು ಕಾಂಗ್ರೆಸ್‌ಗೆ ಜಗದೀಶ್ ಶೆಟ್ಟರ್ ತಿರುಗೇಟು ನೀಡಿದರು. ಸಮೀಕ್ಷೆಗಳಲ್ಲಿ ಬಿಜೆಪಿಯೇ ಅಧಿಕಾರಕ್ಕೆ ಬರಲಿದೆ ಎಂದು ಎಲ್ಲಿಯೂ ಹೇಳಿಲ್ಲ. ಕಾಂಗ್ರೆಸ್ ನಾಯಕರು ಅದನ್ನು ಸುಳ್ಳ ಹೇಳುತ್ತಿದಾರೆ. ಕಾಂಗ್ರೆಸ್ ನಾಯಕರಿಗೆ ಸೋಲು ಒಪ್ಪಿಕೊಳ್ಳಲು ಆಗುತ್ತಿಲ್ಲ ಎಂದು ಕುಟುಕಿದರು.
ಬೆಳಗಾವಿಯಲ್ಲಿ ಹೆಚ್ಚು ಅಂತರದಿಂದ ಗೆಲುವು
ಗಡಿ ಜಿಲ್ಲೆ ಬೆಳಗಾವಿಯಲ್ಲಿ ಜರನ ಆಶೀರ್ವಾದದಿಂದ ನಾನು ಹೆಚ್ಚು ಮತಗಳ ಅಂತರದಿಂದ ಗೆಲುತ್ತೇನೆ. ಸಂವಿಧಾನ ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ. ಸಂವಿಧಾನ ಬದಲಾವಣೆ ಮಾಡುವ ಹಕ್ಕು ಯಾರಿಗೂ ಇಲ್ಲ. ಪ್ರೀಯಾಂಕ್ ಖರ್ಗೆ, ಕಾಂಗ್ರೆಸ್ ನವರು ಸುಳ್ಳು ಹೇಳತ್ತಿದ್ದಾರೆ ಎಂದು ಆರೋಪಿಸಿದರು.

ಅಧಿಕಾರದಲ್ಲಿದೆ ನಾಚಿಕೆ ಇಲ್ಲದ ಸರ್ಕಾರ
ಕರ್ನಾಟಕ ರಾಜ್ಯದಲ್ಲಿ ನಾಚಿಕೆಯಿಲ್ಲದ ಸರ್ಕಾರ ಅಧಿಕಾರದಲ್ಲಿದೆ. ವಾಲ್ಮೀಕಿ ನಿಗಮದ ಅಧಿಕಾರಿ ಆತ್ಮಹತ್ಯೆ ಪ್ರಕರಣದಲ್ಲಿ ಕೂಡಲೇ ಸಚಿವ ನಾಗೇಂದ್ರ ಅವರಿಂದ ರಾಜೀನಾಮೆ ಪಡೆಯಬೇಕು. ರಾಜೀನಾಮೆ ಪಡೆಯದೆ ಮೊಂಡುತನ ತೋರಿಸುತ್ತಿರುವ ಸರ್ಕಾರ ಮೊಂಡುತನ ಪ್ರದರ್ಶಿಸುತ್ತಿದೆ ಎಂದು ಅವರು ಜರಿದರು.
ಕರ್ನಾಟಕ ರಾಜ್ಯ ಕಾಂಗ್ರೆಸ್‌ನಲ್ಲಿನ ಆಂತರಿಕ ಕಲಹಗಳು ಲೋಕಸಭೆ ಚುನಾವಣೆ ಬಳಿಕ ಹೊರ ಬರಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಮಧ್ಯೆದ ಕಲಹ ಬಹಿರಂಗವಾಗಲಿದೆ. ಕಾಂಗ್ರೆಸ್ ನವರ ಅಸಮಾಧಾನದಿಂದಲೇ ಸರ್ಕಾರ ಪತನವಾಗಲಿದೆ.
ಯಾಗ ಮಾಡಿಸುವುದರಲ್ಲಿ ಡಿಕೆಶಿ ಎಕ್ಸ್‌ಪರ್ಟ್
ಬಿಜೆಪಿಯವರು ಆಪರೇಶನ್ ಕಮಲ ಮಾಡುವ ಅವಶ್ಯಕತೆ ಇಲ್ಲ. ಯಜ್ಞ ಯಾಗ ಮಾಡಿಸುವುದರಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅನುಭವ (ಎಕ್ಸಪರ್ಟ್) ಹೊಂದಿದ್ದಾರೆ. ಕೇರಳ ಅಲ್ಲ ಭೂಗತದಲ್ಲಿ ಹೋಗಿ ಯಾಗ ಮಾಡಿಸುವ ತಾಕತ್ತು ಡಿಕೆಶಿಗೆ ಇದೆ ಎಂದು ಲೇವಡಿ ಮಾಡಿದರು.
ಯಾಗದಿಂದ ಒಬ್ಬರಿಗೆ ತೊಂದರೆ ಆಗತ್ತದೆ ಎಂದರೆ ಎಲ್ಲರೂ ಅದನ್ನೆ ಮಾಡುತ್ತಿದ್ದರು. ನಾನು ಬಸವ ತತ್ವದವನು, ನನಗೆ ಯಾಗದ ಮೇಲೆ ನಂಬಿಕೆ ಇಲ್ಲ. ಡಿಕೆ ಶಿವಕುಮಾರ್ ಯಾಗ ಮಾಡಿಸೋದರಲ್ಲಿ ಎಕ್ಸಪರ್ಟ್ ಅದಕ್ಕೆ ಅವರೇ ಉತ್ತರ ಕೊಡಬೇಕು ಎಂದು ಸುದ್ದಿಗಾರರ ಕೆಲವು ಪ್ರಶ್ನೆಗಳಿಗೆ ಶೆಟ್ಟರ್ ಪ್ರತಿಕ್ರಿಯಿಸಿದರು.












Click it and Unblock the Notifications