ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜರ್ಮನಿಯ ಅಧಿಕಾರಿಗಳ ವಶದಲ್ಲಿ ಮುಂಬೈನ 7 ತಿಂಗಳ ಮಗು; ಹುಬ್ಬಳ್ಳಿಯಲ್ಲಿ ಜನಾಕ್ರೋಶ

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, ಸೆಪ್ಟೆಂಬರ್‌, 30: ಮುಂಬೈ ಮೂಲದ ಭವೇಶ್ ಷಾ, ಧಾರಾ ದಂಪತಿಗಳ 7 ತಿಂಗಳ ಮಗುವನ್ನು ಜರ್ಮನಿಯ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಈ ಮೂಲಕ ಅರಿಹಾ ಎಂಬ ಬಾಲಕಿಯನ್ನು ಭಾರತಕ್ಕೆ ವಾಪಸ್‌ ಕಳುಹಿಸಬೇಕು ಎಂದು ಒತ್ತಾಯಿಸಿ ಜೈನ ಸಮುದಾಯದ ವಿವಿಧ ಸಂಘಟನೆಗಳು ನಗರದಲ್ಲಿ ಬೃಹತ್ ರ್‍ಯಾಲಿ, ಪ್ರತಿಭಟನೆಯನ್ನು ನಡೆಸಿದವು.

ನಗರದ ಕಂಚಿಗಾರ ಗಲ್ಲಿಯಿಂದ ತಹಶೀಲ್ದಾರ್‌ ಕಚೇರಿಯವರೆಗೆ ನಡೆದ ರ್‍ಯಾಲಿಯಲ್ಲಿ ನೂರಾರು ಜೈನ ಸಮುದಾಯದ ಜನರು ಭಾಗವಹಿಸಿದ್ದರು. ಜರ್ಮನ್ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಈ ವೇಳೆ ಕೂಡಲೇ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಅರಿಹಾಳನ್ನು ವಾಪಾಸ್ ಭಾರತಕ್ಕೆ ಕರೆತರುವ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.

ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆ; ಸ್ಥಳೀಯರಿಂದ ಲಿಖಿತ ಅಭಿಪ್ರಾಯ ಸಂಗ್ರಹಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆ; ಸ್ಥಳೀಯರಿಂದ ಲಿಖಿತ ಅಭಿಪ್ರಾಯ ಸಂಗ್ರಹ

ಜರ್ಮನಿ ಅಧಿಕಾರಿಗಳ ಅಟ್ಟಹಾಸ; ಜನಾಕ್ರೋಶ

ಇನ್ನು ತಹಶೀಲ್ದಾರ್‌ ಕಚೇರಿ ಮುಂಭಾಗದಲ್ಲಿ "ಭೇಟಿ ಪಡಾವೋ, ಭೇಟಿ ಬಚಾವೋ" ಎಂದು ಪ್ರತಿಭಟನಾಕಾರರು ಘೋಷಣೆ ಕೂಗಿದ್ದಾರೆ. ಮುಂಬೈ ಮೂಲದ ಭವೇಶ್ ಷಾ ಎಂಬುವವರು ಜರ್ಮನಿಯ ಘಾಟ್ಲೋಡಿಯಾದಲ್ಲಿ ನೆಲೆಸಿರುವ ಭಾರತೀಯ ಮೂಲದ ಧಾರಾ ಅವರನ್ನು ವಿವಾಹವಾಗಿದ್ದಾರೆ. ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ಅವರು ಬರ್ಲಿನ್‌ನ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಇವರಿಗೆ ಅರಿಹಾ ಎಂಬ ಹೆಣ್ಣು ಮಗು ಜನಿಸಿದೆ. ಈ ಮಗು ಏಳು ತಿಂಗಳು ಇರುವಾಗ ಆರೋಗ್ಯ ಸಮಸ್ಯೆ ಉಂಟಾಗಿತ್ತು. ಆಗ ಜರ್ಮನಿಯ ವೈದ್ಯರಲ್ಲಿ ತೋರಿಸಿದಾಗ ಮಗುವಿಗೆ ಯಾವುದೇ ಸಮಸ್ಯೆಯಿಲ್ಲ ಎಂದು ಹೇಳಿದ್ದರು. ಆದರೆ ವೈದ್ಯರು ಎರಡು ದಿನಗಳ ನಂತರ ಜರ್ಮನಿಯ ಅಧಿಕಾರಿಗಳನ್ನು ಕರೆಸಿ ಮಗುವನ್ನು ಪರಿಶೀಲಿಸಿ ದಂಪತಿ ಮೇಲೆ ದೌರ್ಜನ್ಯದ ಆರೋಪ ಹೊರಿಸಿದ್ದಾರೆ. ಬಳಿಕ ಅರಿಹಾಳನ್ನು ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ.

7 month old baby of Mumbai in German authorities custody; Jain Community Protest

ಇದೀಗ ಭಾಷೆ ಸಮಸ್ಯೆಯಿಂದಾಗಿ ಅಧಿಕಾರಿಗಳಿಗೆ ಸರಿಯಾಗಿ ಮನವರಿಕೆ ಮಾಡಲು ದಂಪತಿ ವಿಫಲರಾಗಿದ್ದಾರೆ ಎನ್ನಲಾಗಿದೆ. ಕಾನೂನು ಹೋರಾಟ ನಡೆಸಿದ ದಂಪತಿ ಮೇಲಿನ ಆರೋಪ ತೆರೆವುಗೊಳಿಸಲಾಗಿದೆ ಎಂದು ತಿಳಿದುಬಂದಿದ್ದು, ಕೂಡಲೇ ವಶದಲ್ಲಿರುವ ಮಗುವನ್ನು ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿದರು. ಈ ಹಿನ್ನೆಲೆಯಲ್ಲಿ "ಅರಿಹಾ ಬಚಾವೋ" ಅಭಿಯಾನದ ಅನ್ವಯ ರ್‍ಯಾಲಿಯನ್ನು ಈಗಾಗಲೇ ಬೆಂಗಳೂರು ಸೇರಿದಂತೆ ದೇಶದ ವಿವಿಧೆಡೆ ನಡೆಸಲಾಗಿದ್ದು, ಅದರಂತೆ ಬೆಂಬಲವಾಗಿ ಹುಬ್ಬಳ್ಳಿಯಲ್ಲಿಯೂ ರ್‍ಯಾಲಿ ನಡೆಯಿತು.

ಈ ಸಂದರ್ಭದಲ್ಲಿ ಜೈನ ಸಮುದಾಯದ ಮುಖಂಡ ಮಹೇಂದ್ರ ಸಿಂಘಿ, ರಾಜೇಂದ್ರ ಬಿಳಗಿ, ಪಾಲಿಕೆ ಸದಸ್ಯ ನಿರಂಜನಯ್ಯ ಹಿರೇಮಠ, ಸಚಿನ ಕಟಾರೀಯಾ, ಮಹೇಶ ಬಂಡಾರಿ, ದಿಲಿಪ್ ಜೈನ್ ಸೇರಿದಂತೆ ಮುಂತಾದವರು ಇದ್ದರು.

English summary
7 month old baby of Mumbai based Bhavesh Shah and Dhara taken into custody by German authorities. Hubballi People expressed outrage against German authorities, Know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X